ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೃಣಮೂಲ ಕಾಂಗ್ರೆಸ್ ಬಂಡಾಯ; ಸಂಸದರ ಬಣ NCPI ಜೊತೆ ವಿಲೀನ

ತೃಣಮೂಲ ಕಾಂಗ್ರೆಸ್‌ನ ಆಂತರಿಕ ಭಿನ್ನಮತ ನಿರ್ಣಾಯಕ ಹಂತ ತಲುಪಿದೆ. ಟಿಎಂಸಿ ಪಕ್ಷದ ಅತೃಪ್ತ ಸಂಸದರ ದೊಡ್ಡ ಬಣವೊಂದು ಅಧಿಕೃತವಾಗಿ ನ್ಯಾಷನಲಿಸ್ಟ್ ಸಿಟಿಜನ್​ ಪಾರ್ಟಿಯೊಂದಿಗೆ ವಿಲೀನಗೊಳ್ಳಲು ಮುಂದಾಗಿದೆ. ಈ ಮೂಲಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಭಾಗವಾಗಲಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಆಂತರಿಕ ಭಿನ್ನಮತ ನಿರ್ಣಾಯಕ ಹಂತ ತಲುಪಿದೆ. ಟಿಎಂಸಿ ಪಕ್ಷದ (TMC Party) ಅತೃಪ್ತ ಸಂಸದರ ದೊಡ್ಡ ಬಣವೊಂದು ಅಧಿಕೃತವಾಗಿ ನ್ಯಾಷನಲಿಸ್ಟ್ ಸಿಟಿಜನ್​ ಪಾರ್ಟಿಯೊಂದಿಗೆ (Nationalist Citizen Party) ವಿಲೀನಗೊಳ್ಳಲು ಮುಂದಾಗಿದೆ. ಈ ಮೂಲಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್​ಡಿಎ ಸರ್ಕಾರದ ಭಾಗವಾಗಲಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ ಕಾಕೋಲಿ ಘೋಷ್ ನೇತೃತ್ವದ ಅತೃಪ್ತ ಸಂಸದರ ಬಣ ತಾವು ರಾಷ್ಟ್ರೀಯತಾವಾದಿ ನಾಗರಿಕ ಪಕ್ಷ ಅರ್ಥಾತ್​ ನ್ಯಾಷನಲಿಸ್ಟ್ ಸಿಟಿಜನ್​ ಆಫ್ ಇಂಡಿಯಾ ಜೊತೆ ವಿಲೀನಗೊಳ್ಳುತ್ತಿರುವುದಾಗಿ ಘೋಷಿಸಿದೆ.

ಈ ಕುರಿತು ಮಾತನಾಡಿದ ಅವರು ಟಿಎಂಸಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ "ನಾವು ರಾಷ್ಟ್ರೀಯತಾವಾದಿ ನಾಗರಿಕರ ಪಕ್ಷದೊಂದಿಗೆ ವಿಲೀನಗೊಳ್ಳುತ್ತಿದ್ದೇವೆ" ಎಂದು ದಸ್ತಿದಾರ್ ಹೇಳಿದರು. ಬಂಡಾಯ ಬಣವು ಭಾನುವಾರ ದೆಹಲಿಯ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರ ನಿವಾಸದಲ್ಲಿ ಸಭೆ ಸೇರಿ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿವಾಸಕ್ಕೆ ತೆರಳಿತು.

ತಾವು ಟಿಎಂಸಿ ಪಕ್ಷದ ಒಟ್ಟು ಬಲದ ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುತ್ತಿರುವುದಾಗಿ ಬಂಡಾಯ ವಾದಿಸಿರುವ ಸಂಸದರು, “ಹಾಲಿ ಸಂಸದರಾಗಿ ಆಯ್ಕೆಯಾಗಿರುವ ತಾವು ತೃಣಮೂಲ ಕಾಂಗ್ರೆಸ್ ಕಾರ್ಯವೈಖರಿ ಮತ್ತು ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು, ಪ್ರತ್ಯೇಕವಾಗಿ ಕುಳಿತುಕೊಳ್ಳಲು ಸಂಸತ್ತಿನಲ್ಲಿ ಅವಕಾಶ ನೀಡುವಂತೆ” ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಬಂಡಾಯ ನಾಯಕರ ಗುಂಪು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೇಷರತ್ತಾದ ಬೆಂಬಲವನ್ನು ಘೋಷಿಸಲು ನಿರ್ಧರಿಸಿದೆ. ಪ್ರಧಾನಮಂತ್ರಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

ಟಿಎಂಸಿಯ ಪ್ರಮುಖ ಹುದ್ದೆಯಿಂದ ಸಾಯೋನಿ ಘೋಷ್, ಮಾಲಾ ರಾಯ್ ವಜಾ; ಆಂತರಿಕ ಬಿಕ್ಕಟ್ಟಿನ ನಡುವೆ ಮಮತಾ ಬ್ಯಾನರ್ಜಿ ದೃಢ ನಿರ್ಧಾರ

ಪಕ್ಷದ ವಿರುದ್ಧ ಬಂಡಾಯ ಸಾರಿದ ಟಿಎಂಸಿ ಸಂಸದರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ಭಾನುವಾರ ವಜಾಗೊಳಿಸಲಾಗಿದೆ. ಟಿಎಂಸಿ ಯುವ ಘಟಕದ ಮುಖ್ಯಸ್ಥೆ ಸ್ಥಾನದಿಂದ ಸಾಯೋನಿ ಘೋಷ್‌ ಅವರನ್ನು ವಜಾಗೊಳಿಸಿರುವ ಮಮತಾ ಬ್ಯಾನರ್ಜಿ, ಅರ್ನಬ್‌ ಬ್ಯಾನರ್ಜಿಯನ್ನು ಆ ಹುದ್ದೆಗೆ ನೇಮಿಸಿದ್ದಾರೆ. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಮಾಲಾ ರಾಯ್‌ರನ್ನು ವಜಾಗೊಳಿಸಿ, ಕಲಿಗಂಜ್‌ ಶಾಸಕಿ ಅಲಿಫಾ ಅಹ್ಮದ್‌ ಅವರನ್ನು ನೇಮಿಸಲಾಗಿದೆ. ಉತ್ತರ ಕೋಲ್ಕೊತಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದಿಂದ ಸುದೀಪ್‌ ಬಂಡೋಪಾಧ್ಯಾಯರನ್ನು ವಜಾಗೊಳಿಸಿ, ಕುನಾಲ್‌ ಘೋಷ್‌ ಅವರನ್ನು ನೇಮಕ ಮಾಡಲಾಗಿದೆ.

Vishakha Bhat Heggar

View all posts by this author