Smuggling: 2.5 ಕೋಟಿ ಮೌಲ್ಯದ ಹೆರಾಯಿನ್ ಕಳ್ಳಸಾಗಣೆ ಪತ್ತೆ- ಇಬ್ಬರು ಅರೆಸ್ಟ್
ಮೇಘಾಲಯದ ವೆಸ್ಟ್ ಜೈಂತಿಯಾ ಹಿಲ್ಸ್‌ನಲ್ಲಿ ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ 512.63 ಗ್ರಾಂ ಹೆರಾಯಿನ್‌ನೊಂದಿಗೆ ಇಬ್ಬರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮತ್ತೊಂದು ಘಟನೆಯಲ್ಲಿ ಪಂಜಾಬ್‌ನಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದ್ದು, ಸರಿಸುಮಾರು 4 ಕೆಜಿ ಹೆರಾಯಿನ್ ಜೊತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಾಂಧರ್ಬಿಕ ಚಿತ್ರ -

ಶಿಲ್ಲಾಂಗ್: ಮೇಘಾಲಯದ (Meghalaya) ವೆಸ್ಟ್ ಜೈಂತಿಯಾ ಹಿಲ್ಸ್‌ನಲ್ಲಿ ₹2.5 ಕೋಟಿ ಮೌಲ್ಯದ 512.63 ಗ್ರಾಂ ಹೆರಾಯಿನ್ (Heroin) ವಶಪಡಿಸಿಕೊಂಡ ಮಣಿಪುರದ (Manipur) ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ರೀತಿ, ಪಂಜಾಬ್‌ನಲ್ಲಿ ಪಾಕಿಸ್ತಾನ ಸಂಪರ್ಕವಿರುವ 4 ಕೆಜಿ ಹೆರಾಯಿನ್ ಜೊತೆ ಇಬ್ಬರನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 28, ರಾತ್ರಿ, ಖ್ಲೈಹ್ರಿಯತ್‌ನಿಂದ ಜೋವೈಗೆ ತೆರಳುತ್ತಿದ್ದ ವಾಹನವನ್ನು ತಡೆ ಹಿಡಿದಿದ್ದು, ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಹೆರಾಯಿನ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿಸಿದ್ದಾರೆ. ಜಿಲ್ಲಾ ಪೊಲೀಸರು ಮತ್ತು ಆ್ಯಂಟಿ-ನಾರ್ಕೋಟಿಕ್ಸ್ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಚುಚುಂಗ್ ಸೆರ್ಟೊ ಮತ್ತು ಥಾಂಗಿನ್ ಟೌತಾಂಗ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ 50 ಸಾಬೂನು ಡಬ್ಬಿಗಳಲ್ಲಿ ಹೆರಾಯಿನ್, ₹6,775 ನಗದು, ಕೊರಿಯನ್, ಕಝಕಿಸ್ಥಾನಿ, ಮಯನ್ಮಾರ್ ಹಣ, ಎರಡು ಮೊಬೈಲ್ ಫೋನ್‌ಗಳು ಸಿಕ್ಕಿವೆ. NDPS ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಮಾದಕ ದ್ರವ್ಯದ ಮೂಲ ಮತ್ತು ಗಡಿಯಾಚೆಗಿನ ಕಳ್ಳಸಾಗಾಣಿಕೆಯ ಬಗ್ಗೆ ತನಿಖೆ ಶುರುವಾಗಿದೆ.
ಈ ಸುದ್ದಿಯನ್ನು ಓದಿ: Stampede in Vijay's Rally: ನಟ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ; ಹೈಲರ್ಟ್!
ಪಂಜಾಬ್‌ನ ಕಾರ್ಯಾಚರಣೆ
ಪಂಜಾಬ್‌ನ ಕೌಂಟರ್-ಇಂಟೆಲಿಜೆನ್ಸ್ ತಂಡವು ಸೆಪ್ಟೆಂಬರ್ 28ರಂದು ಪಾಕಿಸ್ತಾನದಿಂದ ಕಳ್ಳಸಾಗಾಣಿಕೆಯಾಗುವ ಮಾದಕ ದ್ರವ್ಯ ಜಾಲವನ್ನು ಭೇದಿಸಿತು. ಅಕಾಶ್‌ದೀಪ್ ಸಿಂಗ್ (ಟೋನಿ) ಮತ್ತು ಪವನ್‌ಬೀರ್ ಸಿಂಗ್ ಎಂಬ ಇಬ್ಬರನ್ನು 4 ಕೆಜಿ ಹೆರಾಯಿನ್ ಜೊತೆ ಬಂಧಿಸಲಾಯಿತು. DGP ಗೌರವ್ ಯಾದವ್, “ಅಮೃತಸರದಲ್ಲಿ ಈ ಜಾಲವನ್ನು ಭೇದಿಸಿಲಾಗಿದೆ” ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಪಾಕಿಸ್ತಾನದ ರಾಣಾ ಕಿಂಗ್ ಸೂಚನೆಯಂತೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೇಘಾಲಯ ಪೊಲೀಸರು, ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಿ ಎಂದು ಜನರಿಗೆ ಕೋರಿದ್ದು. ಮಾದಕ ದ್ರವ್ಯದ ವಿರುದ್ಧ ಸಮುದಾಯದ ಸಹಕಾರ ಅಗತ್ಯ ಎಂದಿದ್ದಾರೆ. ಈ ಬಂಧನಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿವೆ. ಗಡಿಯಾಚೆಗಿನ ಮಾದಕ ದ್ರವ್ಯ ಕಳ್ಳಸಾಗಾಣಿಕೆಗೆ ಕಠಿಣ ಕ್ರಮ ಬೇಕು” ಎಂದು ಜನರು ಹೇಳಿದ್ದಾರೆ. ಈ ಕಾರ್ಯಾಚರಣೆಗಳು ದೇಶದ ಭದ್ರತೆಗೆ ಪೊಲೀಸರ ಬದ್ಧತೆಯನ್ನು ತೋರಿಸಿವೆ.