ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫ್ಲೋರಿಡಾದಲ್ಲಿ 'ನಂದಿನಿ ತುಪ್ಪ ಮತ್ತು ಸಿಹಿ ಉತ್ಪನ್ನಗಳ ಮಾರುಕಟ್ಟೆಗೆ ಬಿಡುಗಡೆ

ಜಗತ್ತಿನಾದ್ಯಂತ ಇರುವ ಕನ್ನಡಿಗರು ಸೇರಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಆಚರಿಸಿ ಹಾಗೂ ಉಳಿಸುವ ಉದ್ದೇಶದಿಂದ 'ನಾವು ವಿಶ್ವ ಕನ್ನಡಿಗರು' ಸಂಘಟನೆ ವತಿಯಿಂದ ಯುಎಸ್‌ಎ ಯ ಫ್ಲೋರಿಡಾದಲ್ಲಿ 'ನಾವಿಕ ವಿಶ್ವ ಕನ್ನಡ ಸಮಾವೇಶ -2025' ಅನ್ನು ಆ.31ರವರೆಗೆ ನಡೆಸಲಾಗುತ್ತಿದೆ. ಆ.29 ರಿಂದ ಸಮಾವೇಶ ಆರಂಭವಾಗಿರುತ್ತದೆ.

ಫ್ಲೋರಿಡಾದಲ್ಲಿ 'ನಂದಿನಿ ತುಪ್ಪ ಮತ್ತು ಸಿಹಿ ಉತ್ಪನ್ನಗಳ ಬಿಡುಗಡೆ

-

Ashok Nayak Ashok Nayak Aug 30, 2025 6:18 PM

ಬೆಂಗಳೂರು: ಕರುನಾಡ ಪ್ರತಿಷ್ಠಿತ ಮತ್ತು ಹೆಮ್ಮೆಯ ನಂದಿನಿ ಉತ್ಪನ್ನಗಳ ಬಗ್ಗೆ ಜಾಗತಿಕ ಮಟ್ಟ ದಲ್ಲಿ ಪ್ರಚಾರ ಮತ್ತು ಮಾರಾಟಕ್ಕೆ ಈ ಸಮಾವೇಶವು ಉತ್ತಮ ವೇದಿಕೆಯಾಗಲಿರುವ ನಿಟ್ಟಿನಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಬಿ, ರವರು ಭಾಗವಹಿಸಿದ್ದು, ಕಳೆದ ಶುಕ್ರವಾರ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ 'ನಂದಿನಿ ತುಪ್ಪ ಮತ್ತು ಸಿಹಿ ಉತ್ಪನ್ನಗಳನ್ನು ಅಮೇರಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಪರಿಚಯಿಸಲಾಯಿತು.

ಜಗತ್ತಿನಾದ್ಯಂತ ಇರುವ ಕನ್ನಡಿಗರು ಸೇರಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಆಚರಿಸಿ ಹಾಗೂ ಉಳಿಸುವ ಉದ್ದೇಶದಿಂದ 'ನಾವು ವಿಶ್ವ ಕನ್ನಡಿಗರು' ಸಂಘಟನೆ ವತಿಯಿಂದ ಯುಎಸ್‌ಎ ಯ ಫ್ಲೋರಿಡಾದಲ್ಲಿ 'ನಾವಿಕ ವಿಶ್ವ ಕನ್ನಡ ಸಮಾವೇಶ -2025' ಅನ್ನು ಆ.31ರವರೆಗೆ ನಡೆಸಲಾಗುತ್ತಿದೆ. ಆ.29 ರಿಂದ ಸಮಾವೇಶ ಆರಂಭವಾಗಿರುತ್ತದೆ.

ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ...ಇದು ಭಾಗ್ಯ !

ವ್ಯವಸ್ಥಾಪಕ ನಿರ್ದೇಶಕರು ಕೆಎಂಎಫ್ ರವರು ನಾವಿಕ ವಿಶ್ವ ಕನ್ನಡ ಸಮಾವೇಶ-2025 ಅನ್ನು ಉದ್ದೇಶಿಸಿ ಮಾತನಾಡುತ್ತಾ, ಈಗಾಗಲೇ ಮೆ. ಕೂಲು ಸೂಪರ್‌ಫುಡ್ಸ್ ಪೈ ಲಿ. ರವರನ್ನು ನಂದಿನಿ ಉತ್ಪನ್ನಗಳಾದ ತುಪ್ಪ, ಪೇಡ, ಮೈಸೂರ್ ಪಾಕ್ ಹಾಗೂ ಬೆಣ್ಣೆ ರಫ್ತುಗಾಗಿ ನೇಮಿಸಲಾಗಿದ್ದು ಸೆಪ್ಟೆಂಬರ್ 2025 ರಿಂದ ಅಮೆರಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳು ದೊರೆಯಲಿವೆ ಎಂದು ತಿಳಿಸುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು.

ಡೇರಿ ಉತ್ಪನ್ನಗಳ ಆಮದುದಾರರೊಂದಿಗೆ ಪರಸ್ಪರ ಸಂವಾದವನ್ನು ನಡೆಸಿ, ಈಗಾಗಲೇ ನಂದಿನಿ ಉತ್ಪನ್ನಗಳನ್ನು ಸಿಂಗಾಪೂರ್, ದುಬೈ ಮಾಲೀನ್ಸ್ ಹಾಗೂ ಬುನೈ ದೇಶಗಳಿಗೆ ರಫ್ತು ಮಾಡಲಾಗು ತ್ತಿದ್ದು, ವಿಶ್ವದೆಲ್ಲೆಡೆ ಮಾರಾಟ ವಿಸ್ತರಣೆಗೆ ಉದ್ದೇಶಿಸಿರುವ ಬಗ್ಗೆ ತಿಳಿಸಿದರು.

ಜೊತೆಗೆ, ನಾವಿಕ ವಿಶ್ವ ಕನ್ನಡ ಸಮಾವೇಶ-2025 ರಲ್ಲಿ ನಂದಿನಿ ಸ್ಟಾಲ್ ಪ್ರಸ್ತುತ ಪಡಿಸಿ ಸಮಾವೇ ಶದಲ್ಲಿ ಭಾಗವಹಿಸಿರುವ ಗಣ್ಯರು ಹಾಗೂ ಅತಿಥಿಗಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನ ಗಳ ಪ್ರದರ್ಶನದೊಂದಿಗೆ, ಉತ್ಪನ್ನಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಸಹ ಕೈಗೊಳ್ಳ ಲಾಗಿರುತ್ತದೆ.