ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಿಲ್ಪಾ ಶೆಟ್ಟಿಯ ಮುಂಬೈ ಮನೆ ಮೇಲೆ ಐಟಿ ರೇಡ್‌ ಸುದ್ದಿ ಸುಳ್ಳಾ? ವಕೀಲ ಹೇಳಿದ್ದೇನು?

Shilpa Shetty: ನಟಿ ಶಿಲ್ಪಾ ಶೆಟ್ಟಿಯ ಮುಂಬೈ ನಿವಾಸದ ಮೇಲೆ ಯಾವುದೇ ಆದಾಯ ತೆರಿಗೆ ದಾಳಿ ನಡೆದಿಲ್ಲವೆಂದು ಅವರ ವಕೀಲ ಪ್ರಶಾಂತ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ದುರ್ಬಾವನೆಯುಳ್ಳ ವ್ಯಕ್ತಿಗಳು ಸುಳ್ಳು ವರದಿ ಹರಡಿದ್ದು, ಅಂಥವರು ಕಾನೂನು ಕ್ರಮಕ್ಕೆ ಒಳಗಾಗಬೇಕಾಗಬಹುದು ಎಂದು ಎಚ್ಚರಿಸಲಾಗಿದೆ.

ಶಿಲ್ಪಾ ಶೆಟ್ಟಿ ಕುಂದ್ರಾ ದಂಪತಿ (ಸಂಗ್ರಹ ಚಿತ್ರ)

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) ಅವರು ತಮ್ಮ ಮುಂಬೈ ನಿವಾಸದ ಮೇಲೆ ಆದಾಯ ತೆರಿಗೆ (income tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. ಅಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಅವರ ಕಾನೂನು ತಂಡ ತಿಳಿಸಿದೆ.

ನಟಿಯ ಪರವಾಗಿ ವಕೀಲ ಪ್ರಶಾಂತ್ ಪಾಟೀಲ್ ನೀಡಿದ ಹೇಳಿಕೆಯಲ್ಲಿ, ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ರೀತಿಯ ಆದಾಯ ತೆರಿಗೆ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ನಡೆಸಿದುದು ನಿಯಮಿತ ಪರಿಶೀಲನೆ ಮಾತ್ರ, ಶಿಲ್ಪಾ ಶೆಟ್ಟಿಯೊಂದಿಗೆ ಸಂಬಂಧಪಟ್ಟ ಫಾಲೋಅಪ್‌ಗಾಗಿ ಆಗಿತ್ತು ಎಂದು ಹೇಳಿದ್ದಾರೆ.

ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ವಿದೇಶ ಪ್ರವಾಸಕ್ಕೆ ಅನುಮತಿ ಕೊಡಿ; ಕೋರ್ಟ್‌ಗೆ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮನವಿ

ತನ್ನ ಕಕ್ಷಿದಾರ ಶ್ರೀಮತಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಸ್ಥಳದಲ್ಲಿ ಯಾವುದೇ ಆದಾಯ ತೆರಿಗೆ ದಾಳಿ ನಡೆದಿಲ್ಲ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಆರ್ಥಿಕ ಅಪರಾಧಗಳ ವಿಭಾಗ (EOW) ಒಳಗೊಂಡ ಯಾವುದೇ ಆಪಾದಿತ ಪ್ರಕರಣಕ್ಕೆ ಈ ಬೆಳವಣಿಗೆಗಳಿಗೆ ಬೇರೆ ರೀತಿಯ ಆಯಾಮ ಕೊಟ್ಟರೆ ಅಂತಹ ವ್ಯಕ್ತಿಗಳು ಅಥವಾ ಸಂಸ್ಥೆಗಳು ಸೂಕ್ತ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಕೀಲ ಪಾಟೀಲ್ ಎಚ್ಚರಿಸಿದ್ದಾರೆ.

ನಟಿಯ ರೆಸ್ಟೋರೆಂಟ್ ವ್ಯವಹಾರವಾದ ಬಾಸ್ಟಿಯನ್‌ಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಅಧಿಕಾರಿಗಳು ನಟಿಯ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂಬ ವರದಿಗಳು ಹಬ್ಬಿದ ಬಳಿಕ ಶಿಲ್ಪಾ ಪರ ವಕೀಲರು ಈ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ 2014 ರಲ್ಲಿ ಸ್ಥಾಪನೆಯಾದ ಬ್ರ್ಯಾಂಡ್‌ನ ಸಹ-ಮಾಲೀಕರಾಗಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಡಿಸೆಂಬರ್ 17ರ ಬುಧವಾರ ಬೆಳಗ್ಗೆ ಮುಂಬೈನ ದಾದರ್ ಪ್ರದೇಶದಲ್ಲಿರುವ ಬಾಸ್ಟಿಯನ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆಲವು ಸ್ಥಳಗಳಲ್ಲಿಯೂ ಶೋಧ ನಡೆಸಲಾಗಿದೆ ಎಂದು ವರದಿಯಾಗಿದೆ.

ಈ ವಾರದ ಆರಂಭದಲ್ಲಿ, ಬೆಂಗಳೂರು ಪೊಲೀಸರು ಬಾಸ್ಟಿಯನ್ ವಿರುದ್ಧ ಅನುಮತಿಸಲಾದ ಸಮಯಕ್ಕಿಂತ ಹೆಚ್ಚು ಸಮಯ ಕಾರ್ಯನಿರ್ವಹಿಸಿದ್ದಕ್ಕಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ತಡರಾತ್ರಿ ಪಾರ್ಟಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದರು. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 103 ರ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Shilpa Shetty: 60 ಕೋಟಿ ವಂಚನೆ ಪ್ರಕರಣ: ಸತತ 4 ಗಂಟೆ ವಿಚಾರಣೆ ಎದುರಿಸಿದ ಕುಂದ್ರಾ ದಂಪತಿ

ಡಿಸೆಂಬರ್ 11 ರಂದು ಬೆಳಗಿನ ಜಾವ 1.30 ರವರೆಗೆ ರೆಸ್ಟೋರೆಂಟ್ ಮುಚ್ಚುವ ನಿಗದಿತ ಸಮಯವನ್ನು ಮೀರಿ ಕಾರ್ಯಾಚರಣೆ ಮುಂದುವರಿಸಿದೆ ಎಂದು ಆರೋಪಿಸಲಾಗಿದೆ. ರೆಸ್ಟೋರೆಂಟ್‌ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಆರ್ಥಿಕ ಅಪರಾಧ ವಿಭಾಗವು ಪ್ರಕರಣ ದಾಖಲಿಸಿದೆ. ಈ ಸಮಯದಲ್ಲಿ ಬಾಸ್ಟಿಯನ್ ಸುತ್ತಲಿನ ಸಮಸ್ಯೆಗಳು ಹೊರಹೊಮ್ಮಿವೆ. ಆದರೆ, ಎಲ್ಲಾ ಆರೋಪಗಳನ್ನು ಶಿಲ್ಪಾ ಶೆಟ್ಟಿ ನಿರಾಕರಿಸಿದ್ದಾರೆ.