ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೆಹಲಿಯ ರಸ್ತೆ ಬದಿ ಅಸ್ಥಿಪಂಜರ ಪತ್ತೆ: ಆಘಾತಕಾರಿ ವಿಡಿಯೊ ವೈರಲ್

Viral Video: ದೆಹಲಿಯಲ್ಲಿ ಕಸದ ರಾಶಿಯನ್ನು ವಿಲೇವಾರಿ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಗೆ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ. ಈ ಅನುಮಾನಾಸ್ಪದ ಅವಶೇಷಗಳು ಕಂಡು ಬಂದ ತಕ್ಷಣ ತಂಡವು ಸ್ವಚ್ಛತಾ ಕಾರ್ಯವನ್ನು ನಿಲ್ಲಿಸಿದೆ. ನಂತರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ದೆಹಲಿಯ ಕಸದ ರಾಶಿಯಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು

ನವದೆಹಲಿ, ಮಾ. 13: ದೆಹಲಿಯಲ್ಲಿ (Delhi) ಆಘಾತಕಾರಿ ಘಟನೆಯೊಂದು ನಡೆದಿದೆ. ಕಸದ ರಾಶಿ ವಿಲೇವಾರಿ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಗೆ ಮಾನವ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಈ ಅನುಮಾನಾಸ್ಪದ ಅವಶೇಷಗಳು ಕಂಡುಬಂದ ತಕ್ಷಣ ತಂಡವು ಸ್ವಚ್ಛತಾ ಕಾರ್ಯವನ್ನು ನಿಲ್ಲಿಸಿದೆ. ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ನಗರದ ಸ್ವಚ್ಛತಾ ಕಾರ್ಯಕ್ಕಾಗಿ ವೃಕ್ಷಿತ್ ಫೌಂಡೇಶನ್ ಸದಸ್ಯರು ಕಸ ವಿಲೆವಾರಿಯನ್ನು ಮಾಡುತ್ತಿದ್ದರು. ರಕ್ಷಣಾತ್ಮಕ ಕೈಗವಸುಗಳು ಮತ್ತು ಮುಖವಾಡಗಳನ್ನು ಧರಿಸಿದ ಸ್ವಯಂ ಸೇವಕರು ದೊಡ್ಡ ಕಸದ ರಾಶಿಯನ್ನು ತೆರವುಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಕಸದ ರಾಶಿಯಲ್ಲಿ ಇದ್ದಕ್ಕಿದ್ದಂತೆ ಹೂತುಹೋಗಿರುವ ಮೂಳೆಗಳಂತೆ ಕಾಣುವ ಅವಶೇಷಗಳು ಪತ್ತೆಯಾಗಿವೆ.

ವಿಡಿಯೊ ನೋಡಿ:



ಕಸದ ರಾಶಿಗಳಲ್ಲಿ ಮೂಳೆಗಳ ಜತೆಗೆ ಕೆಲವು ವೈದ್ಯಕೀಯ ತ್ಯಾಜ್ಯಗಳೂ ಕೂಡ ಪತ್ತೆಯಾಗಿವೆ. ನಂತರ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಮೂಲವನ್ನು ನಿರ್ಧರಿಸಲು ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಳೆಗಳು ಮನುಷ್ಯರದ್ದೇ ಅಥವಾ ವೈದ್ಯಕೀಯ ವಸ್ತುಗಳ ಭಾಗವೇ ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಯನ್ನು ಪ್ರಾರಂಭ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ, ವೈದ್ಯಕೀಯ ಶಿಕ್ಷಣ ಅಥವಾ ಪ್ರಯೋಗಾಲಯ ತರಬೇತಿಯಲ್ಲಿ ಬಳಸುವ ಅವಶೇಷವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಕೆಲವೊಮ್ಮೆ ತ್ಯಾಜ್ಯವಾಗುತ್ತವೆ.

ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಈ ದೃಶ್ಯವನ್ನು ರೆಕಾರ್ಡ್ ಮಾಡಲಾಗಿದ್ದು ವಿಡಿಯೊ ಭಾರಿ ವೈರಲ್ ಆಗಿದೆ. ಅನೇಕರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ಘಟನೆಯನ್ನು ನಿರ್ಲಕ್ಷಿಸುವ ಬದಲು ವರದಿ ಮಾಡಿದ್ದಕ್ಕಾಗಿ ಸ್ವಯಂಸೇವಕರನ್ನು ಹೊಗಳಿದ್ದಾರೆ.