ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯಸಭಾ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಹಿನ್ನಡೆ; ಬಿಹಾರದ ಎಲ್ಲ ಸ್ಥಾನಗಳನ್ನು ಗೆದ್ದ ಎನ್‌ಡಿಎ

ಬಿಹಾರದ ಎಲ್ಲಾ 5 ರಾಜ್ಯಸಭಾ ಸ್ಥಾನಗಳು, ಒಡಿಶಾದ 2 ಸ್ಥಾನಗಳನ್ನು ಎನ್ ಡಿಎ ಗೆದ್ದುಕೊಂಡಿದ್ದು, ಇದರಿಂದ ಮಹಾಘಟಬಂಧನ್ ಗೆ ಭಾರಿ ಹಿನ್ನಡೆಯಾಗಿದೆ. 10 ರಾಜ್ಯಗಳಾದ್ಯಂತ 37 ರಾಜ್ಯಸಭೆ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಹಾರ, ಒಡಿಶಾ ಮತ್ತು ಹರಿಯಾಣದ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದ್ದು, ಇತರ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ರಾಜ್ಯಸಭೆಯ (Rajya sabha election) ಹಲವು ಹಾಲಿ ಸದಸ್ಯರ ಅವಧಿ ಏಪ್ರಿಲ್‌ಗೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ 10 ರಾಜ್ಯಗಳ 37 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ. ಇದರಲ್ಲಿ ಬಿಹಾರ (Bihar), ಒಡಿಶಾ (odisha) ಮತ್ತು ಹರಿಯಾಣದ (Haryana) ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಬಿಹಾರದಲ್ಲಿ ಎಲ್ಲ ಮತ್ತು ಒಡಿಶಾದ 2 ರಾಜ್ಯಸಭಾ ಸ್ಥಾನಗಳನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (National Democratic Alliance) ಗೆದ್ದುಕೊಂಡಿದೆ. ಇದರಿಂದ ಮಹಾಘಟಬಂಧನ್ (Mahagathbandhan)ಗೆ ಭಾರಿ ಮುಖಭಂಗ ಆದಂತಾಗಿದೆ. ಇತರ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ನಡೆಸಲಾಗಿದೆ.

ಸೋಮವಾರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ನಡೆದ ಮತದಾನದ ಬಳಿಕ 5 ಗಂಟೆಯಿಂದ ಮತ ಎಣಿಕೆಯನ್ನು ಆರಂಭಿಸಲಾಗಿತ್ತು. ಅದರ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವಿರೋಧ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ್ದರೂ ಎನ್ ಡಿಎ ಮೈತ್ರಿಕೂಟವು ಒಡಿಶಾದಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.

LPG Crisis: ಮಂಗಳೂರಿಗೆ ಬಂತು 26 ಸಾವಿರ ಟನ್‌ ಎಲ್‌ಪಿಜಿ ತುಂಬಿದ ಹಡಗು

ಬಿಹಾರದಲ್ಲಿ ಎನ್ ಡಿಎ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೆಲುವು ಸಾಧಿಸಿದ್ದು, ಎನ್ ಡಿಎ ಸೇರಿದ ಎಲ್ಲಾ 202 ಶಾಸಕರು ಮತದಾನದಲ್ಲಿ ಭಾಗವಹಿಸಿದ್ದರು.

ನಿತೀಶ್ ಕುಮಾರ್ 44 ಶಾಸಕರ ಬೆಂಬಲ ಪಡೆದಿದ್ದರೆ, ನಿತಿನ್ ನಬಿನ್ ಕೂಡ 44 ಶಾಸಕರ ಬೆಂಬಲವನ್ನು ಪಡೆದರು. ರಾಷ್ಟ್ರೀಯ ಲೋಕ ಮೋರ್ಚಾ ನಾಯಕ ಉಪೇಂದ್ರ ಕುಶ್ವಾಹ 42, ರಾಮನಾಥ್ ಠಾಕೂರ್ 42 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವೇಶ್ ಕುಮಾರ್ ಅವರು ಆರ್‌ಜೆಡಿ ಅಭ್ಯರ್ಥಿ ಎ.ಡಿ. ಸಿಂಗ್ ಅವರನ್ನು ಸೋಲಿಸಿದ್ದು, ಶಿವೇಶ್ ಕುಮಾರ್ ಒಟ್ಟು 4,202 ಮತಗಳ ಮೌಲ್ಯವನ್ನು ಗಳಿಸಿದರೆ, ಎ.ಡಿ. ಸಿಂಗ್ ಒಟ್ಟು 3,700 ಮತಗಳ ಮೌಲ್ಯವನ್ನು ಗಳಿಸಿದ್ದಾರೆ.

ಇದರೊಂದಿಗೆ ನಿತೀಶ್ ಕುಮಾರ್ ಅವರ ಜೆಡಿ(ಯು), ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಜ್ಯಸಭಾ ಸ್ಪರ್ಧೆಯಲ್ಲಿರುವ ಐದು ಅಭ್ಯರ್ಥಿಗಳಲ್ಲಿ ಒಬ್ಬರಾದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಗೆಲುವು ದಾಖಲಿಸಿದೆ.

ರಾಜ್ಯಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಮಹಾಘಟಬಂಧನ್ ಭಾರಿ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ನ ಮೂವರು ಶಾಸಕರು ಮತ್ತು ಆರ್‌ಜೆಡಿಯ ಒಬ್ಬರು ಮತದಾನಕ್ಕೆ ಗೈರುಹಾಜರಾಗಿದ್ದರು. ವಿರೋಧ ಪಕ್ಷದ ಒಕ್ಕೂಟ ಸೇರದೇ ಇದ್ದವರು ಎಐಎಂಐಎಂ ಮತ್ತು ಬಿಎಸ್‌ಪಿಗಳು ಹಾಜರಾಗಿದ್ದರು.

ಬಿಹಾರ ವಿಧಾನಸಭೆಯಲ್ಲಿ ಐದು ಶಾಸಕರನ್ನು ಹೊಂದಿರುವ ಎಐಎಂಐಎಂ ಮತ್ತು ಏಕೈಕ ಬಿಎಸ್‌ಪಿ ಶಾಸಕರು ಆರ್‌ಜೆಡಿ ಅಭ್ಯರ್ಥಿ ಅಮರೇಂದ್ರ ಧಾರಿ ಸಿಂಗ್ ಪರವಾಗಿ ಮತ ಚಲಾಯಿಸಿದ್ದಾರೆ. ಗೈರುಹಾಜರಾದ ಶಾಸಕರು ಇದ್ದಿದ್ದರೆ ವಿರೋಧ ಪಕ್ಷವು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಪಡೆಯಬಹುದಿತ್ತು. ಬಿಹಾರದಲ್ಲಿ ಎಲ್ಲಾ 243 ಶಾಸಕರು ಮತದಾನದಲ್ಲಿ ಭಾಗವಹಿಸಿದ್ದು, ಪ್ರತಿ ಅಭ್ಯರ್ಥಿಗೆ ಗೆಲ್ಲಲು ಕನಿಷ್ಠ 41 ಮತಗಳು ಬೇಕಾಗಿದ್ದವು.

ಒಡಿಶಾದ ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತಪತ್ರ ವಿವಾದ ಉಂಟಾಗಿ ಕೆಲಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಒಡಿಶಾದಲ್ಲಿ ವಿರೋಧ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಎನ್‌ಡಿಎ ಎರಡು ರಾಜ್ಯಸಭಾ ಸ್ಥಾನಗಳನ್ನು ಪಡೆದುಕೊಂಡಿತು. ಹಿರಿಯ ಬಿಜೆಪಿ ನಾಯಕ ಮತ್ತು ಒಡಿಶಾ ರಾಜ್ಯಾಧ್ಯಕ್ಷ ಮನಮೋಹನ್ ಸಮಲ್ ಒಂದು ಸ್ಥಾನವನ್ನು ಗೆದ್ದಿದ್ದು, ಹಾಲಿ ರಾಜ್ಯಸಭಾ ಸದಸ್ಯ ಬಿಜೆಪಿ ಅಭ್ಯರ್ಥಿ ಸುಜೀತ್ ಕುಮಾರ್ ಮರು ಆಯ್ಕೆಯಾಗಿದ್ದಾರೆ.

NHPC Recruitment: ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; 81 ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದು, ಬಿಜೆಡಿ ಮತ್ತು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರು. ಪ್ರಾದೇಶಿಕ ಪಕ್ಷವಾದ ಬಿಜು ಜನತಾ ದಳದ ಸಾಂಟ್ರಪ್ಟ್ ಮಿಶ್ರಾ ಗೆಲುವು ದಾಖಲಿಸಿದರು.

ವಿದ್ಯಾ ಇರ್ವತ್ತೂರು

View all posts by this author