ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಚಿನ್ ತೆಂಡುಲ್ಕರ್ ಜತೆ ರೀಟಾ ಬಹುಗುಣ ಮಾತನಾಡಿರಬಹುದು, ನನ್ನೊಂದಿಗಲ್ಲ: ಸಚಿನ್ ಪೈಲಟ್

ಸಚಿನ್ ತೆಂಡುಲ್ಕರ್ ಜತೆ ರೀಟಾ ಬಹುಗುಣ ಮಾತನಾಡಿರಬಹುದು, ನನ್ನೊಂದಿಗಲ್ಲ: ಸಚಿನ್ ಪೈಲಟ್

ಜೈಪುರ: ರೀಟಾ ಬಹುಗುಣ ಜೋಶಿ ಅವರು ಸಚಿನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಅವರು ಸಚಿನ್ ತೆಂಡುಲ್ಕರ್ ಅವರೊಂದಿಗೆ ಮಾತನಾಡಿದ್ದಿರಬಹುದು. ನನ್ನೊಂದಿಗೆ ಮಾತನಾಡಲು ಧೈರ್ಯವಿಲ್ಲ" ಎಂದು ಸಚಿನ್ ಪೈಲಟ್ ತಿಳಿಸಿದರು. ಸಚಿನ್ ಪೈಲಟ್ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ಅವರು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತಾರೆ ಎಂದು ಬಿಜೆಪಿಗೆ ಸೇರುವ ಮೊದಲು 25 ವರ್ಷಗಳ ಕಾಲ ಕಾಂಗ್ರೆಸ್ ಮುಖಂಡರಾಗಿದ್ದ ರೀಟಾ ಬಹುಗುಣ ಜೋಶಿ ಹೇಳಿಕೆ ನೀಡಿದ್ದರು. ಮಾಜಿ ಸಹೋದ್ಯೋಗಿ ಜಿತಿನ್ ಪ್ರಸಾದ್ ಅವರು ಬಿಜೆಪಿಗೆ ಪಕ್ಷಾಂತರವಾದ ನಂತರ ಸಚಿನ್ ಪೈಲಟ್ ಈಗ ಚರ್ಚೆ ಯಲ್ಲಿದ್ದಾರೆ. ಪಕ್ಷಾಂತರವಾಗುವ ಮುಂದಿನ ಸರದಿಯಲ್ಲಿ ತಾನಿದ್ದೇನೆ ಎಂಬ ಬಿಜೆಪಿ ಮುಖಂಡರ ಅಭಿಪ್ರಾಯವನ್ನು ಶುಕ್ರವಾರ ಸಚಿನ್ ಪೈಲಟ್ ಖಂಡಿಸಿದ್ದಾರೆ. ಬುಧವಾರ ಕಾಂಗ್ರೆಸ್ ತೊರೆದಿದ್ದ ಜಿತಿನ್ ಪ್ರಸಾದ ಅವರು ದೇಶದ "ಏಕೈಕ ರಾಷ್ಟ್ರೀಯ ಪಕ್ಷ" ಎಂದರೆ ಬಿಜೆಪಿ ಮಾತ್ರ ಎಂದು ಬಣ್ಣಿಸಿದ್ದಾರೆ. ಕಳೆದ ವರ್ಷ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯ ಎದ್ದ ಬಳಿಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮನವೊಲಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಪೈಲಟ್, ರಾಜಸ್ಥಾನ ಸರಕಾರ ಹಾಗೂ ಪಕ್ಷದ ಸಂಘಟನೆಯಲ್ಲಿ ಹೆಚ್ಚಿನ ಪಾಲನ್ನು ಬಯಸುತ್ತಾರೆ.