ತಿರುವನಂತಪುರಂ: ಶಬರಿಮಲೈ (Sabarimala) ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣದ ತನಿಖೆಗಾಗಿ ಕೇರಳ(Kerala) ಹೈಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ(Special Investigation Team) ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ(Unnikrishnan Potti)ಯನ್ನು ಬಂಧಿಸಿದೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರು(Bengaluru) ಮೂಲದ ಉದ್ಯಮಿ ಆಗಿರುವ ಉಣ್ಣಿಕೃಷ್ಣನ್ ಪೊಟ್ಟಿಯನ್ನು ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದ್ದು, ಗುರುವಾರ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಸುಮಾರು 12 ಗಂಟೆಗಳ ವಿಚಾರಣೆ ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉನ್ನಿಕೃಷ್ಣನ್‌ರನ್ನು ವೈದ್ಯಕೀಯ ಪರೀಕ್ಷೆಗಾಗಿ ತಿರುವನಂತಪುರಂ(Thiruvananthapuram) ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಪತ್ತನಂತಿಟ್ಟ(Pathanamthitta)ದ ರನ್ನಿಯಲ್ಲಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಎಸ್ಐಟಿ ಅಧಿಕಾರಿಗಳು ಉನ್ನಿಕೃಷ್ಣನ್‌ರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ ಎನ್ನಲಾಗಿದೆ.
ಈ ಸುದ್ದಿಯನ್ನು ಓದಿ: Sabarimala temple: ಶಬರಿಮಲೆ ದೇವಸ್ಥಾನ ಚಿನ್ನ ಕಳವು ವಿವಾದ- ವಿಜಯ್ ಮಲ್ಯ ಹೆಸರು ಕೇಳಿ ಬಂದಿದ್ದು ಏಕೆ?
ಪ್ರಸ್ತುತ ಎಸ್ಐಟಿ ಅಧಿಕಾರಿಗಳು ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರ ತಗಡುಗಳ ಕಳ್ಳತನ ಹಾಗೂ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳ ಚಿನ್ನ ಕಳ್ಳತನ ಪ್ರಕರಣಗಳ ತನಿಖೆ ನಡೆಸುತ್ತಿದೆ.
ಚಿನ್ನ ಕಳ್ಳತನ ಪ್ರಕರದಲ್ಲಿ ಟಿಡಿಬಿ ಸದಸ್ಯರ ಪಾತ್ರ ಇದೆಯಾ?
2019ರಲ್ಲಿ ಲೇಪನಕ್ಕಾಗಿ ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಸದಸ್ಯರು ಮತ್ತು ಅಧಿಕಾರಿಗಳು, ಚಿನ್ನದ ಲೇಪನಕ್ಕಾಗಿ ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರ ತಗಡುಗಳನ್ನು ಹಾಗೂ ಶ್ರೀಕೋವಿಲ್ ಬಾಗಿಲಿನ ಚೌಕಟ್ಟುಗಳನ್ನು ಪೊಟ್ಟಿಗೆ ಹಸ್ತಾಂತರಿಸಿದ್ದರು ಎಂಬ ಆರೋಪವಿದೆ. ಈ ತಾಳೆಗಳನ್ನು ಮತ್ತು ಶ್ರೀಕೋವಿಲಿನ ಬಾಗಿಲು ಚೌಕಟ್ಟುಗಳನ್ನು ಎಲೆಕ್ಟ್ರೋಪ್ಲೇಟಿಂಗ್‌ಗೆ ನೀಡಲಾಗಿತ್ತು.
ಉಣ್ಣಿಕೃಷ್ಣನ್ ಪೊಟ್ಟಿ ಹೇಳಿದ್ದೇನು?
ಜುಲೈ 19, 2019ರರಂದು ದ್ವಾರಪಾಲಕ ಮೂರ್ತಿಗಳ ತಗಡುಗಳನ್ನು ತೆಗೆದು, ಅದನ್ನು ಬೆಂಗಳೂರಿನಲ್ಲಿರುವ ಪೊಟ್ಟಿಯ ಸ್ನೇಹಿತನ ಮನೆಗೆ ರವಾನೆ ಮಾಡಲಾಗಿತ್ತು. ಕೆಲವು ದಿನಗಳ ಬಳಿಕ ರಿಪೇರಿಗಾಗಿ ಅವುಗಳನ್ನು ಹೈದ್ರಾಬಾದ್‌ಗೆ ತರಲಾಯಿತು. ಆಗಸ್ಟ್ 29, 2019ರಂದು ಚಿನ್ನ ಲೇಪನಕ್ಕಾಗಿ ಅದನ್ನು 'ಸ್ಮಾರ್ಟ್ ಕ್ರಿಯೇಷನ್ಸ್' ಕಂಪನಿಗೆ ನೀಡಲಾಗಿತ್ತು.
NDTV ವರದಿಗಳ ಪ್ರಕಾರ, "ಈ ಚಿನ್ನ ಕಳ್ಳತನ ಪೂರ್ವನಿಯೋಜಿತ ಯೋಜನೆಯಾಗಿದ್ದು, ಇದರ ಬಗ್ಗೆ ಟಿಡಿಬಿ ಅಧಿಕಾರಿಗಳಿಗೆ ಮೊದಲೇ ಗೊತ್ತಿತ್ತು ಎಂದು ವಿಚಾರಣೆ ವೇಳೆ ಉಣ್ಣಿಕೃಷ್ಣನ್ ಒಪ್ಪಿಕೊಂಡಿದ್ದಾನೆ. ಅಲ್ಲದೇ ಕದ್ದ ಚಿನ್ನವನ್ನು ಟಿಡಿಬಿ ಸದಸ್ಯರ ಹಂಚಿಕೊಂಡಿದ್ದಾರೆ ಎಂದು ಅವನಿ ತಿಳಿಸಿದ್ದಾನೆ.
ದೇವಸ್ವಂ ಸಚಿವರ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್, "ರಾಜ್ಯದ ದೇವಸ್ವಂ ಸಚಿವ ವಿ.ಎನ್.ವಾಸವನರು ರಾಜೀನಾಮೆ ನೀಡಬೇಕು ಹಾಗೂ ದೇವಸ್ವಂ ಬೋರ್ಡ್ ಅನ್ನು ಕೂಡಲೇ ವಿಸರ್ಜಿಸಬೇಕು," ಎಂದು ಆಗ್ರಹಿಸಿದ್ದಾರೆ.