ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LPG: ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ!

Cooking gas Cylinder: ಎಲ್ಲರೂ ಗಮನಿಸಲೇಬೇಕಾದ ಸುದ್ದಿಯೊಂದು ಇಲ್ಲಿದೆ. ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುವವರು ಹೆಚ್ಚುವರಿ ಹಣ ಕೇಳಿದರೆ ದೂರು ನೀಡಿ. ಯಾಕೆಂದರೆ ಅಡುಗೆ ಅನಿಲ ಸಿಲಿಂಡರ್ ಮನೆಗೆ ಪೂರೈಕೆ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ಕೊಡಬೇಕಾಗಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತ ನೀಡಿದರೆ ಸಾಕು ಎಂದು ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಹೇಳಿದೆ.

ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ!

-

ಬೆಂಗಳೂರು: ಎಲ್ಲ ಮನೆಯಲ್ಲೂ ಈಗ ಅಡುಗೆ ಅನಿಲ (LPG cylinders) ಬಳಕೆಯಾಗುತ್ತಿದೆ. ಇದನ್ನೇ ಲಾಭ ಮಾಡಿಕೊಳ್ಳುವ ಗ್ಯಾಸ್ ಏಜೆನ್ಸಿಗಳು (gas agency) ಗ್ರಾಹಕರಿಂದ ಸಿಲಿಂಡರ್ (LPG cylinder delivery charges) ಮನೆ ಮನೆ ಪೂರೈಕೆ ನೆಪದಲ್ಲಿ ಹೆಚ್ಚುವರಿ ಹಣ ಸಂಗ್ರಹ ಮಾಡುತ್ತಿದೆ. ಮನೆ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಅನಿಲ ಪೂರೈಕೆದಾರರು ಇದನ್ನು ಕೇಳಿದರೆ ದೂರು ನೀಡಬಹುದು. ಹೀಗಾಗಿ ಮನೆಗೆ ಸರಬರಾಜಾಗುವ ಅಡುಗೆ ಅನಿಲದ ಸಿಲಿಂಡರ್ ಗೆ ಗ್ರಾಹಕರು ಡೆಲಿವರಿಗೆ ಶುಲ್ಕ (delivery charges) ನೀಡುವ ಅಗತ್ಯವಿಲ್ಲ. ಬಿಲ್‌ನಲ್ಲಿ ನಮೂದಿಸಿರುವ ಮೊತ್ತವನ್ನುನೀಡಿದರೆ ಮಾತ್ರ ಸಾಕು ಎಂದು ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಹೇಳಲಾಗಿದೆ.

ಗೃಹ ಬಳಕೆಯ ಅಡುಗೆ ಸಿಲಿಂಡರ್ ಗಳನ್ನು ಗ್ಯಾಸ್ ಏಜೆನ್ಸಿಗಳು ನೇರವಾಗಿ ಗೋದಾಮಿನಿಂದ ಪೂರೈಕೆ ಮಾಡಬಹುದು. ಇದಕ್ಕಾಗಿ ಯಾವುದೇ ರೀತಿಯ ಅಂಗಡಿಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಅಡುಗೆ ಸಿಲಿಂಡರ್ ಅನ್ನು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸರ್ಕಾರ, ಅನಿಲ ಪೂರೈಕೆ ಶುಲ್ಕ ಸಂಬಂಧಿತವಾಗಿ 2006ರಲ್ಲೇ ತಿದ್ದುಪಡಿ ಮಾಡಲಾಗಿದೆ. ಪ್ರತಿ 1.5 ಕಿ.ಮೀ. ವರೆಗೆ ಅಡುಗೆ ಅನಿಲವನ್ನು ಯಾವುದೇ ಶುಲ್ಕವಿಲ್ಲದೆ ಪೂರೈಕೆ ಮಾಡಬೇಕು ಎಂದು ಹೇಳಿದೆ. 2.5 ಕಿ.ಮೀ. ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿ.ಮೀ.ಗೆ ಪ್ರತಿ ಸಿಲಿಂಡರ್ ಗೆ ಪೂರೈಕೆ ಶುಲ್ಕವಾಗಿ 1.60 ರೂ. ಮಾತ್ರ ವಿಧಿಸತಕ್ಕದ್ದು. ಒಂದು ವೇಳೆ ಇದಕ್ಕಿಂತ ಹೆಚ್ಚು ಶುಲ್ಕವನ್ನು ಡೆಲಿವರಿ ಹುಡುಗರು ಕೇಳಿದರೆ ದೂರು ನೀಡಬಹುದು.

ಇದನ್ನೂ ಓದಿ: Madduru Stone Pelting: ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪೂರ್ವಯೋಜಿತ ಕೃತ್ಯವೇ? ಬಯಲಾಯ್ತು ಸ್ಫೋಟಕ ಸಂಗತಿ

ಈ ಕುರಿತು ಮಾಹಿತಿ ಮತ್ತು ದೂರು ನೀಡಲು ಜಂಟಿ ನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯಾಲಯ ಅಥವಾ ದೂ ಸಂಖ್ಯೆ 08172-268229 ಅನ್ನು ಸಂಪರ್ಕಿಸಬಹುದು. ಪ್ರತಿ ತಾಲೂಕಿನಲ್ಲಿ ತಹಶೀಲ್ದಾರರ ಕಚೇರಿಯಲ್ಲಿರುವ ಆಹಾರ ಶಾಖೆಗೂ ದೂರು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.