Caste Census: ಜಾತಿ ಗಣತಿ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ; ಕೇಂದ್ರಕ್ಕೆ ಬೆಂಬಲ ನೀಡುವುದಾಗಿ ಘೋಷಣೆ
Rahul Gandhi: ಕೇಂದ್ರ ಸರ್ಕಾರ ಜನ ಗಣತಿಯಲ್ಲಿ ಜಾತಿ ಗಣನೆ ಮಾಡುವುದಾಗಿ ಘೋಷಿಸಿದ್ದು, ಇದನ್ನು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ವಾಗತಿಸಿದರು. ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಹುಲ್ ಗಾಂಧಿ.

ಹೊಸದಿಲ್ಲಿ: ಕೇಂದ್ರ ಸರ್ಕಾರ ಜನ ಗಣತಿಯಲ್ಲಿ ಜಾತಿ ಗಣನೆ ಮಾಡುವುದಾಗಿ ಘೋಷಿಸಿದ್ದು, ಇದನ್ನು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸ್ವಾಗತಿಸಿದರು. ʼʼಇದು ಮೂಲತಃ ಕಾಂಗ್ರೆಸ್‌ನ ಯೋಜನೆ. ಇದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ. ಆದಷ್ಟು ಬೇಗ ಕೇಂದ್ರ ಗಣತಿ ಕೈಗೊಳ್ಳಲಿʼʼ ಎಂದು ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ (ಏ. 30) ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಜಾತಿ ಗಣತಿ (Caste Census) ನಡೆಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ರಾಹುಲ್ ಗಾಂಧಿ ಮೊದಲ ಪ್ರತಿಕ್ರಿಯೆ ನೀಡಿದರು. ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ʼʼಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ನಡೆಸಿದ ಜಾತಿ ಗಣತಿ ಮಾದರಿ. ಇದು ರಾಷ್ಟ್ರ ಮಟ್ಟದ ಗಣತಿಗೆ ನೀಲ ನಕ್ಷೆಯಾಗಲಿದೆ. ಇತ್ತ ಬಿಹಾರದಲ್ಲಿಯೂ ಜಾತಿ ಗಣತಿ ನಡೆದಿದೆ. ಆದರೆ ಇವೆರಡೂ ರಾಜ್ಯಗಳ ಗಣತಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆʼʼ ಎಂದು ತಿಳಿಸಿದರು.
ʼʼಸಂಸತ್‌ನಲ್ಲಿ ನಾವು ಜಾತಿ ಗಣತಿ ನಡೆಸುವಂತೆ ಪ್ರಸ್ತಾವಿಸಿದ್ದೇವೆ. ಮೀಸಲಾತಿಯ ಶೇ. 50ರಷ್ಟು ಗಡಿಯನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದೇವೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಕೇವಲ 4 ಜಾತಿ ಇದೆ ಎಂದಿದ್ದರು. ಆದರೆ ಇದು ಹೇಗೆ ಬದಲಾಯ್ತು ಎನ್ನುವುದು ತಿಳಿದಿಲ್ಲ. ಇದೀಗ ಸುಮಾರು 11 ವರ್ಷಗಳ ಬಳಿಕ ಜಾತಿ ಗಣತಿ ಘೋಷಣೆಯಾಗಿದೆʼʼ ಎಂದರು.
🚨Rahul Gandhi on #castesensus
— Nabila Jamal (@nabilajamal_) April 30, 2025
"We welcome the Caste Census announced by the govt. Telangana is a model, we are more than happy to help the govt design it at the national level"
-We want cap of 50% to be removed
-Article 15(5)- we demand reservation in private institutions… pic.twitter.com/3vYYuE2PBe
ಯಾವಾಗ ಗಣತಿ ನಡೆಸಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ʼʼಜಾತಿ ಗಣತಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ತೆಲಂಗಾಣ ಮಾದರಿ ಬಳಸಿ ಜಾತಿ ಗಣತಿಯ ಯೋಜನೆಯನ್ನು ರೂಪಿಸಲು ನೆರವು ನೀಡುತ್ತೇವೆ. ಆದರೆ ಸರ್ಕಾರ ಯಾವಾಗ, ಯಾವ ರೀತಿ ಗಣತಿ ನಡೆಸಲಿದೆ ಎನ್ನುವುದರ ಬಗ್ಗೆ ಬಗ್ಗೆ ಮಾಹಿತಿ ನೀಡಬೇಕುʼʼ ಎಂದು ಆಗ್ರಹಿಸಿದರು.
"ಜಾತಿ ಜನಗಣತಿಯ ಮೂಲಕ ಹೊಸ ಅಭಿವೃದ್ಧಿ ಮಾದರಿಯನ್ನು ಜಾರಿಗೆ ತರುವುದು ನಮ್ಮ ಉದ್ದೇಶ" ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Caste Census: ಬಿಗ್ ಬ್ರೇಕಿಂಗ್! ದೇಶಾದ್ಯಂತ ಜಾತಿಗಣತಿ ನಡೆಸಲು ಮೋದಿ ಸರ್ಕಾರ ನಿರ್ಧಾರ
ಕೇಂದ್ರ ಸರ್ಕಾರ ಹೇಳಿದ್ದೇನು?
ʼʼಪ್ರತ್ಯೇಕ ಜಾತಿಗಣತಿ ನಡೆಸುವ ಅವಶ್ಯಕತೆ ಇಲ್ಲ. ಜನಗಣತಿಯ ಜತೆಗೇ ಅದನ್ನು ನಡೆಸಲಾಗುತ್ತದೆ. ಈ ಹಿಂದಿನ ಸರ್ಕಾರಗಳು ಜಾತಿ ಗಣತಿಯಲ್ಲಿ ಸಾಕಷ್ಟು ರಾಜಕೀಯ ನಡೆದಿವೆ. ನಾವು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲ್ಲ. ಕಾಂಗ್ರೆಸ್ ಕೇವಲ ಜಾತಿಗಣತಿಯನ್ನು ಮಾಡಿತ್ತು. ಹಲವಾರು ರಾಜ್ಯಗಳಲ್ಲಿ ನಡೆಸಲಾದ ಜಾತಿ ಜನಗಣತಿ ಕಾರ್ಯವು ಅವೈಜ್ಞಾನಿಕ" ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು. ʼʼ2022ರಲ್ಲಿ, ಇಂಡಿಯಾ ಒಕ್ಕೂಟದಲ್ಲಿದ್ದ ಬಿಹಾರ ಸರ್ಕಾರ ಸ್ವತಂತ್ರ ಭಾರತದಲ್ಲಿ ಎಲ್ಲ ಜಾತಿ ಗಣತಿ ನಡೆಸಿದ ಮೊದಲ ರಾಜ್ಯವಾಗಿದೆ. ಆದರೆ ಅದು ಸರಿಯಾದ ಕ್ರಮವಹಿಸಿ ನಡೆದಿರುವ ಜಾತಿಗಣತಿ ಅಲ್ಲʼʼ ಎಂದು ಆರೋಪಿಸಿದ್ದರು.