ನವದೆಹಲಿ: ಪೈಲೆಟ್ ಅನಾರೋಗ್ಯಕ್ಕೀಡಾಗಿ (sick pilot) ಇಂಡಿಗೋ ವಿಮಾನ (Indigo flight) ಪ್ರಯಾಣ ಸುಮಾರು ಮೂರು ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ನಡೆದಿದೆ. ವಾರಣಾಸಿಯಿಂದ (Varanasi flight) ಮುಂಬೈಗೆ (Mumbai) ತೆರಳಬೇಕಿದ್ದ ವಿಮಾನ (Mumbai-Bound IndiGo Flight) ಸುಮಾರು ಮೂರು ಗಂಟೆಗಳ ಕಾಲ ತಡವಾಗಿ ಹಾರಾಟ ಮಾಡಿದೆ. ವಿಮಾನಕ್ಕೆ ನಿಯೋಜಿತರಾಗಿದ್ದ ಪೈಲಟ್ (pilot)ಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದ್ದರಿಂದ ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದರಿಂದ ವಿಮಾನ ಹಾರಾಟ (Flight delay) ವಿಳಂಬವಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹಾರಾಟ ನಡೆಸಬೇದ್ದ 6ಇ-6544 ಸಂಖ್ಯೆಯ ಇಂಡಿಗೋ ವಿಮಾನವು ಗುರುವಾರ ಮೂರೂವರೆ ಗಂಟೆಗಳ ಕಾಲ ತಡವಾಗಿ ಹಾರಾಟ ನಡೆಸಿದೆ. ಈ ವಿಮಾನವನ್ನು ಚಲಾಯಿಸಬೇಕಿದ್ದ ಪೈಲಟ್ ಇದ್ದಕ್ಕಿದ್ದಂತೆ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರಿಂದ ಸಂಸ್ಥೆಯು ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
18 ನೇ ಬ್ರಿಕ್ಸ್ ಶೃಂಗ ಸಭೆ; ದೆಹಲಿಗೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್, ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಸಭೆ
ಈ ಕುರಿತು ಮಾಹಿತಿ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ, ವಾರಣಾಸಿಯಿಂದ ಮುಂಬೈಗೆ ಸಾಗಬೇಕಾದ ವಿಮಾನ ಹಾರಾಟ ತಾಂತ್ರಿಕ ಕಾರಣಗಳಿಂದಾಗಿ ಮೂರೂವರೆ ಗಂಟೆಗಳ ಕಾಲ ವಿಳಂಬವಾಗಿದೆ. ಬಳಿಕ ಮುಂಬೈಗೆ ಕಾರ್ಯಾಚರಣೆ ನಡೆಸಲಾಯಿತು. ಪ್ರಯಾಣಿಕರು ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ವಿಮಾನ ಹಾರಾಟ ವಿಳಂಬವಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗದ್ದಲವೆಬ್ಬಿಸಿದರು ಎಂಬ ಆರೋಪಗಳನ್ನು ಅವರು ನಿರಾಕರಿಸಿದರು.
ವಿಮಾನಕ್ಕೆ ನಿಯೋಜಿತರಾಗಿದ್ದ ಪೈಲಟ್ ಇದ್ದಕ್ಕಿದ್ದಂತೆ ಅನಾರೋಗ್ಯದ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರಿಂದ ಈ ವಿಳಂಬ ಉಂಟಾಯಿತು. ಇದರಿಂದಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕಾಯಿತು.
ಅಮೆರಿಕದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ
ಇನ್ನೊಬ್ಬ ಪೈಲಟ್ ಅವರನ್ನು ಅಹಮದಾಬಾದ್‌ನಿಂದ ತರಾತುರಿಯಲ್ಲಿ ಕರೆಸಬೇಕಾಯಿತು. ಬಳಿಕ ಅವರೇ ವಿಮಾನವನ್ನು ಚಲಾಯಿಸಿದರು. ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಪ್ರಯಾಣಿಕರಿಗೆ ಕಾರಣಗಳನ್ನು ತಿಳಿಸಿ ಅವರಿಗೆ ಉಪಹಾರ, ಪಾನೀಯಗಳನ್ನು ನೀಡಲಾಯಿತು ಎಂದು ತಿಳಿಸಿದರು.