ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saurabh Bharadwaj: ಧೈರ್ಯವಿದ್ದರೆ ನಿಮ್ಮ ಸಂಪತ್ತನ್ನೆಲ್ಲಾ ಸೇನೆಗೆ ನೀಡಿ; ಸೂರ್ಯ ಕುಮಾರ್‌ ಸವಾಲ್‌ ಹಾಕಿದ ಆಪ್‌ ನಾಯಕ

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Surya Kumar Yadav) ಸೋಮವಾರ ಏಷ್ಯಾಕಪ್‌ನ ಸಂಪೂರ್ಣ ಪಂದ್ಯ ಶುಲ್ಕವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಸಂಪತ್ತನ್ನೆಲ್ಲಾ ಸೇನೆಗೆ ನೀಡಿ; ಆಪ್‌ ನಾಯಕನಿಂದ ಸೂರ್ಯ ಕುಮಾರ್‌ಗೆ ಸವಾಲ್‌

-

Vishakha Bhat Vishakha Bhat Sep 29, 2025 4:21 PM

ನವದೆಹಲಿ: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Surya Kumar Yadav) ಸೋಮವಾರ ಏಷ್ಯಾಕಪ್‌ನ ಸಂಪೂರ್ಣ ಪಂದ್ಯ ಶುಲ್ಕವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಸೂರ್ಯಕುಮಾರ್ ಶುಲ್ಕವನ್ನು ದಾನ ಮಾಡಲು ನಿರ್ಧರಿಸಿದ ನಂತರ , ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ (Saurabh Bharadwaj) ಈ ಕುರಿತು ಕುಹಕವಾಡಿದ್ದು, ಸೂರ್ಯ ಕುಮಾರ್‌ಗೆ ಬಹಿರಂಗ ಸವಾಲ್‌ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ವೀಡಿಯೊದಲ್ಲಿ, ಭಾರದ್ವಾಜ್ ಪಹಲ್ಗಾಮ್ ಸಂತ್ರಸ್ತರಿಗೆ ದೇಣಿಗೆ ನೀಡುವಂತೆ ಭಾರತೀಯ T20 ನಾಯಕನಿಗೆ ತಮ್ಮ ದುಡಿಮೆಯ ಸಂಪೂರ್ಣ ಹಣವನ್ನು ನೀಡಲು ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್, ನಿಮಗೆ ಸಾಮರ್ಥ್ಯವಿದ್ದರೆ, ನೀವು ಸಂಪಾದಿಸಿದ ಹಣವನ್ನು ಪಹಲ್ಗಾಮ್ ಸಂತ್ರಸ್ತರ ವಿಧವೆಯರಿಗೆ ನೀಡಿ ಎಂದು ನಾವು ನಿಮಗೆ ಸವಾಲು ಹಾಕುತ್ತೇವೆ" ಎಂದು ಭಾರದ್ವಾಜ್ ವೀಡಿಯೊದಲ್ಲಿ ಹೇಳುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಆಮ್‌ ಆದ್ಮಿ ಸೂರ್ಯ ಕುಮಾರ್ ಯಾದವ್‌ಗೆ ಸವಾಲು ಹಾಕಿತ್ತು. ಸೌರಭ್ ಭಾರದ್ವಾಜ್ ನಿಮಗೆ ತಾಕತ್ತಿದ್ದರೆ, ನಿಮ್ಮ ಸಂಪೂರ್ಣ ಹಣವನ್ನು ಸೇನೆಗೆ ನೀಡಿ ಎಂದು ಹೇಳಿದ್ದಾರೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ಈ ವ್ಯಕ್ತಿಯನ್ನು ಈಗ ಸಾರ್ವಜನಿಕ ಜೀವನವನ್ನು ತ್ಯಜಿಸುವಂತೆ ಕೇಳಬಾರದೇ?" ಎಂದು ಬಿಜೆಪಿ ವಕ್ತಾರರು ಪ್ರಶ್ನಿಸಿದ್ದಾರೆ. ಇಂದು ಮುಂಜಾನೆ, ಭಾರದ್ವಾಜ್ ಏಷ್ಯಾ ಕಪ್ ಆರಂಭವಾಗುವ ಮೊದಲು ತೆಗೆದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಸೂರ್ಯಕುಮಾರ್ ಯಾದವ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರೊಂದಿಗೆ ಕೈಕುಲುಕುತ್ತಿರುವುದನ್ನು ತೋರಿಸಲಾಗಿದೆ.

ನೋಡಿ, ಸರಣಿಯ ಆರಂಭದಲ್ಲಿ, ಕೇವಲ 15 ದಿನಗಳ ಹಿಂದೆ, ಅವರು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರೊಂದಿಗೆ ಕೈಕುಲುಕಿದರು ಮತ್ತು ಅವರ ಫೋಟೋವನ್ನು ಸಹ ತೆಗೆದುಕೊಂಡರು" ಎಂದು ಭಾರದ್ವಾಜ್ X ನಲ್ಲಿ ಪೋಸ್ಟ್‌ನಲ್ಲಿ ಹೇಳಿದರು. "ಆದರೆ ಭಾರತದಲ್ಲಿ ಪಂದ್ಯಕ್ಕೆ ವಿರೋಧ ಬಂದಾಗ, ಅವರು ಆಟಗಾರರಿಗೆ ದೇಶದಲ್ಲಿ ಪ್ರಚಾರ ನಡೆಸಲು ಹೊಸ ಸ್ಕ್ರಿಪ್ಟ್ ನೀಡಿದರು" ಎಂದು ಆರೋಪಿಸಿದ್ದರು.