ರಾಜಸ್ಥಾನ: ಜೈಪುರದ (Jaipur) ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿರುವ (Rampura Kanwarpura village) ಶಿಥಿಲಗೊಂಡ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ರಾಜಸ್ಥಾನ ಸರ್ಕಾರ ಆದೇಶಿಸಿದೆ. ಶಾಲಾ ದುರಸ್ತಿಗೆ ಆಗ್ರಹಿಸಿ ಅಭಿಯಾನ ನಡೆಸುತ್ತಿರುವ ಸಿಜೆಪಿ ಕಾರ್ಯಕರ್ತರು ( CJP protest) ಶುಕ್ರವಾರ ಇಲ್ಲಿಗೆ ಭೇಟಿ ನೀಡಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಶನಿವಾರ ತಡರಾತ್ರಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸುವಂತೆ ಸರ್ಕಾರ ಆದೇಶಿಸಿದೆ. ಸೆಪ್ಟೆಂಬರ್ 1ರಂದು ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (DMFT) ನಿಂದ ಆಗಸ್ಟ್ 13ರಂದು 12 ಲಕ್ಷ ರೂಪಾಯಿ ಆರ್ಥಿಕ ಅನುಮೋದನೆ ನೀಡಲಾಗಿದ್ದು, ಶಾಸಕರ ನಿಧಿಯಿಂದ 6 ಲಕ್ಷ ರೂಪಾಯಿ ಸೇರಿ ಹೊಸ ಕಟ್ಟಡಕ್ಕೆ ಒಟ್ಟು 18 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ.
ತಪ್ಪಿದ ಭಾರೀ ದುರಂತ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಬಾಲಕ್ಕೆ ಡಿಕ್ಕಿ, ಪ್ರಯಾಣಿಕರು ಸೇಫ್
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯವನ್ನು ಪುನರ್ ರಚಿಸಲು ವಿಶಾಲವಾದ ಯೋಜನೆಯನ್ನು ರಾಜಸ್ಥಾನ ಸರ್ಕಾರ ಘೋಷಿಸಿದ ಬಳಿಕ ರಾಂಪುರ ಶಾಲೆಗೂ ಅನುದಾನ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ಕಚೇರಿ ತಿಳಿಸಿದೆ.
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಸರ್ಕಾರಿ ಶಾಲೆಗಳನ್ನು ಸುರಕ್ಷಿತ, ಸುಸಜ್ಜಿತ, ಆಧುನಿಕ, ಅಂತರ್ಗತ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ಕಲಿಕಾ ಕೇಂದ್ರಗಳಾಗಿ ಪರಿವರ್ತಿಸಲು 12,500 ಕೋಟಿ ರೂಪಾಯಿ ಅಂದಾಜು ವೆಚ್ಚದ ಮೂರು ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.
2026- 27 ರಿಂದ 2028- 29 ರವರೆಗಿನ ಹಣಕಾಸು ವರ್ಷಗಳಲ್ಲಿ ರಾಜ್ಯದ ಎಲ್ಲಾ 41 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಲಾಗುವುದು. 3,587 ಹೊಸ ಶಾಲಾ ಕಟ್ಟಡಗಳಿಗೆ ಸುಮಾರು 2,487.75 ಕೋಟಿ, 83,783 ಹೊಸ ತರಗತಿ ಕೊಠಡಿಗಳಿಗೆ 8,378.30 ಕೋಟಿ, 22,589 ಶಾಲೆಗಳಲ್ಲಿ ಪ್ರಮುಖ ದುರಸ್ತಿಗಳಿಗೆ 1,129.45 ಕೋಟಿ ಮತ್ತು 13,616 ಹೊಸ ಶೌಚಾಲಯ ಸಂಕೀರ್ಣಗಳಿಗೆ 340.40 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ 3,006.34 ಕೋಟಿ ರೂಪಾಯಿ ಮೌಲ್ಯದ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಅನುಮೋದಿಸಲಾಗಿದೆ. ಇವೆಲ್ಲವೂ ಟೆಂಡರ್ ಮತ್ತು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಸರ್ಕಾರ ತಿಳಿಸಿದೆ.
ಇದರೊಂದಿಗೆ 2026ರ ಡಿಸೆಂಬರ್ ವೇಳೆಗೆ ಸರ್ಕಾರಿ ಶಾಲೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು ಸುಮಾರು 1,087 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದರಲ್ಲಿ 9,000 ಸ್ಮಾರ್ಟ್ ತರಗತಿ ಕೊಠಡಿಗಳಿಗೆ ಸುಮಾರು 107 ಕೋಟಿ ರೂಪಾಯಿ, 80,000 ಟ್ಯಾಬ್ಲೆಟ್‌ಗಳಿಗೆ 100 ಕೋಟಿ ರೂಪಾಯಿ ಮತ್ತು 7,000 ಐಸಿಟಿ ಲ್ಯಾಬ್‌ಗಳಿಗೆ ಸುಮಾರು 880 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಇದು ಸಿಜೆಪಿ ಅಭಿಯಾನದ ಗೆಲುವು ಎಂದು ಬಣ್ಣಿಸಿರುವ ಸಿಜೆಪಿ ಸಹ-ಸಂಚಾಲಕ ಅಶುತೋಷ್ ರಾಂಕಾ ಅವರು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸಿಜೆಪಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯ ಅನುಷ್ಠಾನವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಹೇಳಿದರು.
ಕಾಕ್ರೋಚ್ ಪಕ್ಷ ಬಯಸುವುದು ಇದನ್ನೇ. ರಾಜಸ್ಥಾನದಾದ್ಯಂತ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿ ಮೇಲ್ದರ್ಜೆಗೇರಿಸುವವರೆಗೆ ಸಿಜೆಪಿ ತನ್ನ "ಶಾಲಾ ಟೀಕ್ ಕರೋ" ಅಭಿಯಾನವನ್ನು ಮುಂದುವರಿಸುತ್ತದೆ, ದೇಶಾದ್ಯಂತ ಸರ್ಕಾರಗಳು ಇದೇ ರೀತಿಯ ಘೋಷಣೆಗಳನ್ನು ಮಾಡುವವರೆಗೆ ಕಾಯುತ್ತಿದ್ದೇವೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಮಾವನ ಉಂಗುರ ಎರಡು ಆಭರಣ ಕಂಪನಿಗಳಿಗೆ ಆರ್ಡರ್, ಸೆ.15ರಂದು ಚಾಲನೆ
ರಾಂಪುರ ಕನ್ವರ್‌ಪುರದಲ್ಲಿ ಸರ್ಕಾರಿ ಶಾಲೆಗೆ ಕಾಕ್ರೋಚ್ ನಾಯಕರು ಭೇಟಿ ನೀಡಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಇದರಿಂದ ಹಲವಾರು ಮಂದಿ ಗಾಯಗೊಂಡಿದ್ದರು. ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಲಾಗಿದ್ದು ಎನ್ನುವ ಆರೋಪ ಕೇಳಿ ಬಂದಿದೆ. ದಾಳಿಕೋರರು ಸ್ಥಳೀಯ ಶಾಸಕ ಕೈಲಾಶ್ ವರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ.