ಚಂಡೀಗಢ: ಮಾಜಿ ಆಮ್ ಆದ್ಮಿ ಪಾರ್ಟಿಯ (Aam Admi Party) ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರ ಹೆಸರು ಮತದಾರರ ಪಟ್ಟಿಯಿಂದ ಹೊರಬಿದ್ದಿರುವುದು ದೇಶದ ರಾಜಕೀಯ ಅಂಗಳದಲ್ಲಿ ತೀವ್ರ ಸಂಚಲನವನ್ನು ಉಂಟುಮಾಡಿದೆ. ಇದರ ಹಿಂದೆ ಆಮ್ ಆದ್ಮಿ ಪಾರ್ಟಿ ಸರ್ಕಾರದ ರಾಜಕೀಯ ಸೇಡಿನ ರಾಜಕಾರಣ’ ಕೆಲಸ ಮಾಡಿದೆ ಎಂದು ರಾಘವ್ ಚಡ್ಡಾ ಆರೋಪಿಸಿದ್ದಾರೆ. ಚಡ್ಡಾ, 2022ರಲ್ಲಿ ಪಂಜಾಬ್‌ನಿಂದ ಎಎಪಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿ ಇತ್ತೀಚಿಗೆ ಪಕ್ಷದೊಳಗಿನ ಕೆಲ ಆತಂಕರಿಕ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಆಗಸ್ಟ್ 13ರಂದು ಪ್ರಕಟವಾದ ಎಎಸ್‌ಡಿಡಿ (ಗೈರುಹಾಜರು, ಸ್ಥಳಾಂತರಗೊಂಡವರು, ಮೃತ ಮತ್ತು ನಕಲಿ ಮತದಾರರು) ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು ಕಂಡುಬಂದಿದೆ. ಅವರ ಹೆಸರಿನ ಮುಂದೆ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂಬ ಕಾರಣವನ್ನು ನಮೂದಿಸಲಾಗಿದೆ. ಕರಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾದ 20.66 ಲಕ್ಷ ಮತದಾರರಲ್ಲಿ ಇವರೂ ಒಬ್ಬರೂ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಚಡ್ಡಾ, ತಮ್ಮ ಮತದಾರರ ಗುರುತಿನ ಚೀಟಿ ಮೊಹಾಲಿಯಲ್ಲಿ ನೋಂದಾಯಿತವಾಗಿದೆ. ನನ್ನನ್ನು ಏಕೆ ‘ಸ್ಥಳಾಂತರಗೊಂಡವರು’ ಎಂದು ನಮೂದಿಸಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿಗಳು ಇನ್ನು ಕರಡು ಹಂತದಲ್ಲಿವೆ ಮತ್ತು ಅವರು ಈಗಾಗಲೇ ಎಸ್‌ಎಸ್‌ಐಆರ್ ಮಾರ್ಗಸೂಚಿಗಳ ಅಡಿಯಲ್ಲಿ ಒದಗಿಸಲಾದ ಪರಿಹಾರಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
‘ಇದು ಕೇವಲ ಕಚೇರಿಯ ತಪ್ಪು ಎಂದು ಕಾಣುತ್ತಿಲ್ಲ, ಇದರ ಹಿಂದೆ ರಾಜಕೀಯ ಷಡ್ಯಂತ್ರವಿದ್ದಂತೆ ಕಾಣುತ್ತಿದೆ. ಪಕ್ಷವನ್ನು ತೊರೆದವರ ವಿರುದ್ಧ ಆಮ್ ಆದ್ಮಿ ಪಕ್ಷದ ಸರ್ಕಾರವು ರಾಜ್ಯದ ಆಡಳಿತ ಯಂತ್ರವನ್ನು ಬಳಸುತ್ತಿದೆ. ನಾವು ಪಕ್ಷವನ್ನು ತೊರೆದಾಗಿನಿಂದ ಕೆಲವರು ಕೋಪದಿಂದ ಕುದಿಯುತ್ತಿದ್ದಾರೆ.’ ಎಂದು ಚಡ್ಡಾ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ. 37 ವರ್ಷದ ರಾಘವ್ ಚಡ್ಡಾ 6 ಜನ ರಾಜ್ಯಸಭಾ ಸದಸ್ಯರೊಂದಿಗೆ ಏಪ್ರಿಲ್‌ನಲ್ಲಿ ಆಮ್ ಆದ್ಮಿ ಪಕ್ಷವನ್ನು ತೊರದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಕುರಿತು ಮಾತನಾಡಿದ್ದ ಚಡ್ಡಾ ,‘ಎಎಪಿ ಪಕ್ಷವು ತನ್ನ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ಸಂಪೂರ್ಣವಾಗಿ ವಿಮುಖವಾಗಿದೆ’ ಎಂದು ಹೇಳಿದ್ದರು. ‘ಭ್ರಷ್ಟ ಆಮ್ ಆದ್ಮಿ ಪಕ್ಷವನ್ನು ತೊರೆದಾಗಿನಿಂದಲೂ ಅದರ ನಾಯಕತ್ವವು ತೀವ್ರ ಆಕ್ರೋಶಗೊಂಡಿದೆ. ಮೌನವಾಗಿರಲು ನಿರಾಕರಿಸಿದ್ದ ನಮ್ಮ ವಿರುದ್ಧ ಪಂಜಾಬ್ ಪೊಲೀಸರು ಮತ್ತು ಪಂಜಾಬ್ ಸರ್ಕಾರದ ಆಡಳಿತ ಯಂತ್ರವನ್ನು ಅದು ನಮ್ಮ ಹಿಂದೆ ಬಿಟ್ಟಿದೆ’ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ತಿರುಗೇಟು
ರಾಘವ್ ಚಡ್ಡಾ ಅವರ ಆರೋಪಗಳನ್ನು ಆಮ್ ಆದ್ಮಿ ಸಂಪೂರ್ಣವಾಗಿ ತಳ್ಳಿಹಾಕಿದೆ. ‘ಮತತದಾರರ ಪಟ್ಟಿಯ ಪರಿಶೀಲನೆ ಮತ್ತು ಪರಿಷ್ಕರಣೆಯನ್ನು ಕೇಂದ್ರ ಚುನಾವಣಾ ಆಯೋಗ ಸಡೆಸುತ್ತದೆಯೇ ಹೊರತು ರಾಜ್ಯ ಸರ್ಕಾರವಲ್ಲ. ಇದರಲ್ಲಿ ಪಂಜಾಬ್ ಸರ್ಕಾರದ ಯಾವುದೇ ಪಾತ್ರವಿಲ್ಲ’ ಎಂದು ಸ್ಪಷ್ಟ ಪಡಿಸಿದೆ. ‘ರಾಘವ್ ಚಡ್ಡಾ ಪಂಜಾಬ್‌ನಲ್ಲಿ ವಾಸಿಸುತ್ತಿಲ್ಲ, ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕ ಸತ್ಯ. ದೆಹಲಿಗೆ ತೆರಳಿದ ಮೇಲೆ ಮತದಾರರ ಗುರುತಿನ ಚೀಟಿಯನ್ನು ನಿಯಮಾನುಸಾರ ಬದಲಾಯಿಸಿಕೊಳ್ಳುವುದು ಅವರ ಹೊಣೆಗಾರಿಕೆಯಾಗಿತ್ತು. ಅದಕ್ಕೆ ಎಎಪಿ ಅಥವಾ ಪಂಜಾಬ್ ಸರ್ಕಾರವನ್ನು ಹೊಣೆ ಮಾಡುವುದು ಮೂರ್ಖತನ ಎಂದಿದೆ. ‘ಚಡ್ಡಾ ಅವರು ದೆಹಲಿಯ ರಾಜೇಂದಂರ್ ನಗರದಲ್ಲಿ ಹಿಂಬಾಗಿಲಿನಿಂದ ಮತದಾರರ ಚೀಟಿ ಪಡೆಯಲು ಯತ್ನಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ತನಿಕೆ ನಡೆಸಬೇಕು’ ಎಂದು ಎಎಪಿ ಪ್ರತ್ಯಾರೋಪ ಮಾಡಿದೆ.
ಬೈಕ್‌ನಲ್ಲಿ ಬಂದು ಗುಂಡಿನ ದಾಳಿ; ಪಂಜಾಬ್‌ನಲ್ಲಿ ಆಮ್ ಆದ್ಮಿ ನಾಯಕನ ಬರ್ಬರ ಹತ್ಯೆ
ಸದ್ಯ ಪಂಜಾಬ್ ಮತದಾರರ ಪಟ್ಟಿಯಿಂದ ಚಡ್ಡಾ ಅವರ ಹೆಸರನ್ನು ತೆಗೆದುಹಾಕಿರುವುದರಿಂದ, ಪಂಜಾಬ್‌ನಿಂದ ರಾಜ್ಯಸಭಾ ಸಂಸದರಾಗಿ ಮುಂದುವರಿಯುವ ಅವರ ಅರ್ಹತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ . ರಾಜ್ಯಸಭಾ ಅಭ್ಯರ್ಥಿಯು ತಾವು ಪ್ರತಿನಿಧಿಸುವ ರಾಜ್ಯದಲ್ಲಿ ಮತದಾರರಾಗಿ ನೋಂದಾಯಿತರಾಗಿರಬೇಕು ಎಂಬ ಷರತ್ತುನ್ನು ‘ಜನ ಪ್ರಾತಿನಿಧ್ಯ ಕಾಯ್ದೆ’ಗೆ ೨೦೦೩ರಲ್ಲಿ ತಂದ ತಿದ್ದುಪಡಿ ಮೂಲಕ ರದ್ದುಗೊಳಿಸಲಾಗಿದೆ.