ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SIR Phase 2: 7.2 ಕೋಟಿಗೂ ಹೆಚ್ಚು ಮತದಾರರ ಹೆಸರು ಕೈಬಿಟ್ಟ ಚುನಾವಣಾ ಆಯೋಗ

ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ ಮುಂದುವರಿದಿದೆ. ಎರಡನೇ ಹಂತದಲ್ಲಿ 7.2 ಕೋಟಿಗೂ ಹೆಚ್ಚು ಮತದಾರರು ಹೆಸರನ್ನು ಕೈ ಬಿಡಲಾಗಿದೆ. 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಎರಡನೇ ಹಂತದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಉತ್ತರ ಪ್ರದೇಶದ ಅತೀ ಹೆಚ್ಚು ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಮತದಾರರ ಪಟ್ಟಿಯ (electoral rolls) ತೀವ್ರ ಪರಿಷ್ಕರಣೆಯ (Special Intensive Revision) ಎರಡನೇ ಹಂತದಲ್ಲಿ 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ (Union territory) ಒಟ್ಟು 7.2 ಕೋಟಿಗೂ ಹೆಚ್ಚು ಮತದಾರರು (Voters) ಹೆಸರನ್ನು ಕೈ ಬಿಡಲಾಗಿದೆ. ಇದರಲ್ಲಿ ಉತ್ತರಪ್ರದೇಶದ (Uttar Pradesh) ಅತೀ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಒಟ್ಟು ಮತದಾರರಲ್ಲಿ ಸುಮಾರು ಶೇಕಡಾ 10 ರಷ್ಟನ್ನು ಈಗ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಬಿಹಾರದಲ್ಲಿ ಮೊದಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಬಳಿಕ 11 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಲಾಯಿತು.

ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ 2025ರ ಅಕ್ಟೋಬರ್ 27ರಂದು ಪ್ರಾರಂಭವಾಗಿದ್ದು, ಆಗ 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು ಮತದಾರರ ಸಂಖ್ಯೆ ಸುಮಾರು 51 ಕೋಟಿಯಷ್ಟಿತ್ತು. ಬಳಿಕ ಅಳಿಸಿ ಹಾಕಿರುವ ಮತದಾರರ ಪ್ರಮಾಣ ಸರಿಸುಮಾರು ಶೇಕಡಾ 10.2 ರಷ್ಟಿದೆ.

ಮಹಿಳಾ ಕೋಟಾ ಮಸೂದೆಗೆ ಬೆಂಬಲ ಕೋರಿದ ಪ್ರಧಾನಿ ಮೋದಿ; ಸರ್ವಪಕ್ಷ ಸಭೆಗೆ ಖರ್ಗೆ ಆಗ್ರಹ

ಎರಡನೇ ಹಂತದ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಸುಮಾರು 7.2 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ ಸರಿಸುಮಾರು 2.89 ಕೋಟಿ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ. ಬಳಿಕ ತಮಿಳುನಾಡಿನಲ್ಲಿ 97 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 90.8 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಹೊಸ ನೋಂದಣಿ ಮೂಲಕ ಸುಮಾರು 2 ಕೋಟಿ ಮತದಾರರನ್ನು ಸೇರಿಸಲಾಗಿದ್ದು, ಇದರಿಂದ ಪರಿಷ್ಕರಣೆಯ ಬಳಿಕ ಒಟ್ಟು ಮತದಾರರ ಸಂಖ್ಯೆ 45.8 ಕೋಟಿಯಾಗಿದೆ.

ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ನೋಂದಾಯಿತ ವಿಳಾಸಗಳಲ್ಲಿ ಇಲ್ಲದೇ ಇರುವ 13 ಕೋಟಿ, ಶಾಶ್ವತವಾಗಿ ಸ್ಥಳಾಂತರಗೊಂಡ 3.1 ಕೋಟಿ, ಮರಣ ಪ್ರಕರಣದಲ್ಲಿ 1.2 ಕೋಟಿಗೂ ಹೆಚ್ಚು ಮಂದಿಯ ಹೆಸರನ್ನು ಅಳಿಸಿ ಹಾಕಲಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸುವಿಕೆಯ ಅತೀ ಹೆಚ್ಚು ಪ್ರಮಾಣವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸರಿಸುಮಾರು ಶೇ. 16.6, ಉತ್ತರ ಪ್ರದೇಶ ಶೇ. 13.2, ಗುಜರಾತ್ ಶೇ. 13.1, ಛತ್ತೀಸ್‌ಗಢ ಶೇ. 11.3, ಪಶ್ಚಿಮ ಬಂಗಾಳ: ಶೇ. 10.9, ತಮಿಳುನಾಡು ಶೇ. 10.6, ಗೋವಾ ಶೇ. 10.2 ರಷ್ಟಿದೆ. ಅತೀ ಕಡಿಮೆ ಅಳಿಸುವಿಕೆಯು ಮಧ್ಯಪ್ರದೇಶ ಶೇ. 5.7, ರಾಜಸ್ಥಾನ ಶೇ. 5.4, ಕೇರಳ ಶೇ. 2.5, ಲಕ್ಷದ್ವೀಪ ಶೇ. 0.3, ಪುದುಚೇರಿ ಸುಮಾರು ಶೇ. 7ರಷ್ಟು ದಾಖಲಿಸಿದೆ.

ಹೊಸ ಸೇರ್ಪಡೆಗಳಲ್ಲಿ ಉತ್ತರ ಪ್ರದೇಶವು ಅಗ್ರ ಸ್ಥಾನದಲ್ಲಿದ್ದು, 92.4 ಲಕ್ಷ ಸೇರ್ಪಡೆ ಮಾಡಲಾಗಿದೆ. ಬಳಿಕ ತಮಿಳುನಾಡಿನಲ್ಲಿ 35 ಲಕ್ಷ, ಕೇರಳದಲ್ಲಿ 20.4 ಲಕ್ಷ, ರಾಜಸ್ಥಾನದಲ್ಲಿ 15.4 ಲಕ್ಷ, ಮಧ್ಯಪ್ರದೇಶದಲ್ಲಿ 12.9 ಲಕ್ಷ, ಗುಜರಾತ್ ನಲ್ಲಿ 12 ಲಕ್ಷ ಸೇರ್ಪಡೆಯಾಗಿದೆ.

US- Iran War: ಕದನ ವಿರಾಮ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್ ‘ಜಗ್ ವಿಕ್ರಮ್’

ಇನ್ನು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ವಿವಾದಕ್ಕೆ ಕಾರಣವಾಗಿದೆ. ಇಲ್ಲಿ 60 ಲಕ್ಷಕ್ಕೂ ಹೆಚ್ಚು ಮಂದಿಗೆ ನೊಟೀಸ್ ಜಾರಿಗೊಳಿಸಲಾಗಿತ್ತು. ಪರಿಶೀಲನೆಯ ಬಳಿಕ 27 ಲಕ್ಷಕ್ಕೂ ಹೆಚ್ಚು ಹೆಸರಲ್ಲಿ 6 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ.

ವಿಧಾನಸಭಾ ಚುನಾವಣೆಗೆ ಮುಂಚೆ ರಾಜ್ಯದಲ್ಲಿ ಮತದಾರರ ಸಂಖ್ಯೆ 6.75 ಕೋಟಿಯಷ್ಟಿದ್ದು, ಪರಿಷ್ಕರಣೆ ಪ್ರಾರಂಭವಾಗುವ ಮೊದಲು 7.66 ಕೋಟಿಗಿಂತ ಹೆಚ್ಚಾಗಿತ್ತು. ಹೆಸರು ಪಟ್ಟಿಯಲ್ಲಿದ್ದರೂ ಮತ ಚಲಾಯಿಸದ 6.5 ಕೋಟಿಗೂ ಹೆಚ್ಚು ಮತದಾರರನ್ನುನಿಷ್ಕ್ರಿಯ ಅಥವಾ ಪರಿಶೀಲಿಸಲಾಗದ ಮತದಾರರು ಎಂದು ಪರಿಗಣಿಸಿ ತೆಗೆದು ಹಾಕುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author