ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಜ್ಞೆ ತಪ್ಪಿ ಬಿದ್ದ ಹೆಬ್ಬಾವಿಗೆ ಪುನರ್ಜನ್ಮ; ಸಿಪಿಆರ್‌ ನೀಡಿದ ಉರಗ ರಕ್ಷಕ, ಇಲ್ಲಿದೆ ನೋಡಿ ವಿಡಿಯೊ

Snake Rescuer Gives CPR: ತಲೆಗೆ ಗಾಯಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದ ಹೆಬ್ಬಾವನ್ನು ಉರಗ ರಕ್ಷಕನೊಬ್ಬ ಸಿಪಿಆರ್‌ ನೀಡುವ ಮೂಲಕ ಬದುಕುಳಿಸಿದ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಧೈರ್ಯ ಮತ್ತು ತಕ್ಷಣದ ಸ್ಪಂದನೆಯಿಂದ ನಡೆದ ಈ ರಕ್ಷಣಾ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ಹೆಬ್ಬಾವಿಗೆ ಸಿಪಿಆರ್‌ ನೀಡಿ ರಕ್ಷಿಸಿದ ಉರಗ ರಕ್ಷಕ

ಗಾಂಧಿನಗರ, ಡಿ. 10: ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಆದರೆ ಮಾನವರು ಪ್ರಾಣಿಗಳನ್ನು ಸ್ವಾರ್ಥಕ್ಕಾಗಿ ಕೊಲ್ಲುತ್ತಿದ್ದಾರೆ. ಆದರೆ ಕೆಲವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಪ್ರಾಣಿ-ಪಕ್ಷಿಗಳನ್ನು ರಕ್ಷಿಸುತ್ತಾರೆ. ಇದೀಗ ಇಂಥಹದ್ದೇ ಒಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ಅರಣ್ಯ ಇಲಾಖೆ ಮತ್ತು ದೇಡಿಯಾಪದಾ ಮೂಲದ ಜೀವದಯಾ ಪ್ರೇಮಿ ಎಂಬ ಸಂಘಟನೆಯ ಪ್ರಾಣಿ ಕಲ್ಯಾಣ ಕಾರ್ಯಕರ್ತರ ಜಂಟಿ ಪ್ರಯತ್ನದಲ್ಲಿ ಹೆಬ್ಬಾವನ್ನು (Python) ರಕ್ಷಿಸಲಾಗಿದೆ. ಗುಜರಾತ್‍ನ (Gujarat) ನರ್ಮದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ವರದಿಯಾಗಿದೆ. ಇದರ ವಿಡಿಯೊ ವೈರಲ್ (Viral Video) ಆಗಿದೆ.

ತಲೆಗೆ ಗಾಯಗೊಂಡ ಹೆಬ್ಬಾವು ಪ್ರಜ್ಞೆ ತಪ್ಪಿ ಬಿದ್ದಿತ್ತು. ಇದನ್ನು ಗಮನಿಸಿದ ಪ್ರಾಣಿ ಕಲ್ಯಾಣ ಕಾರ್ಯಕರ್ತ ಭವಿನ್‌ಭಾಯ್ ವಾಸವ, ಸಿಪಿಆರ್ ಮಾಡುವ ಮೂಲಕ ಅದರ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರು. ವಿಡಿಯೊದಲ್ಲಿ ವಾಸವ ದೈತ್ಯ ಹಾವಿನ ಬಾಯಿಗೆ ಸಣ್ಣ, ಟೊಳ್ಳಾದ ರಾಡ್ ಅನ್ನು ಸೇರಿಸುವುದನ್ನು ಮತ್ತು ಅದರ ಮೂಲಕ ಸಿಪಿಆರ್ ಅನ್ನು ನೀಡುವುದನ್ನು ಕಾಣಬಹುದು.

ಸೈಕಲ್ ಹ್ಯಾಂಡಲ್ ಮೇಲೆ ರಾಜ ಗಾಂಭೀರ್ಯದಿಂದ ಕುಳಿತ ಬೃಹತ್‌ ಗಾತ್ರದ ಹಾವು

ನಂತರ ಅರಣ್ಯ ಇಲಾಖೆಯ ತಂಡ ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಈ ತಿಂಗಳು ಗುಜರಾತ್‌ನಲ್ಲಿ ವರದಿಯಾದ ಇಂತಹ ಎರಡನೇ ಘಟನೆ ಇದು. ಇದಕ್ಕೂ ಮೊದಲು, ವಲ್ಸಾದ್‍ನಲ್ಲಿ ವನ್ಯಜೀವಿ ರಕ್ಷಕರೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿದ್ದ ಹಾವಿಗೆ ಬಾಯಿಯ ಮೂಲಕ ಸಿಪಿಆರ್ ನೀಡಿ ಬದುಕಿಸಿದ್ದರು. ಈ ಮೂಲಕ ಹಾವಿಗೆ ಪುನರುಜ್ಜೀವನ ನೀಡಿದ್ದರು.

ಇಲ್ಲಿದೆ ವಿಡಿಯೊ:



ಬೇಟೆಯನ್ನು ಹುಡುಕುತ್ತಾ, ಹಾವು ಮೂರು-ಹಂತದ ವಿದ್ಯುತ್ ತಂತಿಯನ್ನು ಹತ್ತಿತ್ತು. ವಿದ್ಯುತ್ ಸ್ಪರ್ಶಿಸಿ ಅದು ಸುಮಾರು 15 ಅಡಿಗಳಷ್ಟು ನೆಲಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿತು. ಸ್ಥಳೀಯ ಹಾವು ಸಂಶೋಧನಾ ಸಂಸ್ಥೆಯಿಂದ ದಶಕದ ಅನುಭವ ಮತ್ತು ತರಬೇತಿ ಪಡೆದಿರುವ ಮುಖೇಶ್ ವಾಯದ್ ಅವರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅವರು, ಹಾವು ಚಲನರಹಿತವಾಗಿ ಮತ್ತು ಯಾವುದೇ ಪ್ರತಿಕ್ರಿಯೆಯಿಲ್ಲದೆ ಇರುವುದನ್ನು ಗಮನಿಸಿದರು. ತಡಮಾಡದ ಅವರು ತಮ್ಮ ಬಾಯಿಯ ಮೂಲಕ ಹಾವಿನ ಬಾಯಿಗೆ ಸಿಪಿಆರ್ ಮಾಡಿದರು. ಸುಮಾರು 30 ನಿಮಿಷಗಳ ಕಾಲ ಅದರ ಹೃದಯ ಪ್ರದೇಶವನ್ನು ಟ್ಯಾಪ್ ಮಾಡಿದರು.

ಸುಮಾರು ಅರ್ಧ ಗಂಟೆ ಸತತ ಪ್ರಯತ್ನದ ನಂತರ, ಹಾವು ಉಸಿರಾಟ ಮತ್ತು ಚಲನೆಯ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿತು. ನಂತರ ಪೂರ್ಣವಾಗಿ ಚೇತರಿಸಿಕೊಂಡ ನಂತರ ಹತ್ತಿರದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಕಾರ್ಡಿಯೋಪಲ್ಮನರಿ ಪುನರುಜ್ಜೀವನ ಅಥವಾ ಸಿಪಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು, ಯಾವುದೇ ಜೀವಿಯ ಹೃದಯ ಬಡಿತ ಅಥವಾ ಉಸಿರಾಟ ನಿಂತಾಗ ನಡೆಸುವ ತುರ್ತು ವಿಧಾನವಾಗಿದೆ. ಸಮಯಕ್ಕೆ ಸರಿಯಾಗಿ ಸಿಪಿಆರ್ ನೀಡುವುದರಿಂದ ಬದುಕುಳಿಯುವ ಸಾಧ್ಯತೆ ಹೆಚ್ಚು. ಒಬ್ಬ ವ್ಯಕ್ತಿಯು ಕುಸಿದು ಬಿದ್ದಾಗ, ಯಾವುದೇ ರೀತಿಯ ಪ್ರತಿಕ್ರಿಯೆ ತೋರದಿದ್ದಾಗ, ಉಸಿರಾಡದಿದ್ದಾಗ ಮತ್ತು ನಾಡಿಮಿಡಿತವಿಲ್ಲದಿದ್ದಾಗ ಸಿಪಿಆರ್ ನೀಡಬಹುದು. ಈ ವಿಧಾನವು ಹೃದಯದ ಕಾರ್ಯವನ್ನು ಪುನಃಸ್ಥಾಪಿಸಬಹುದು ಮತ್ತು ಅವರ ರಕ್ತ ಪರಿಚಲನೆಯನ್ನು ಮುಂದುವರಿಸಲು ಸಹಾಯಕವಾಗಬಹುದು.