ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flight: ದಿಲ್ಲಿ- ಶ್ರೀನಗರ ಇಂಡಿಗೋ ವಿಮಾನದ ಹಾರಾಟದಲ್ಲಿ ಅಡಚಣೆ ; ತನ್ನ ವಾಯುಪ್ರದೇಶ ಬಳಸಲು ಪಾಕ್‌ ನಕಾರ

200ಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತು ದಿಲ್ಲಿಯಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ (IndiGo Flight) ತೀವ್ರ ಗಾಳಿಯ ಕ್ಷೋಭೆ ಹಾಗೂ ಆಲಿಕಲ್ಲಿಗೆ ಸಿಲುಕಿ ವಿಮಾನ ಮುಂಭಾಗ ಹಾನಿಗೊಳಗಾದ ಘಟನೆ ನಡೆದಿತ್ತು. ಆ ಸಮಯದಲ್ಲಿ ಕ್ಷುಬ್ಧತೆಯನ್ನು ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯ ಪ್ರವೇಶಿಸಲು ಇಂಡಿಗೋ ಸಂಸ್ಥೆ ಪಾಕಿಸ್ತಾನದ ಬಳಿ ಮನವಿ ಮಾಡಿತ್ತು.

ಇಂಡಿಗೋ ವಿಮಾನಕ್ಕೆ  ತನ್ನ ವಾಯುಪ್ರದೇಶ ಬಳಸಲು ಪಾಕ್‌ ನಕಾರ

Profile Vishakha Bhat May 23, 2025 8:42 AM

ನವದೆಹಲಿ: 200ಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತು ದಿಲ್ಲಿಯಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ (IndiGo Flight) ತೀವ್ರ ಗಾಳಿಯ ಕ್ಷೋಭೆ ಹಾಗೂ ಆಲಿಕಲ್ಲಿಗೆ ಸಿಲುಕಿ ವಿಮಾನ ಮುಂಭಾಗ ಹಾನಿಗೊಳಗಾದ ಘಟನೆ ನಡೆದಿತ್ತು. ಆ ಸಮಯದಲ್ಲಿ ಕ್ಷುಬ್ಧತೆಯನ್ನು ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯ ಪ್ರವೇಶಿಸಲು ಇಂಡಿಗೋ ಸಂಸ್ಥೆ ಪಾಕಿಸ್ತಾನದ ಬಳಿ ಮನವಿ ಮಾಡಿತ್ತು. ಆದರೆ ಪಾಕ್‌ ಆ ಕೋರಿಕೆಯನ್ನು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ. ವಿಮಾನವನ್ನು ಲಾಹೋರ್‌ ಪ್ರದೇಶದ ವಾಯುಪ್ರದೇಶವನ್ನು ಬಳಕೆ ಮಾಡಲು ವಿನಂತಿ ಮಾಡಲಾಗಿತ್ತು.

ಅಮೃತಸರ ಬಳಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಅಸ್ಥಿರ ವಾತಾವರಣ ಉಂಟಾಯಿತು. ತಕ್ಷಣವೇ ಪೈಲಟ್‌ ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಣವನ್ನು ಸಂಪರ್ಕಿಸಿ ತನ್ನ ವಾಯುಪ್ರದೇಶದವನ್ನು ಕೋರಿದ್ದರು. ಆದರೆ ಪಾಕಿಸ್ತಾನ ಅದನ್ನು ತಿರಸ್ಕರಿಸಿದೆ.

ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ಟರ್ಬುಲೆನ್ಸ್‌ಗೆ ತುತ್ತಾಗಿದ್ದು, ಪೈಲಟ್ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ವರದಿ ಮಾಡಿದರು. ಕೊನೆಗೆ 227 ಪ್ರಯಾಣಿಕರಿದ್ದ ವಿಮಾನವು ಸಂಜೆ 6.30ಕ್ಕೆ ಸುರಕ್ಷಿತವಾಗಿ ಶ್ರೀನಗರಕ್ಕೆ ಬಂದಿಳಿದೆ. ಹಠಾತ್ ಆಲಿಕಲ್ಲು ಮಳೆಯಿಂದ ದಿಲ್ಲಿಯಿಂದ ಶ್ರೀನಗರಕ್ಕೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6ಇ2142 ಮಾರ್ಗಮಧ್ಯೆ ಪ್ರಕ್ಷುಬ್ಧತೆ ಎದುರಿಸಿತು. ಕೂಡಲೇ ವಿಮಾನ ಮತ್ತು ಕ್ಯಾಬಿನ್ ಸಿಬ್ಬಂದಿ ನಿಯಮ ಪಾಲಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ ಮತ್ತು ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಇಂಡಿಗೋ ಟ್ವೀಟ್‌ ಮಾಡಿ ತಿಳಿಸಿತ್ತು.

ವಿಮಾನ ಹಾರಲು ನೆರವಾಗುವ ಗಾಳಿಯ ಒತ್ತಡದಲ್ಲಿ ದಿಢೀರ್‌ ಬದಲಾವಣೆಯಾಗುವುದನ್ನು ಪ್ರಕ್ಷುಬ್ಧತೆ ಎಂದು ಕರೆಯಲಾಗುತ್ತದೆ. ಹವಾಮಾನ ವೈಪರೀತ್ಯದಿಂದ ಇದು ಸಂಭವಿಸುತ್ತದೆ. ಇದರಿಂದಾಗಿ ಹಾರುವ ವಿಮಾನವು ಏಕಾಏಕಿ ಅಲುಗಾಡಲು ಶುರುವಾಗುತ್ತದೆ. ಒಂದು ವಿಮಾನ ಹಾರುವಾಗ ಅದರ ಮೇಲೆ ಹಾಗೂ ಕೆಳಗೆ ಗಾಳಿಯ ಚಲನೆ ಅಥವಾ ಒತ್ತಡ ಇರುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ಏರುಪೇರಾಗುವುದು ಸಹಜ. ಹೀಗೆ ಹವಾಮಾನದಲ್ಲಿ ಏಕಾಏಕಿ ಬದಲಾವಣೆಯಾದಾಗ ವಿಮಾನವು ತೊಂದರೆಗೆ ಸಿಲುಕುತ್ತದೆ.

ಈ ಸುದ್ದಿಯನ್ನೂ ಓದಿ: Jyoti Malhotra: ಪಾಕಿಸ್ತಾನ ಪರ ಬೇಹುಗಾರಿಕೆ- ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪೊಲೀಸ್ ಕಸ್ಟಡಿ 4 ದಿನಗಳವರೆಗೆ ವಿಸ್ತರಣೆ

ಆಪರೇಷನ್‌ ಸಿಂದೂರದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ, ಎರಡೂ ದೇಶಗಳ ನಡುವಿನ ವಾಯುಪ್ರದೇಶದ ನಿರ್ಬಂಧಗಳು ಜಾರಿಯಲ್ಲಿವೆ. ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಮತ್ತು ಭಾರತವು ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳು ತನ್ನ ವಾಯುಪ್ರದೇಶವನ್ನು ಬಳಸದಂತೆ ನಿರ್ಬಂಧಿಸಿದೆ.