ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಸ್‌ಪ್ರೀತ್‌ ಬುಮ್ರಾ or ಮಿಚೆಲ್‌ ಸ್ಟಾರ್ಕ್‌ ನಡುವೆ ಉತ್ತಮ ವೇಗಿಯನ್ನು ಆರಿಸಿದ ಸ್ಪೆನ್ಸರ್‌ ಜಾನ್ಸನ್‌!

ಪ್ರಸ್ತುತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ವೇಗಿಗಳ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್‌ ಬುಮ್ರಾ ಹಾಗೂ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ ಇದ್ದಾರೆ. ಈ ಇಬ್ಬರ ನಡುವೆ ಅತ್ಯುತ್ತಮವಾಗಿ ಯಾರ್ಕರ್‌ ಹಾಕಬಲ್ಲ ವೇಗಿಯನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಆಟಗಾರ ಸ್ಪೆನ್ಸರ್‌ ಜಾನ್ಸನ್‌ ಆರಿಸಿದ್ದಾರೆ.

ಬುಮ್ರಾ-ಸ್ಟಾರ್ಕ್‌ ನಡುವೆ ಉತ್ತಮ ವೇಗಿಯನ್ನು ಆರಿಸಿದ ಸ್ಪೆನ್ಸರ್‌ ಜಾನ್ಸನ್!

ಜಸ್‌ಪ್ರೀತ್‌ ಬುಮ್ರಾ-ಮಿಚೆಲ್‌ ಸ್ಟಾರ್ಕ್‌ ನಡುವೆ ಅತ್ಯುತ್ತಮ ವೇಗಿಯನ್ನು ಆರಿಸಿದ ಸ್ಪೆನ್ಸರ್‌ ಜಾನ್ಸನ್‌. -

Profile Ramesh Kote Aug 30, 2025 6:18 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪ್ರಮುಖ ವೇಗಿಗಳಾಗಿರುವ ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನ ಮಿಚೆಲ್‌ ಸ್ಟಾರ್ಕ್‌ (Mitchell Starc) ನಡುವೆ ಪರಿಣಾಮಕಾರಿಯಾಗಿ ಯಾರ್ಕರ್‌ ಹಾಕಬಲ್ಲ ಅತ್ಯುತ್ತಮ ವೇಗಿಯನ್ನು ಆಸ್ಟ್ರೇಲಿಯಾ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮಾಜಿ ವೇಗಿ ಸ್ಪೆನ್ಸರ್‌ ಜಾನ್ಸನ್‌ ಆರಿಸಿದ್ದಾರೆ. ಈ ಇಬ್ಬರೂ ಅತ್ಯುತ್ತಮ ವೇಗಿಗಳಾಗಿದ್ದು, ಜಸ್‌ಪ್ರೀತ್‌ ಬುಮ್ರಾಗಿಂತ ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಉತ್ತಮವಾಗಿದ್ದಾರೆಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಹಾಗೂ ಮಿಚೆಲ್‌ ಸ್ಟಾರ್ಕ್‌ ಅವರು ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ ಅತ್ಯುತ್ತಮ ವೇಗದ ಬೌಲರ್‌ಗಳಾಗಿದ್ದಾರೆ. ಇದರಲ್ಲಿ ಈ ಇಬ್ಬರೂ ಕೂಡ ಬ್ಯಾಟ್ಸ್‌ಮನ್‌ ಆಡಲು ಸಾಧ್ಯವಾಗದ ಮಾರಕ ಯಾರ್ಕರ್‌ಗಳನ್ನು ಹಾಕಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. 2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ 457 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಿತ್ತಿದ್ದಾರೆ ಹಾಗೂ 2010ರಿಂದ ಇಲ್ಲಿಯವರೆಗೂ ಮಿಚೆಲ್‌ ಸ್ಟಾರ್ಕ್‌ ಅವರು 725 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ಆಸೀಸ್‌ ವೇಗಿ 400 ಟೆಸ್ಟ್‌ ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು.

ಇಎಸ್‌ಪಿಎನ್‌ನ ರ್ಯಾಪಿಡ್‌ ಸಂದರ್ಶನದಲ್ಲಿ ಮಾತನಾಡಿದ ಸ್ಪೆನ್ಸರ್‌ ಜಾನ್ಸನ್‌ಗೆ ಜಸ್‌ಪ್ರೀತ್‌ ಬುಮ್ರಾ ಹಾಗೂ ಮಿಚೆಲ್‌ ಸ್ಟಾರ್ಕ್‌ ಅವರ ನಡುವೆ ಅತ್ಯುತ್ತಮ ವೇಗಿಯನ್ನು ಆರಿಸಿ ಎಂದು ಕೇಳಲಾಯಿತು. ಈ ವೇಳೆ ಆಸೀಸ್‌ ಮಾಜಿ ವೇಗಿ ತಮ್ಮದೇ ದೇಶದ ವೇಗಿಯಾದ ಮಿಚೆಲ್‌ ಸ್ಟಾರ್ಕ್‌ ಅವರನ್ನು ಆಯ್ಕೆ ಮಾಡಿದ್ದಾರೆ.

Asia Cup 2025: ಬಿಸಿಲಿನ ತಾಪ ಹೆಚ್ಚಳ; ಏಷ್ಯಾಕಪ್‌ ಪಂದ್ಯಗಳ ಸಮಯದಲ್ಲಿ ಬದಲಾವಣೆ

29ರ ಪ್ರಾಯದ ಸ್ಪೆನ್ಸರ್‌ ಜಾನ್ಸನ್ ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೆಗಾ ಹರಾಜಿನಲ್ಲಿ 2.80 ಕೋಟಿ ರೂ. ಗಳಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರು ಆಡಿದ್ದ 4 ಪಂದ್ಯಗಳಿಂದ ಕೇವಲ ಒಂದೇ ಒಂದು ವಿಕೆಟ್‌ ಕಿತ್ತಿದ್ದರು. ಹಾಗಾಗಿ ಅವರು ಮುಂದಿನ 2026ರ ಐಪಿಎಲ್‌ ಟೂರ್ನಿಯ ನಿಮಿತ್ತ ಕೆಕೆಆರ್‌ ಸ್ಪೆನ್ಸರ್‌ ಜಾನ್ಸನ್‌ ಅವರನ್ನು ಉಳಿಸಿಕೊಳ್ಳುವುದು ಅನುಮಾನ.

ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ರಾಜೀನಾಮೆ ನೀಡಿದ ನಂತರ ನೈಟ್ ರೈಡರ್ಸ್ ಕೂಡ ತಮ್ಮ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸಲಿದೆ. ಅಜಿಂಕ್ಯ ರಹಾನೆ ಕೂಡ ನಾಯಕನಾಗಿ ಮೊದಲ ವರ್ಷದಲ್ಲಿ ಆ ಕೆಲಸವನ್ನು ಮಾಡಲು ವಿಫಲರಾಗಿದ್ದಾರೆ. ಹಾಗಾಗಿ ಕೆಕೆಆರ್‌ ಅವರನ್ನು ಮುಂದಿನ ಆವೃತ್ತಿಯಲ್ಲಿ ನಾಯಕನನ್ನಾಗಿ ಉಳಿಸಿಕೊಳ್ಳುವ ಬಗ್ಗೆ ಯಾವುದೇ ಖಚಿತತೆ ಇಲ್ಲ.

Hockey Asia Cup: ಹರ್ಮನ್‌ಪ್ರೀತ್ ಹ್ಯಾಟ್ರಿಕ್‌ ಗೋಲು; ಏಷ್ಯಾ ಕಪ್‌ನಲ್ಲಿ ಭಾರತ ಶುಭಾರಂಭ

ಆಸ್ಟ್ರೇಲಿಯಾದ ವೇಗಿ ಸ್ಪೆನ್ಸನ್‌ ಜಾನ್ಸನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ಒಡಿಐಗಳು ಹಾಗೂ ಎಂಟು ಟಿ20ಐ ಒಂದ್ಯಗಳನ್ನು ಆಡಿದ್ದಾರೆ. ಆದರೆ, ಅವರು ಇನ್ನೂ ಆಸ್ಟ್ರೇಲಿಯಾ ತಂಡದಲ್ಲಿ ತಮ್ಮ ಸ್ಥಾನವನ್ನು ಇನ್ನೂ ಗಟ್ಟಿ ಮಾಡಿಕೊಂಡಿಲ್ಲ. 2025ರ ಐಸಿಸಿ ಚಾಂಪಿಯನ್ಸ್‌ ಟೂರ್ನಿಯಲ್ಲಿ ಜಾನ್ಸನ್‌, ಕೊನೆಯ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು.