ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದ ಶಹಜಾದ್ ಪೂನಾವಾಲಾ ( Shehzad Poonawalla) ಅಧಿಕೃತವಾಗಿ ಪಕ್ಷವನ್ನು ತೊರೆದಿದ್ದಾರೆ. ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ (BJP) ಅಧ್ಯಕ್ಷ ನಿತಿನ್ ನಬೀನ್ ಅವರಿಗೆ ವರ್ಗಾಯಿಸಿದ್ದು, ರಾಜೀನಾಮೆ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜೀನಾಮೆ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜುಲೈ 30 ರಂದು ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಪೂನಾವಾಲಾ ಸಿದ್ಧರಿದ್ದರು. ಆದರೆ ಪಕ್ಷ ಅದನ್ನು ನಿರಾಕರಿಸಿತ್ತು. ಈ ಬಾರಿ ರಾಜೀನಾಮೆ ಸ್ವೀಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಗೃಹ ಸಚಿವ ಅಮಿತ್ ಶಾ, ಬಿಎಲ್ ಸಂತೋಷ್, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಮತ್ತು ಇಡೀ ಸಂಘ ಪರಿವಾರ ಸೇರಿದಂತೆ ಎಲ್ಲಾ ಹಿರಿಯ ನಾಯಕರಿಗೆ ಪೂನಾವಾಲ ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದು, ತಮಗೆ ನೀಡಿದ ಮಾರ್ಗದರ್ಶನ, ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞನಾಗಿರುತ್ತೇನೆ ಎಂದಿ ಹೇಳಿಕೊಂಡಿದ್ದಾರೆ. ಯಾವುದೇ ರಾಜಕೀಯ ಹಿನ್ನಲೆ ಇಲ್ಲದ ಪಸ್ಮಾಂಡ್ ಮುಸ್ಲಿಂ ನನ್ನಂತಹವನ ಇಲ್ಲಿಯವರೆಗಿನ ಜೀವನ ಸಾಮಾನ್ಯವಾಗಿರಲಿಲ್ಲ. ಬಿಜೆಪಿ ನೀಡಿದ ರಾಷ್ಟ್ರೀಯ ವಕ್ತಾರನ ಸ್ಥಾನ ಮತ್ತು ಜವಾಬ್ದಾರಿಯನ್ನು ತೊರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಶಹಜಾದ್ ಪೂನಾವಾಲಾ ಟ್ವೀಟ್
"ಈ ಹಿಂದೆ ಹೇಳಿದಂತೆ, ತುರ್ತು ಆರ್ಥಿಕ ಮತ್ತು ವೈಯಕ್ತಿಕ ಸಂದರ್ಭಗಳಿಂದಾಗಿ, ನಾನು ಖಾಸಗಿ ವಲಯಕ್ಕೆ ಹೋಗುತ್ತೇನೆ, ಆದರೆ ಸಾಧ್ಯವಾದಲ್ಲೆಲ್ಲಾ ಮತ್ತು ಯಾವುದೇ ರೂಪದಲ್ಲಿ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ದೃಷ್ಟಿಕೋನ ಮತ್ತು ಕೆಲಸವನ್ನು ನಾನು ಬೆಂಬಲಿಸುವುದನ್ನು ಮುಂದುವರಿಸುತ್ತೇನೆ. ನಾನು ಹೇಳಿದಂತೆ, ನಾನು ನನ್ನ ಹುದ್ದೆಯನ್ನನ್ನಷ್ಟೇ ತೊರೆಯುತ್ತಿದ್ದೇನೆ ಹೊರತು, ವ್ಯಕ್ತಿ ಅಥವಾ ವಿಚಾರವನ್ನು ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ವಕೀಲರಾದ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು . 2017 ರಲ್ಲಿ ಅವರು ಕಾಂಗ್ರೆಸ್ಸಿನ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದಾಗ , ರಾಹುಲ್ ಗಾಂಧಿಯೊಟ್ಟಿಗೆ ಭಿನ್ನಾಭಿಪ್ರಾಯ ಪ್ರರಂಭವಾಯಿತು. ಬಳಿಕ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ತೊರೆಯುವ ನಿರ್ಧಾರದ ಕುರಿತು ಶಹಜಾದ್ ಪೂನಾವಾಲಾ ಸುಳಿವನ್ನು ನೀಡಿದ್ದರು. ಎಕ್ಸ್ ಖಾತೆಯಲ್ಲಿ ಬಿಜೆಪಿ ಎಂಬ ಪದವನ್ನು ತೆಗೆದಿದ್ದರು. ಇದೀಗ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ.