ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಂಜಾಬ್‌ ಸಿಎಂ ಭಗವಂತ್ ಮಾನ್ ಕುಡಿದು ಸದನಕ್ಕೆ ಆಗಮಿಸಿದ್ದಾರೆ: ಪ್ರತಿಪಕ್ಷಗಳ ಆರೋಪ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯ ಸೇವನೆ ಮಾಡಿರಬೇಕು. ಅವರನ್ನು ತಕ್ಷಣ ಪರೀಕ್ಷೆಗೆ ಒಳಪಡಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ ಘಟನೆ ಪಂಜಾಬ್ ವಿಧಾನಸಭೆಯಲ್ಲಿ ಶುಕ್ರವಾರ ನಡೆದಿದೆ. ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಸ್ಪೀಕರ್‌ಗೆ ಈ ಕುರಿತು ಪತ್ರ ಬರೆದು ಮಾನ್ ಅವರ ನಡವಳಿಕೆ ತೊಂದರೆಯನ್ನು ಉಂಟು ಮಾಡುತ್ತಿರುವುದಾಗಿ ಹೇಳಿದ್ದಾರೆ.

ಸಂಗ್ರಹ ಚಿತ್ರ

ಪಂಜಾಬ್: ಪ್ರತಿಪಕ್ಷಗಳ ನಾಯಕರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab chief minister Bhagwant Mann) ಅವರಿಗೆ ಮದ್ಯ ಸೇವನೆ ಪರೀಕ್ಷೆ ನಡೆಸಲು ಒತ್ತಾಯಿಸಿದ ಘಟನೆ ನಡೆದಿದೆ. ಪಂಜಾಬ್ ವಿಧಾನಸಭೆಯಲ್ಲಿ (Punjab assembly) ಶುಕ್ರವಾರ ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಮತ್ತು ಪ್ರತಿಪಕ್ಷ ಕಾಂಗ್ರೆಸ್ (Congress) ಶಾಸಕರು ಸದನದ ಬಾವಿಗಿಳಿದು ಗದ್ದಲ ಎಬ್ಬಿಸಿದ್ದರಿಂದ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಸ್ಪೀಕರ್‌ಗೆ ಪತ್ರ ಬರೆದು ಮಾನ್ ಮತ್ತು ಆಪ್ ಶಾಸಕರನ್ನು ತಕ್ಷಣ ಡೋಪ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದು, ಇದನ್ನು ಸ್ಪೀಕರ್ ತಿರಸ್ಕರಿಸಿದರು.

ಪಂಜಾಬ್ ವಿಧಾನ ಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಡೋಪ್ ಪರೀಕ್ಷೆಗೆ ಒಳಪಡಿಸಲು ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದಂತೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಪ್ರತಿಪಕ್ಷ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಗದ್ದಲ ಎಬ್ಬಿಸಿದ್ದರು. ಆದರೆ ವಿರೋಧ ಪಕ್ಷದ ಬೇಡಿಕೆಯನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಮಾನ್ ಅವರ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸ್ಪೀಕರ್‌ಗೆ ಪತ್ರ ಬರೆದಿದ್ದರು.

Gudibande News: ಅರ್ಹ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯಲಿ: ಹೆಚ್.ಪಿ.ರಾಮನಾಥ್

ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಬಜ್ವಾ ಅವರು, ಮಾನ್ ಅವರ ನಡೆ ತೊಂದರೆದಾಯಕವಾಗಿದೆ. ಅವರು ಗೌರವಾನ್ವಿತ ಸಂಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಹೇಳಿದ್ದಾರೆ.

ಆರೋಪ ತಿರಸ್ಕರಿಸಿದ ಆಪ್

ವಿರೋಧ ಪಕ್ಷ ಕಾಂಗ್ರೆಸ್ ಮಾಡಿರುವ ಆರೋಪವನ್ನು ಆಪ್ ತಿರಸ್ಕರಿಸಿದ್ದು, ಈ ಕುರಿತು ಹೇಳಿಕೆ ನೀಡಿರುವ ಪಂಜಾಬ್ ಎಎಪಿ ಮುಖ್ಯಸ್ಥ ಮತ್ತು ಕ್ಯಾಬಿನೆಟ್ ಸಚಿವ ಅಮನ್ ಅರೋರಾ, ಇದು ಆಧಾರರಹಿತ ಮತ್ತು ಕ್ಷುಲ್ಲಕ. ಅವರ ಈ ಹೇಳಿಕೆಗಳು ಕಾರ್ಯಕರ್ತರ ಗಾಯಗಳಿಗೆ ಉಪ್ಪು ಸುರಿಸುವುದಾಗಿದೆ ಮತ್ತು ಸದನದ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.



ಡೋಪ್ ಪರೀಕ್ಷೆ ನಡೆಸುವುದಿಲ್ಲ

ಪಂಜಾಬ್ ಬಿಜೆಪಿಯ ಮುಖ್ಯಸ್ಥ ಸುನಿಲ್ ಜಾಖರ್ ಅವರು ಕೂಡ ರಾಜ್ಯ ವಿಧಾನಸಭೆಯಲ್ಲಿರುವ ಎಲ್ಲಾ ಶಾಸಕರಿಗೆ ಪರೀಕ್ಷೆಗಳನ್ನು ನಡೆಸುವಂತೆ ಕರೆ ನೀಡಿದ್ದು, ಕುಡಿದ ಮತ್ತಿನಲ್ಲಿ ಸರ್ಕಾರವು ವಿಧಾನಸಭೆಗೆ ಬಂದರೆ ಅದು ಸಂವಿಧಾನಕ್ಕೆ ಮಾತ್ರವಲ್ಲ ಪ್ರಜಾಪ್ರಭುತ್ವದ ದೇವಾಲಯಕ್ಕೂ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಇಂದಿನ ವಿಶೇಷ ಅಧಿವೇಶನದ ಪ್ರಾಮುಖ್ಯತೆಯನ್ನು ಗಮನಿಸಿದರೆ ಎಲ್ಲಾ ನಾಯಕರು ಖಂಡಿತವಾಗಿಯೂ ಡೋಪ್ ಪರೀಕ್ಷೆಗೆ ಒಳಗಾಗಬೇಕು. ಎಲ್ಲಾ ನಾಯಕರ ಉಸಿರು ವಿಶ್ಲೇಷಕ ಪರೀಕ್ಷೆಯನ್ನು ಮಾಡಿದರೆ ಅನಂತರ ಬಹುಮತ ಸಾಬೀತುಪಡಿಸುವ ಅಗತ್ಯವಿಲ್ಲ ಅವರು ತಿಳಿಸಿದರು.

ಈ ನಡುವೆ ಮಾತನಾಡಿರುವ ಆಪ್ ನಾಯಕ ಬಲ್ತೇಜ್ ಪನ್ನು, ಬಿಜೆಪಿಗೆ ಶಾಸಕರಿಲ್ಲ, ಅವರು ವಿಧಾನಸಭೆಯೊಳಗೆ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ್ದು, ಅವರು ನಕಲಿ ಸ್ಥಾಪನೆ ಮಾಡುವರು. ಕಾಂಗ್ರೆಸ್‌ಗೆ ಕಾರ್ಮಿಕರಿಗೂ ಕಾರ್ಮಿಕ ದಿನಾಚರಣೆಗೂ ಯಾವುದೇ ಸಂಬಂಧವಿಲ್ಲ. ಪಂಜಾಬ್ ಈಗ ಅತ್ಯಂತ ಸುರಕ್ಷಿತ ರಾಜ್ಯವಾಗಿದೆ. ಮಣಿಪುರದಲ್ಲಿ ಏನಾಗುತ್ತಿದೆ? ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ? ಎಂದು ಪ್ರಶ್ನಿಸಿದರು.

ರಾಘವ್ ಚಡ್ಡಾ ಅವರೊಂದಿಗೆ ಇತ್ತೀಚೆಗೆ ಬಿಜೆಪಿ ಸೇರಿರುವ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಕೂಡ ಮಾನ್ ಮೇಲೆ ಮಾತಿನ ದಾಳಿ ನಡೆಸಿದ್ದು, ಮಾನ್ ಕುಡಿದು ಗುರುದ್ವಾರ ಸಾಹಿಬ್‌, ದೇವಸ್ಥಾನ, ಲೋಕಸಭೆ, ಸರ್ಕಾರಿ ಸಭೆಗಳಿಗೆ ಹೋಗುತ್ತಾರೆ ಎಂದು ಆರೋಪಿಸಿದ್ದಾರೆ.

ಶಿರೋಮಣಿ ಅಕಾಲಿ ದಳದ ಸುಖ್‌ಬೀರ್ ಸಿಂಗ್ ಬಾದಲ್ ಅವರು ಕೂಡ ಮಾನ್ ಅವರ ನಡವಳಿಕೆಯನ್ನು ಪ್ರಶ್ನಿಸಿದ್ದು, ಇದು ಪ್ರಜಾಪ್ರಭುತ್ವದ ದೇವಾಲಯದಲ್ಲಿ ಸಭ್ಯತೆಯ ಉಲ್ಲಂಘನೆ ಮತ್ತು ಅವರನ್ನು ಆಯ್ಕೆ ಮಾಡಿದ ಪಂಜಾಬ್ ಜನರಿಗೆ ಗಂಭೀರ ಅವಮಾನವಾಗಿದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಭಾ ತ್ಯಾಗ ಮಾಡಿದ ಮೇಲೆ ಮಾನ್ ನೇತೃತ್ವದ ಆಪ್ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ಅಂಗೀಕರಿಸಿದೆ.

ಏಕೆ ಗೊಂದಲ ?

ಪಂಜಾಬ್ ವಿಧಾನಸಭೆಯಲ್ಲಿ ಭಗವಂತ್ ಮಾನ್ ಅವರು ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಸಿಂಗ್ ಖೈರಾ ಮತ್ತು ಪ್ರತಿಪಕ್ಷ ಶಾಸಕರು ಸದನದಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರಿಂದ ಈ ಗದ್ದಲ ಪ್ರಾರಂಭವಾಗಿತ್ತು. ಪಂಜಾಬ್ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ, ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು ವೇತನ ಪರಿಷ್ಕರಣೆಯ ಕುರಿತು ಅಧಿಕೃತ ನಿರ್ಣಯವನ್ನು ಓದುತ್ತಿದ್ದಾಗ ಖೈರಾ ಅವರು ಮೊಬೈಲ್ ಫೋನ್ ಬಳಸಿದ್ದಾರೆ ಎಂದು ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಆಗ ಸ್ಪೀಕರ್ ಅವರು ಸದನದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ನಿರ್ಣಯವನ್ನು ಎಚ್ಚರಿಕೆಯಿಂದ ಆಲಿಸಲು ಕಾಂಗ್ರೆಸ್ ನಾಯಕರಿಗೆ ಹೇಳಿದ್ದು, ಇದು ಉದ್ವಿಗ್ನತೆಯನ್ನು ಉಂಟು ಮಾಡಿತ್ತು. ಮಾನ್ ಮತ್ತು ಖೈರಾ ನಡುವೆ ಮಾತಿನ ಚಕಮಕಿ ನಡೆದು ಸದನದ ಕಲಾಪಗಳಿಗೆ ಅಡ್ಡಿ ಉಂಟಾಯಿತು.

ವಿದ್ಯಾ ಇರ್ವತ್ತೂರು

View all posts by this author