Election Commission: ಚುನಾವಣಾಧಿಕಾರಿ ರಾಜೀವ್ ಕುಮಾರ್ ಅವಧಿ ಮುಕ್ತಾಯ: ಶೀಘ್ರದಲ್ಲೇ ಹೊಸ ಚುನಾವಣಾ ಆಯುಕ್ತರ ನೇಮಕ
ಮುಖ್ಯ ಚುನಾವಣಾ ಅಧಿಕಾರಿಯಾದ ರಾಜೀವ್ ಕುಮಾರ್ ಅವರ ಅವಧಿ ಮುಕ್ತಾಯವಾಗಿದ್ದು, ಸದ್ಯದಲ್ಲೇ ಹೊಸ ಚುನಾವಣಾ ಆಯುಕ್ತರ ನೇಮಕವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಕೊನೆಯಲ್ಲಿ ಬಿಹಾರ ಮತ್ತು 2026 ರಲ್ಲಿ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಕೇರಳ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ.ಹಾಗಾಗಿ ಶೀಘ್ರದಲ್ಲೇ ಹೊಸ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯಾಗಲಿದೆ.

ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರಾದ(Chief Election Commissioner) ರಾಜೀವ್ ಕುಮಾರ್(Rajiv Kumar) ಅವರ ಅವಧಿ ಮುಕ್ತಾಯವಾಗಿದ್ದು, ಸದ್ಯದಲ್ಲೇ ಹೊಸ ಚುನಾವಣಾ ಆಯುಕ್ತರ ನೇಮಕವಾಗಲಿದೆ(Election Commission) ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಕೊನೆಯಲ್ಲಿ ಬಿಹಾರ ಮತ್ತು 2026 ರಲ್ಲಿ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಕೇರಳ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಹಾಗಾಗಿ ಶೀಘ್ರದಲ್ಲೇ ಹೊಸ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯಾಗಲಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದು, ಅವರು ಮಂಗಳವಾರ(ಫೆ.18) ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಕುಮಾರ್ ಅವರು ಸದ್ಯದಲ್ಲೇ ನಿವೃತ್ತಿಯಾಗಲಿದ್ದು, ಹೊಸ ಚುನಾವಣಾ ಆಯುಕ್ತರ ನೇಮಕವಾಗಲಿದೆ. ಫೆಬ್ರುವರಿ 19 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಅರ್ಜಿಗಳ ಕುರಿತು ವಿಚಾರಣೆ ನಡೆಸಲಿದೆ. ರಾಜೀವ್ ಕುಮಾರ್ ಅವರ ಅಧಿಕಾರವಧಿಯಲ್ಲಿ ಮತಯಂತ್ರ ಪೆಟ್ಟಿಗೆಯ ವಿರುದ್ಧ ವಿಪಕ್ಷಗಳು ದೂರುಗಳನ್ನು ನೀಡಿದ್ದವು.
The CEC, Rajiv Kumar, is set to retire soon. Before that, will he answer the burning questions of electoral integrity? #GeneralElection2024 pic.twitter.com/6okyuaFC1s
— Itishree Panda (@pitishree515) February 14, 2025
ರಾಜೀವ್ ಕುಮಾರ್ ಅವರು ಮೇ 2022 ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಕಳೆದ ವರ್ಷ ಏಪ್ರಿಲ್-ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮೊದಲ ವಿಧಾನಸಭಾ ಚುನಾವಣೆ ಸೇರಿದಂತೆ ಹಲವು ಉನ್ನತ ಮಟ್ಟದ ಚುನಾವಣಾ ಪ್ರಕ್ರಿಯೆಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಿಭಾಯಿಸಿರುವ ಅನುಭವವಿದೆ.
ಈ ಸುದ್ದಿಯನ್ನೂ ಓದಿ:Modi-Trump Meet: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರದಲ್ಲಿ ಮುಂದುವರಿಯಲು ಮೋದಿ-ಟ್ರಂಪ್ ಸಮ್ಮತಿ
2022 ರಲ್ಲಿ ರಾಷ್ಟ್ರಪತಿ ಚುನಾವಣೆಯನ್ನು ನಡೆಸಿದ್ದಾರೆ. 2023 ರಲ್ಲಿ ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳ ಜವಾಬ್ದಾರಿ ನಿಭಾಯಿಸಿದ್ದಾರೆ. ಕಳೆದ ವಾರ ನಡೆದ ದೆಹಲಿ ಚುನಾವಣೆಯೊಂದಿಗೆ ಅವರು ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ನಿವೃತ್ತಿಯಾಗುತ್ತಿದ್ದಾರೆ.