ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ರಾಹಕರಿಗೆ ಶಾಕ್‌ ನೀಡಿದ RBI; ರೆಪೋ ದರದಲ್ಲಿ ಇಲ್ಲ ಯಾವುದೇ ಬದಲಾವಣೆ!

2026 ರ ಕೇಂದ್ರ ಬಜೆಟ್ ನಂತರದ ಮೊದಲ ಹಣಕಾಸು ನೀತಿ ನಿರ್ಧಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಪ್ರಮುಖ ಸಾಲ ದರವನ್ನು ಅಂದರೆ ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಇರಿಸಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇಂದು ಪ್ರಕಟಿಸಿದ ರೆಪೋ ನಿರ್ಧಾರದಿಂದಾಗಿ ಸಾಲದ EMIಗಳು ಬದಲಾಗದೆ ಉಳಿಯಲಿವೆ ಮತ್ತು ಆರ್ಥಿಕತೆಗೆ ಸ್ಥಿರತೆಯ ಸಂಕೇತ ನೀಡಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: 2026 ರ ಕೇಂದ್ರ ಬಜೆಟ್ ನಂತರದ ಮೊದಲ ಹಣಕಾಸು ನೀತಿ ನಿರ್ಧಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಪ್ರಮುಖ ಸಾಲ ದರವನ್ನು ಅಂದರೆ ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಇರಿಸಿದೆ. ಕೇಂದ್ರ ಬ್ಯಾಂಕಿನ ಹಣಕಾಸು ಕಾರ್ಯತಂತ್ರವನ್ನು ನಿರ್ಧರಿಸಲು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ಹಣಕಾಸು ನೀತಿ ಸಮಿತಿಯ (MPC) ಮೂರು ದಿನಗಳ ಸಭೆಯ ನಂತರ RBI ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರವನ್ನು ಪ್ರಕಟಿಸಿದರು.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇಂದು ಪ್ರಕಟಿಸಿದ ರೆಪೋ ನಿರ್ಧಾರದಿಂದಾಗಿ ಸಾಲದ EMIಗಳು ಬದಲಾಗದೆ ಉಳಿಯಲಿವೆ ಮತ್ತು ಆರ್ಥಿಕತೆಗೆ ಸ್ಥಿರತೆಯ ಸಂಕೇತ ನೀಡಲಾಗಿದೆ. ಇದರಿಂದ EMI ಪಾವತಿದಾರರಿಗೆ ಭಾರೀ ನಿರಾಸೆಯಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಯುತ್ತದೆ ಮತ್ತು ರೆಪೊ ದರ, ಹಣದುಬ್ಬರ ನಿಯಂತ್ರಣ, ಆರ್ಥಿಕ ಬೆಳವಣಿಗೆಯಂತಹ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ರೆಪೊ ದರ ಎಂದರೆ ಆರ್‌ಬಿಐ ಬ್ಯಾಂಕುಗಳಿಗೆ ಸಾಲ ನೀಡುವ ದರ. ಇದು ಕಡಿಮೆಯಾದರೆ ಸಾಲಗಳು ಅಗ್ಗವಾಗುತ್ತವೆ, ಹೆಚ್ಚಾದರೆ ದುಬಾರಿಯಾಗುತ್ತವೆ.

ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆ ಉತ್ತಮ ಸ್ಥಾನದಲ್ಲಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಆರ್‌ಬಿಐ 125 ಬೇಸಿಸ್ ಪಾಯಿಂಟ್‌ಗಳಷ್ಟು ದರ ಕಡಿತ ಮಾಡಿದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಬೆಂಬಲ ಸಿಗುತ್ತಿದೆ ಮತ್ತು ಸಾಲದ EMIಗಳು ಕಡಿಮೆಯಾಗಿದ್ದವು. ಇದೀಗ ರೆಪೋ ದರವನ್ನು ಯಾವುದೇ ಬದಲಾವಣೆ ಮಾಡದೇ ಹಾಗೇ ಉಳಿಸಿದೆ.

ಕೇಂದ್ರದ ಬಜೆಟ್‌ ಆರೋಗ್ಯ ಕ್ಷೇತ್ರಕ್ಕೆ ಏನೇನು ಕೊಡುಗೆ? ಆರೋಗ್ಯ ಕ್ಷೇತ್ರದ ಗಣ್ಯರಿಂದ ಅಭಿಪ್ರಾಯ

ಪ್ರಸಕ್ತ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆಯನ್ನು 7.4% ಎಂದು ಅಂದಾಜಿಸಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ, ಜಿಡಿಪಿ ಬೆಳವಣಿಗೆಯನ್ನು ಮೊದಲ ತ್ರೈಮಾಸಿಕದಲ್ಲಿ 6.9% ಮತ್ತು ಎರಡನೇ ತ್ರೈಮಾಸಿಕದಲ್ಲಿ 7% ಎಂದು ಅಂದಾಜಿಸಲಾಗಿದೆ. ಈ ವರ್ಷದ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.4 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ, ಮುಂದಿನ ವರ್ಷದ ಮುನ್ಸೂಚನೆಯು ಶೇ.6.8 ರಿಂದ ಶೇ.7.2 ರವರೆಗೆ ಕುಸಿಯಲಿದೆ.

Vishakha Bhat Heggar

View all posts by this author