ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ʼಮಗು ಬೇಕಾದರೆ ಪತ್ನಿಯನ್ನು ನನ್ನ ಬಳಿಗೆ ಕಳ್ಸುʼʼ: ಟಿಸಿಎಸ್ ಉದ್ಯೋಗಿ ಬಳಿ ಬಾಸ್‌ನ ಅಸಭ್ಯ ನಡವಳಿಕೆ

TCS employee’s assault: ಮಹಾರಾಷ್ಟ್ರದ ನಾಸಿಕ್ ಶಾಖೆಯ ಟಿಸಿಎಸ್ ಕಂಪನಿಯ ಪುರುಷ ಉದ್ಯೋಗಿಯೊಬ್ಬರು ಟೋಪಿ ಹಾಕಿ ನಮಾಜ್ ಮಾಡಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಕಳುಹಿಸು ಎಂದು ಬಾಸ್‌ ಹೇಳಿದ್ದಾಗಿ ಮತ್ತೊಬ್ಬ ಉದ್ಯೋಗಿ ತಿಳಿಸಿದ್ದಾರೆ. ಆ ಮೂಲಕ ಟಿಸಿಎಸ್ ಕಂಪನಿಯ ಕರ್ಮಕಾಂಡ ಬಗೆದಷ್ಟೂ ಹೊರ ಬರುತ್ತಿದೆ.

ಸಾಂದರ್ಭಿಕ ಚಿತ್ರ

ಮುಂಬೈ, ಏ. 16: ಮಹಾರಾಷ್ಟ್ರದ ನಾಸಿಕ್ ಶಾಖೆಯ ಟಿಸಿಎಸ್‌ ಕಂಪನಿಯಲ್ಲಿ (TCS company) ಮಹಿಳಾ ಉದ್ಯೋಗಿಗಳು ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಆರು ಮಂದಿ ಟೆಕ್ಕಿಗಳನ್ನು ಬಂಧಿಸಲಾಗಿದೆ. ಇದೀಗ ಪುರುಷ ಉದ್ಯೋಗೊಯೊಬ್ಬರು ತನ್ನ ಮೇಲಾದ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ಟೋಪಿ ಹಾಕಿ ನಮಾಜ್ ಮಾಡಲು ಒತ್ತಾಯಿಸಲಾಗಿದೆ. ಅಲ್ಲದೆ ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸು ಎಂದು ಬಾಸ್‌ ಹೇಳಿದ್ದಾನೆ ಎಂದು ಅವರು ಆರೋಪಿಸಿದ್ದಾರೆ (crime news).

ಮಾಧ್ಯಮದೊಂದಿಗೆ ತನಗಾದ ಅನುಭವವನ್ನು ವಿವರಿಸುತ್ತಾ ಟೀಮ್‌ ಲೀಡರ್‌ನ ನಡವಳಿಕೆಯನ್ನು ವಿವರಿಸಿದ್ದಾರೆ. ನಮಾಜ್ ಮಾಡಲು, ಕಲ್ಮಾ ಪಠಿಸಲು ಮತ್ತು ತಲೆಗೆ ಟೋಪಿ ಹಾಕಲು ತನ್ನನ್ನು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಆರೋಪಿಗಳಲ್ಲಿ ಒಬ್ಬ ತನ್ನ ವೈಯಕ್ತಿಕ ಜೀವನವನ್ನು ಅಣಕಿಸುತ್ತಾ, ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ಮಗು ಬೇಕಾದರೆ ನಿನ್ನ ಹೆಂಡತಿಯನ್ನು ತನ್ನಲ್ಲಿಗೆ ಕಳುಹಿಸು ಎಂದು ಕೀಳುಮಟ್ಟದ ಮಾತುಗಳನ್ನಾಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತ ಉದ್ಯೋಗಿಯ ಪ್ರಕಾರ, 2022ರಲ್ಲಿ ಕಂಪನಿಗೆ ಸೇರಿದ ಸ್ವಲ್ಪ ಸಮಯದ ನಂತರ ಕಿರುಕುಳ ಪ್ರಾರಂಭವಾಯಿತು. ಟೀಮ್ ಲೀಡರ್ ತೌಸಿಫ್ ಅಖ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ಎಂಬುವವರು ತನ್ನನ್ನು ಟಾರ್ಗೆಟ್ ಮಾಡಲು ಪ್ರಾರಂಭಿಸಿದರು ಎಂದು ದೂರಿದ್ದಾರೆ. ಅಧಿಕಾರದ ಸ್ಥಾನದಲ್ಲಿದ್ದ ತೌಸಿಫ್, ತಾನು ಹೇಳಿದ ಎಲ್ಲ ಸೂಚನೆಗಳನ್ನು ಪಾಲಿಸುವಂತೆ ಆಗ್ರಹಿಸಿದ್ದಾನೆ. ಜತೆಗೆ ಇತರರಿಗೆ ಹೆಚ್ಚುವರಿ ಕೆಲಸಗಳನ್ನು ಅವರ ಮೇಲೆ ಹೊರಿಸಿದ್ದಾನೆ.

ಬಗೆದಷ್ಟು ಬಯಲಾಗುತ್ತಿದೆ TCS ಮತಾಂತರ ದಂಧೆ: ಲೈಂಗಿಕ ಕಿರುಕುಳ, ಮತಾಂತರದ ಬೃಹತ್ ಜಾಲ ಬಯಲು

ಟಿಸಿಎಸ್ ನಾಸಿಕ್‌ನ 23 ವರ್ಷದ ಮಹಿಳಾ ಉದ್ಯೋಗಿಯೊಬ್ಬರು ಸಲ್ಲಿಸಿದ ಎಫ್‌ಐಆರ್‌ನಲ್ಲಿ ಮೊದಲು ಡ್ಯಾನಿಶ್ ಮತ್ತು ತೌಸಿಫ್ ಇಬ್ಬರನ್ನೂ ಹೆಸರಿಸಲಾಯಿತು. ಡ್ಯಾನಿಶ್ ತನ್ನನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದ. ಅಷ್ಟೇ ಅಲ್ಲ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಡ್ಯಾನಿಶ್‌ನ ಸಹಚರರಾದ ತೌಸಿಫ್ ಮತ್ತು ಎಚ್ಆರ್ ನಿದಾ ಖಾನ್ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು. ಧಾರ್ಮಿಕ ನಂಬಿಕೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು ಎಂದು ಆಕೆ ಆರೋಪಿಸಿದ್ದರು. ಘಟನೆಯ ತನಿಖೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ರಹಸ್ಯ ಏಜೆಂಟ್‌ಗಳಾಗಿ ಕಳುಹಿಸಲಾಯಿತು.

ನಂತರ ಐದು ಪುರುಷ ಆರೋಪಿಗಳು ಮತ್ತು ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಲಾಗಿದೆ. ಐಟಿ ದೈತ್ಯ ಸಂಸ್ಥೆಯ ನಾಸಿಕ್ ಶಾಖೆಯಿಂದ ಹಲವು ಮಹಿಳಾ ಉದ್ಯೋಗಿಗಳಿಂದ ಬಂದ ದೂರುಗಳ ಆಧಾರದ ಮೇಲೆ ಪೊಲೀಸರು ಒಂಭತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಿರುಕುಳ ಕೇವಲ ನಿಂದನೆಗೆ ಸೀಮಿತವಾಗಿರಲಿಲ್ಲ. ರಾತ್ರಿ ಪಾಳಿಗಳ ನಂತರ ಹೋಟೆಲ್‌ಗಳಿಗೆ ಕರೆದೊಯ್ಯಲಾಯಿತು. ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದರೂ ಮಾಂಸಾಹಾರಿ ಆಹಾರವನ್ನು ತಿನ್ನಲು ಒತ್ತಡ ಹೇರಲಾಯಿತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಅವರ ನಂಬಿಕೆಗಳನ್ನು ಅಪಹಾಸ್ಯ ಮಾಡಲಾಯಿತು ಎಂದು ಆರೋಪಿಸಲಾಗಿದೆ.