Ratan Tata: ರತನ್ ಟಾಟಾ ಬಿಟ್ಟು ಹೋದ 3,800 ಕೋಟಿ ರೂ. ಆಸ್ತಿ ಹಂಚಿಕೆ ವಿವರ ಬಹಿರಂಗ
Ratan Tata: ಕಳೆದ ವರ್ಷ ಅ. 9ರಂದು ನಿಧನ ಹೊಂದಿದ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರ ಬರೋಬ್ಬರಿ 3,800 ಕೋಟಿ ರೂ. ಆಸ್ತಿಯನ್ನು ಎನ್ನುವ ವಿಲ್ ಪ್ರಕಾರ ಹಂಚಿಕೆ ಮಾಡಲಾಗಿದೆ. ರತನ್ ಟಾಟಾ ತಮ್ಮ ಆಸ್ತಿ ಹೇಗೆ ಹಂಚಿಕೆ ಮಾಡಬೇಕು ವಿಲ್ ಪತ್ರವನ್ನು ರತನ್ ಟಾಟಾ 2022ರಲ್ಲಿಯೇ ಬರೆದಿಟ್ಟಿದ್ದರು.

ರತನ್ ಟಾಟಾ.

ಹೊಸದಿಲ್ಲಿ: ಕಳೆದ ವರ್ಷ ಅ. 9ರಂದು ನಿಧನ ಹೊಂದಿದ ಟಾಟಾ ಗ್ರೂಪ್‌ನ (Tata Group) ಅಧ್ಯಕ್ಷರಾಗಿದ್ದ ರತನ್ ಟಾಟಾ (Ratan Tata) ಅವರ ಬರೋಬ್ಬರಿ 3,800 ಕೋಟಿ ರೂ. ಆಸ್ತಿಯನ್ನು ಎನ್ನುವ ವಿಲ್ ಪ್ರಕಾರ ಹಂಚಿಕೆ ಮಾಡಲಾಗಿದೆ. ರತನ್ ಟಾಟಾ ತಮ್ಮ ಆಸ್ತಿ ಹೇಗೆ ಹಂಚಿಕೆ ಮಾಡಬೇಕು ವಿಲ್ ಪತ್ರವನ್ನು ರತನ್ ಟಾಟಾ 2022ರಲ್ಲಿಯೇ ಬರೆದಿಟ್ಟಿದ್ದರು. ಈ ವಿಲ್‌ನಲ್ಲಿ ರತನ್ ಟಾಟಾ ಒಡೆತನದ ಬಹುಪಾಲನ್ನು 2 ಸಂಸ್ಥೆಗೆ ಹಂಚಿಕೆ ಮಾಡಿದ್ದಾರೆ. ಇನ್ನುಳಿದ ಆಸ್ತಿಯನ್ನು ಕುಟುಂಬಸ್ಥರು, ಆಪ್ತರ ಹೆಸರಿಗೆ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರತನ್ ಟಾಟಾ ಅವರು ಹುಟ್ಟು ಹಾಕಿದ ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (Ratan Tata Endowment Foundation) ಹಾಗೂ ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್ (Ratan Tata Endowment Trust)- ಈ ಎರಡು ಸಂಸ್ಥೆಗಳು ಸಾಮಾಜಿಕ ಕಾರ್ಯಗಳು, ಟ್ರಸ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಈ 2 ಸಂಸ್ಥೆಗಳಿಗೆ ರತನ್ ಟಾಟಾ ಆಸ್ತಿಯ ಬಹುಪಾಲು ಆಸ್ತಿ ಹಂಚಿಕೆ ಮಾಡಲಾಗಿದೆ.
ರತನ್ ಟಾಟಾ ಅವರು ಹಂಚಿಕೆ ಮಾಡಿದ ಆಸ್ತಿಯ ವಿವರ ಇಲ್ಲಿದೆ:
Ratan Tata left behind Rs 50 lakh and Rs 30 lakh to domestic help and driver families. pic.twitter.com/x9cS20LV2f
— Prince Thomas (@PRINCE0879) April 1, 2025
ಈ ಸುದ್ದಿಯನ್ನೂ ಓದಿ: Ratan Tata: ನಿಗೂಢ ವ್ಯಕ್ತಿಗೆ ರತನ್ ಟಾಟಾ ವಿಲ್! 500 ಕೋಟಿ ರುಪಾಯಿ ಕೊಟ್ಟರೇ?
ಯಾರಿಗೆ ಎಷ್ಟು ಸಿಕ್ತು?
ಇನ್ನು ರತನ್ ಟಾಟಾ ಅವರ ಸಂಪತ್ತಿನಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ನಿಕಟ ಸಹವರ್ತಿಗಳಿಗೂ ಉತ್ತಮ ಮೊತ್ತ ಮೀಸಲಿಡಲಾಗಿದೆ. ಇನ್ನು ತಮ್ಮ ಹಣಕಾಸು ಸ್ವತ್ತುಗಳಲ್ಲಿ 3ನೇ ಒಂದು ಭಾಗವನ್ನು ಅಂದರೆ ಬ್ಯಾಂಕ್ ಸ್ಥಿರ ಠೇವಣಿಗಳು, ಬೆಲೆ ಬಾಳುವ ವಾಚ್, ಚಿತ್ರಕಲೆಯಂತಹ ಭೌತಿಕ ಸ್ವತ್ತುಗಳು ಸೇರಿದಂತೆ ಅಂದಾಜು 800 ಕೋಟಿ ರೂ.ಗಳನ್ನು ಅವರ ಸಹೋದರಿಯರಾದ ಶಿರೀನ್ ಜೆಜೀಭಾಯ್, ದೀನಾ ಜೆಜೀಭಾಯ್ ಮತ್ತು ಟಾಟಾಗೆ ಆಪ್ತರಾಗಿದ್ದ ಟಾಟಾ ಗ್ರೂಪ್‌ನ ಮಾಜಿ ಉದ್ಯೋಗಿ ಮೋಹಿನಿ ಎಂ.ದತ್ತಾ ನಡುವೆ ಹಂಚಲಾಗುವುದು.
ಟಾಟಾ ಅವರ ಸಹೋದರ ಜಿಮ್ಮಿ ನವಲ್ ಟಾಟಾ ಕುಟುಂಬದ ಜುಹು ಬಂಗಲೆಯನ್ನು ಆನುವಂಶಿಕವಾಗಿ ಪಡೆಯಲಿದ್ದು, ಆಪ್ತ ಸ್ನೇಹಿತ ಮೆಹ್ಲಿ ಮಿಸ್ತ್ರಿ ಅಲಿಬಾಗ್ ಅವರಿಗೆ ಆಸ್ತಿ ಮತ್ತು ಅವರ ಅಮೂಲ್ಯವಾದ 3 ಬಂದೂಕುಗಳ ಸಂಗ್ರಹ ಹೋಗಲಿದೆ.
ಮುದ್ದಿನ ನಾಯಿಗೆ 12 ಲಕ್ಷ ರೂ.
ರತನ್ ಟಾಟಾಗೆ ನಾಯಿಗಳೆಂದರೆ ಪಂಚ ಪ್ರಾಣ. ಹೀಗಾಗಿ ಅವರು ತಮ್ಮ ಸಾಕು ನಾಯಿಯ ಆರೈಕೆಗೆ 12 ಲಕ್ಷ ರೂ. ಮೀಸಲಿಟ್ಟಿದ್ದಾರೆ.
ಆತ್ಮೀಯ ಗೆಳೆಯ ಶಂತನು ನಾಯ್ಡುಗೆ ಏನು?
ರತನ್ ಟಾಟಾ ಅವರ ಆತ್ಮೀಯ ಸ್ನೇಹಿತ, ಟಾಟಾ ಸಮೂಹದ ಕಾರ್ಯಕಾರಿ ಸಹಾಯಕ ಶಂತನು ನಾಯ್ಡು ತೆಗೆದುಕೊಂಡಿದ್ದ ಶಿಕ್ಷಣ ಸಾಲವನ್ನು ರತನ್ ಟಾಟಾ ಮನ್ನಾ ಮಾಡಿದ್ದಾರೆ. ಇನ್ನು ರತನ್ ಟಾಟಾ ನೆರಮನೆಯ ಜ್ಯಾಕ್ ಮಲೈಟ್‌ಗೆ ಬಡ್ಡಿರಹಿತ ಶಿಕ್ಷಣ ಸಾಲ ಅನುವು ಮಾಡಿಕೊಟ್ಟಿದ್ದಾರೆ. ಅವರ ವೈಯಕ್ತಿಕ ಐಷಾರಾಮಿ ವಾಚ್‌ಗಳ ಸಂಗ್ರಹವನ್ನು ಸಹ ವಿಲ್‌ನಲ್ಲಿ ಸೇರಿಸಲಾಗಿದೆ. ಅವರ ಸಂಗ್ರಹದಲ್ಲಿ 65 ವಾಚ್‌ಗಳಿವೆ.