ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀರಾಮ್ ಜನರಲ್ ಇನ್ಷುರನ್ಸ್ ಮತ್ತು ಪಿರಮಲ್ ಫೈನಾನ್ಸ್ ತಂತ್ರಾತ್ಮಕ ಸಹಭಾಗಿತ್ವಕ್ಕೆ ಕೈಜೋಡಿಕೆ

ಪಿರಮಲ್ ಫೈನಾನ್ಸ್‌ನ 701 ಶಾಖೆಗಳ ವ್ಯಾಪಕ ಜಾಲವನ್ನು ಬಳಸಿ ಕೊಂಡು ಶ್ರೀರಾಮ್ ಜನರಲ್ ಇನ್ಷುರನ್ಸ್ ತನ್ನ ವಿವಿಧ ವಿಮಾ ಉತ್ಪನ್ನಗಳನ್ನು ದೇಶದ 26 ರಾಜ್ಯಗಳು ಹಾಗೂ 13 ಸಾವಿರ ಕ್ಕೂ ಹೆಚ್ಚು ಪಿನ್‌ಕೋಡ್ ಪ್ರದೇಶಗಳ ಗ್ರಾಹಕರಿಗೆ ತಲುಪಿಸಲಿದೆ. ಗ್ರಾಹಕರ ಆಸ್ತಿ, ಜೀವನೋ ಪಾಯ ಮತ್ತು ದೀರ್ಘಕಾಲಿಕ ಆರ್ಥಿಕ ಭದ್ರತೆಯನ್ನು ಕಾಪಾಡಲು ಈ ಸಹಭಾಗಿತ್ವವು ಸಹಕಾರಿಯಾಗಲಿದೆ.

ಮುಂಬೈ: ಶ್ರೀರಾಮ್ ಜನರಲ್ ಇನ್ಷುರನ್ಸ್ (Shriram General Insurance) ಮತ್ತು ಪಿರಮಲ್ ಫೈನಾನ್ಸ್ (Piramal Finance) ಭಾರತದಲ್ಲಿ ವಿಮಾ ರಕ್ಷಣೆಯನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಮಹತ್ವದ ಕಾರ್ಪೊರೇಟ್ ಏಜೆನ್ಸಿ ಪಾಲುದಾರಿಕೆ ಯನ್ನು ಘೋಷಿಸಿವೆ. ಈ ಮೂಲಕ ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶ ಗಳಲ್ಲಿ ವಿಮಾ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.

ಈ ಒಪ್ಪಂದದಡಿ, ಪಿರಮಲ್ ಫೈನಾನ್ಸ್‌ನ 701 ಶಾಖೆಗಳ ವ್ಯಾಪಕ ಜಾಲವನ್ನು ಬಳಸಿ ಕೊಂಡು ಶ್ರಿರಾಮ್ ಜನರಲ್ ಇನ್ಷುರನ್ಸ್ ತನ್ನ ವಿವಿಧ ವಿಮಾ ಉತ್ಪನ್ನಗಳನ್ನು ದೇಶದ 26 ರಾಜ್ಯಗಳು ಹಾಗೂ 13 ಸಾವಿರಕ್ಕೂ ಹೆಚ್ಚು ಪಿನ್‌ಕೋಡ್ ಪ್ರದೇಶಗಳ ಗ್ರಾಹಕರಿಗೆ ತಲುಪಿಸ ಲಿದೆ. ಗ್ರಾಹಕರ ಆಸ್ತಿ, ಜೀವನೋಪಾಯ ಮತ್ತು ದೀರ್ಘಕಾಲಿಕ ಆರ್ಥಿಕ ಭದ್ರತೆ ಕಾಪಾಡಲು ಈ ಸಹಭಾಗಿತ್ವವು ಸಹಕಾರಿಯಾಗಲಿದೆ.

ಇದನ್ನೂ ಓದಿ: Shriram Finance: ಶ್ರೀರಾಮ್‌ ಫೈನಾನ್ಸ್‌ನಲ್ಲಿ 39,618 ಕೋಟಿ ಹೂಡಿಕೆ ಘೋಷಿಸಿದ ಜಪಾನ್‌ ಬ್ಯಾಂಕ್‌

“ಭಾರತದ ಅನೇಕ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ವ್ಯಾಪ್ತಿ ಇನ್ನೂ ಕಡಿಮೆ ಇದೆ. ಅಪ್ರತೀಕ್ಷಿತ ಘಟನೆಗಳು ಕುಟುಂಬಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ನೀಡಬಹುದು. ಆದ್ದರಿಂದ ವಿಮೆ ಕೇವಲ ಒಂದು ಉತ್ಪನ್ನವಲ್ಲ, ಅದು ಜನರ ಶ್ರಮದ ಫಲವನ್ನು ರಕ್ಷಿಸುವ ಭದ್ರತಾ ಕವಚವಾಗಿದೆ. ನಮ್ಮ ಸ್ಥಳೀಯ ಸಂಪರ್ಕದ ಮೂಲಕ ಸರಳ ಹಾಗೂ ವಿಶ್ವಾಸಾರ್ಹ ವಿಮಾ ಪರಿಹಾರಗಳನ್ನು ಜನರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ” ಎಂದು ಪಿರಮಲ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜೈರಾಮ್ ಶ್ರೀಧರನ್ ಹೇಳಿದರು.

ಶ್ರಿರಾಮ್ ಜನರಲ್ ಇನ್ಷುರನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಎಮೊ ಅಫ್ತಾಬ್ ಅಲ್ವಿ ಮಾತನಾಡಿ, “ಈ ಪಾಲುದಾರಿಕೆ ಮೂಲಕ ವಿಮಾ ಸೇವೆಗಳನ್ನು ಇನ್ನಷ್ಟು ವ್ಯಾಪಕವಾಗಿ ತಲುಪಿಸುವ ಅವಕಾಶ ದೊರಕಿದೆ. ಈ ಸಹಭಾಗಿತ್ವವು ವಿಮಾ ಕ್ಷೇತ್ರದಲ್ಲಿ ಸಮಗ್ರ ಬೆಳವಣಿಗೆ ಮತ್ತು ಹಣಕಾಸು ಭದ್ರತೆಯನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ” ಎಂದು ಹೇಳಿದರು.