ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಅವರ ತಾಯಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress MP Rahul Gandhi) ಅವರು ಹಾಸ್ಯನಟ ಪುಲ್ಕಿತ್ ಮಣಿ (standup comic Pulkit Mani) ಅವರೊಂದಿಗೆ ಸೇರಿ ಇಂದೋರ್‌ನಲ್ಲಿ (Indore) ಸೆಪ್ಟೆಂಬರ್ 19 ರಂದು ನೀಡಿರುವ ಪ್ರದರ್ಶನ ಬಿಜೆಪಿ (BJP) ನಾಯಕರನ್ನು ಕೆರಳಿಸಿದೆ. ಮಧ್ಯಪ್ರದೇಶ ಹಾಗೂ ದೇಶದ ಇತರ ಭಾಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ 'ಛಾತ್ರೋನ್ ಕಿ ಗೂಂಜ್' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಅವರೊಂದಿಗೆ ಸಂವಾದವನ್ನು ಕೂಡ ನಡೆಸಿದರು. ಇದರ ವಿಡಿಯೊ ತುಣುಕು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೊ ತುಣುಕಿನಲ್ಲಿ ಪುಲ್ಕಿತ್ ಮಣಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆಯನ್ನು ಅನುಕರಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರ ತಾಯಿಯ ಕುರಿತಾದ ಉಲ್ಲೇಖಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ದೆಹಲಿ SIR: ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಜ್ರಿವಾಲ್‌ಗೆ ಚುನಾವಣಾ ಆಯೋಗದಿಂದ ನೋಟೀಸ್
ಈ ಪ್ರದರ್ಶನದ ಕುರಿತು ಬಿಜೆಪಿ ನಾಯಕರು ತೀವ್ರ ಟೀಕೆ ಮಾಡಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್ ಅವರು, ಈ ಕಾರ್ಯಕ್ರಮವು ಅಸಭ್ಯ ಮತ್ತು ಅಶ್ಲೀಲ ಭಾಷೆಯ ಪ್ರಯೋಗದಿಂದ ಕೂಡಿದೆ ಎಂದು ಹೇಳಿದ್ದು, ಇದು ರಾಹುಲ್ ಗಾಂಧಿ ಅವರಿಗೆ ಶೋಭೆ ತರುವುದಿಲ್ಲ. ಅವರು ಇಂತಹ ಅಸಭ್ಯ ಸಂಸ್ಕೃತಿಯನ್ನು ಬೆಂಬಲಿಸುತ್ತಿರುವುದೇ ಅವರು ಮತ್ತು ಕಾಂಗ್ರೆಸ್ ಪಕ್ಷವು ಯುವಜನತೆಯ ಮನಗೆಲ್ಲುವಲ್ಲಿ ವಿಫಲವಾಗಲು ಕಾರಣವಾಗಿದೆ. ಯಾವುದೇ ಸಂಸ್ಕಾರಯುತ ಮತ್ತು ವಿವೇಕಯುತ ವ್ಯಕ್ತಿಗೆ ಇಂತಹ ಅಸಭ್ಯ ಮತ್ತು ಕೀಳುಮಟ್ಟದ ವರ್ತನೆಗಳು ಹಾಸ್ಯಾಸ್ಪದವೆನಿಸುವುದಿಲ್ಲ ಮೋದಿಯವರ ತಾಯಿಯನ್ನು ಅಪಮಾನಿಸಿ ಅವರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಗೌರವಯುತವಾಗಿ ವೃದ್ಧರೊಬ್ಬರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿಕೊಟ್ಟರೆ ಇದಕ್ಕೆ ತದ್ವಿರುದ್ಧವಾಗಿ ರಾಹುಲ್ ಗಾಂಧಿ ಅವರು ಹಿರಿಯರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಮೋದಿ ಅವರ ದಿವಂಗತ ತಾಯಿಯನ್ನು ಅಪಹಾಸ್ಯ ಮಾಡಲು ಈ ಕಾರ್ಯಕ್ರಮವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಅವಕಾಶ ನೀಡಿದ್ದಾರೆ. ಇದು ನಾಚಿಕೆಗೇಡಿನ ಮತ್ತು ಅಸಹ್ಯಕರ ಸಂಗತಿ ಎಂದು ಹೇಳಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೂಡ ಈ ಘಟನೆಯನ್ನು ಟೀಕಿಸಿದರು.
ರಾಹುಲ್ ಗಾಂಧಿಯವರ 'ಛತ್ರೋನ್ ಕಿ ಗೂಂಜ್' ಸರಣಿಯ ಐದನೇ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ "ವ್ಯವಸ್ಥೆ ವರ್ಸಸ್ ವಿದ್ಯಾರ್ಥಿಗಳು" ಎಂಬ ವಿಷಯದ ಕುರಿತು ಸಂವಾದ ನಡೆಸಲಾಯಿತು. ಈ ಸಂದರ್ಭದಲ್ಲಿ ಖಾಲಿ ಹುದ್ದೆಗಳು, ನೇಮಕಾತಿ ವಿಳಂಬ ಮತ್ತು ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು. ಶಿಕ್ಷಕರ ನೇಮಕಾತಿ, ಬುಡಕಟ್ಟು ಹಾಸ್ಟೆಲ್‌ಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರ ಗಮನ ಸೆಳೆದರು.
ದೆಹಲಿ ವಿವಿ ಚುನಾವಣೆ ಗೆದ್ದ ABVP ಅಭ್ಯರ್ಥಿಗಳಿಗೆ ಸಚಿವ ಪ್ರಲ್ಹಾದ್ ಜೋಶಿ ಅಭಿನಂದನೆ
ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಕೂಡ ಇದನ್ನು ಟೀಕಿಸಿದ್ದು, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರ ಕಟುವಾದ ದ್ವೇಷದ ರಾಜಕಾರಣವೇ ಕಾಂಗ್ರೆಸ್ ಪಕ್ಷ ಮತ್ತು ಅದರ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ದೆಹಲಿ ವಿಶ್ವವಿದ್ಯಾಲಯದ ಚುನಾವಣೆಯಲ್ಲಿ ಸೋಲಲು ಮುಖ್ಯ ಕಾರಣ ಎಂದರು.