ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರ‍್ಯಾಪಿಡೋ ಚಾಲಕನ ಖಾತೆಯಲ್ಲಿ ಪತ್ತೆಯಾಯ್ತು 331 ಕೋಟಿ ರೂಪಾಯಿ; ಇಡಿ ದಾಳಿ

ED Conducts Raid: ಆನ್‌ಲೈನ್‌ ಬೆಟ್ಟಿಂಗ್‌ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳಿಗೆ ರ‍್ಯಾಪಿಡೋ ಬೈಕ್ ಚಾಲಕನ ಬ್ಯಾಂಕ್ ಖಾತೆಯಲ್ಲಿ 331 ಕೋಟಿ ರೂಪಾಯಿ ಠೇವಣಿ ಪತ್ತೆಯಾಗಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿಚಾರಣೆ ವೇಳೆ ಇದು ಮ್ಯೂಲ್ ಖಾತೆ ಆಗಿ ಬಳಸಲಾಗುತ್ತಿದ್ದುದಾಗಿ ತಿಳಿದುಬಂದಿದೆ. ಇಡೀ ಘಟನೆಯು ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ.

ಸಾಂದರ್ಭಿಕ ಚಿತ್ರ.

ನವದೆಹಲಿ, ಡಿ. 1: ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಹಣ ವರ್ಗಾವಣೆಯ (Money laundering) ತನಿಖೆಯ ಮಧ್ಯೆ ಜಾರಿ ನಿರ್ದೇಶನಾಲಯಕ್ಕೆ(ED) ಮಹತ್ವದ ಸಂಗತಿ ಲಭಿಸಿದೆ. ನವದೆಹಲಿಯ ಬೈಕ್-ಟ್ಯಾಕ್ಸಿ (Rapido) ಚಾಲಕನೊಬ್ಬನ ಬ್ಯಾಂಕ್ ಖಾತೆಯಲ್ಲಿ 331.36 ಕೋಟಿ ರೂ.ಗಳ ವಹಿವಾಟನ್ನು ಪತ್ತೆ ಹಚ್ಚಿದೆ. ಈ ವ್ಯಕ್ತಿ ದಿನಕ್ಕೆ ಕೇವಲ 500-600 ರೂ. ಸಂಪಾದಿಸುತ್ತಾನೆ ಮತ್ತು ಎರಡು ಕೋಣೆಗಳ ಚಿಕ್ಕ ಮನೆಯಲಲಿ ವಾಸಿಸುತ್ತಿದ್ದಾನೆ. ಆತನ ಅಕೌಂಟ್‌ನಲ್ಲಿ ಇಷ್ಟೊಂದು ಮೊತ್ತದ ಹಣ ಕಂಡು ಬಂದಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

1xBet ಆನ್‌ಲೈನ್ ಬೆಟ್ಟಿಂಗ್ ನೆಟ್‌ವರ್ಕ್‌ಗೆ ಸಂಬಂಧಿಸಿದ ಅನುಮಾನಾಸ್ಪದ ಹಣದ ಹರಿವನ್ನು ಪತ್ತೆಹಚ್ಚುವಾಗ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಲಕನ ಬ್ಯಾಂಕ್ ದಾಖಲೆಗಳಲ್ಲಿ ಪಟ್ಟಿ ಮಾಡಲಾದ ವಿಳಾಸದ ಮೇಲೆ ದಾಳಿ ನಡೆಸಲಾಯಿತು. ನಕಲಿ ಅಥವಾ ಬಾಡಿಗೆಗೆ ಪಡೆದ KYC ವಿವರಗಳನ್ನು ಬಳಸಿಕೊಂಡು ನಿರ್ದೋಷಿ ಅಥವಾ ಸಾಮಾನ್ಯ ವ್ಯಕ್ತಿಗಳ ಮೂಲಕ ಅಕ್ರಮ ಹಣವನ್ನು ಸಾಗಿಸಲುಬಳಸುತ್ತಿದ್ದ ಮ್ಯೂಲ್ ಖಾತೆಯನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದರು.

ರಾಜ್ಯದಲ್ಲಿ ಸಚಿವರ ಆಪ್ತರ ಮನೆಗಳ ಮೇಲೆ ಇಡಿ ದಾಳಿ

ಮೂರನೇ ವ್ಯಕ್ತಿಯ ಖಾತೆಯ ಬಳಕೆಯು, ಹಣದ ನಿಜವಾದ ಮೂಲವನ್ನು ಮರೆಮಾಡಲು ಮತ್ತು ಪರಿಶೀಲನೆಯನ್ನು ತಪ್ಪಿಸಲು ಮಾಡಿದ ಪ್ರಯತ್ನವಾಗಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 2024ರ ಆಗಸ್ಟ್ 19ರಿಂದ 2025ರ ಏಪ್ರಿಲ್ 16ರ ನಡುವೆ ಚಾಲಕನ ಬ್ಯಾಂಕ್ ಖಾತೆಗೆ 331.36 ಕೋಟಿ ರೂಪಾಯಿ ಠೇವಣಿ ಬಂದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಟು ತಿಂಗಳ ಅಲ್ಪಾವಧಿಯಲ್ಲಿ ಅನುಮಾನಾಸ್ಪದ ಬಹುಕೋಟಿ ರೂಪಾಯಿ ವಹಿವಾಟುಗಳಿಂದ ಅನುಮಾನಗೊಂಡ ಫೆಡರಲ್ ಏಜೆನ್ಸಿ, ಚಾಲಕನ ಬ್ಯಾಂಕ್ ದಾಖಲೆಗಳಲ್ಲಿ ಒದಗಿಸಲಾದ ವಿಳಾಸದ ಮೇಲೆ ದಾಳಿ ನಡೆಸಿತು.

ಚಾಲಕನು ಒಂದು ಸಾಧಾರಣ ಪ್ರದೇಶದಲ್ಲಿ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾನೆ. ತನ್ನ ದಿನದ ಹೆಚ್ಚಿನ ಸಮಯವನ್ನು ಆತ ಬೈಕ್-ಟ್ಯಾಕ್ಸಿ ಓಡಿಸುತ್ತಲೇ ಕಳೆಯುತ್ತಿದ್ದಾನೆ. ತನ್ನ ಮನೆಯನ್ನು ನಡೆಸಲು ಸಾಕಾಗುವಷ್ಟು ಸಂಪಾದಿಸುತ್ತಿದ್ದನು. ವಿಚಾರಣೆಯ ಸಮಯದಲ್ಲಿ, ಠೇವಣಿಗಳ ಬಗ್ಗೆ ಅಥವಾ ಫಲಾನುಭವಿಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ.

ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಇಡಿ ದಾಳಿ

ಅಚ್ಚರಿ ಎಂದರೆ ಇದೇ ಖಾತೆಯಿಂದ 2024 ನವೆಂಬರ್‌ನಲ್ಲಿ ಐದು ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಲಾದ ಅದ್ಧೂರಿ ಡೆಸ್ಟಿನೇಷನ್ ಮದುವೆಗೆ 1 ಕೋಟಿ ರೂ.ಗೂ ಹೆಚ್ಚು ಹಣ ಬಳಕೆಯಾಗಿದೆ ಎಂದು ಪತ್ತೆಯಾಗಿದೆ. ಚಾಲಕನಿಗೆ ಈ ಕುಟುಂಬಗಳೊಂದಿಗೆ ಯಾವುದೇ ಸಂಪರ್ಕವಿಲ್ಲದಿದ್ದರೂ ಸಹ, ಅಲಂಕಾರ, ವಾಹನ ಸೇವೆಗಳು, ಕೊಠಡಿ ಬುಕಿಂಗ್ ಮತ್ತು ಇವೆಂಟ್ ನಿರ್ವಹಣೆಗೆ ಪಾವತಿ ಮಾಡಲಾಗಿದೆ.