ನವದೆಹಲಿ: ಹವಾಮಾನ ಕಾರ್ಯಕರ್ತ, ಶಿಕ್ಷಕ ಮತ್ತು ಸಾಮಾಜಿಕ ಹೋರಾಟಗಾರ (Activist) ಸೋನಮ್ ವಾಂಗ್‌ಚುಕ್ (Sonam Wangchuk) ಅವರು ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ (Delhis Jantar Mantar) ನಲ್ಲಿ ಉಪವಾಸ ಸತ್ಯಾಗ್ರಹ (hunger strike) ನಡೆಸುತ್ತಿದ್ದು, ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ (Delhi hospital) ತುರ್ತು ಚಿಕಿತ್ಸಾ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನೀಟ್ ಪತ್ರಿಕೆ ಸೋರಿಕೆ ಸಂಬಂಧಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಅವರು ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ ನೀಡಿ ಅವರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ದೆಹಲಿ ಪೊಲೀಸರು ನಾಗರಿಕ ಉಡುಪಿನಲ್ಲಿ ಶನಿವಾರ ಬೆಳಗ್ಗೆ ಜಂತರ್ ಮಂತರ್‌ಗೆ ಆಗಮಿಸಿದರು. ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳದಿಂದ ಕರೆದುಕೊಂಡು ಹೋದರು. ನೀಲಿ ಮತ್ತು ಬಿಳಿ ಶರ್ಟ್ ಧರಿಸಿ ಬಂದಿದ್ದ ಪೊಲೀಸರು ಸ್ಥಳದಲ್ಲಿ ಭಾರಿ ಭದ್ರತೆಯನ್ನು ನಿಯೋಸ್ಜಿ ಪರದೆಗಳನ್ನು ಕಟ್ಟಿ ಅವರನ್ನು ಕರೆದುಕೊಂಡು ಹೋದರು. ಸ್ಥಳದಲ್ಲಿದ್ದ ಇತರರಿಗೆ ಏನಾಗುತ್ತಿದೆ ಎಂಬುದು ಕೂಡ ತಿಳಿಯಲಿಲ್ಲ. ಯಾವುದೇ ಮುನ್ಸೂಚನೆ ನೀಡದೇ ಬಂದಿದ್ದರಿಂದ ಅಲ್ಲಿದ್ದವರು ಘಟನೆಯನ್ನು ಊಹಿಸುವ ಮೊದಲೇ ಪೊಲೀಸರು ವಾಂಗ್‌ಚುಕ್ ಅವರನ್ನು ಸ್ಥಳಾಂತರಿಸಿದರು.
20 ದಿನಗಳಿಂದ ಉಪವಾಸದಲ್ಲಿರುವ ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ದಾಖಲು
ವಾಂಗ್‌ಚುಕ್ ಅವರನ್ನು ಕರೆದುಕೊಂಡು ಹೋಗಲು ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರ ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗಿ ಸ್ವಲ್ಪ ಅಡ್ಡಿ ಪಡಿಸಿದರು. ಆದರೂ ಅವರನ್ನು ಶಾಂತಿಯುತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಚಿಕಿತ್ಸಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಜ್ಞಾವಸ್ಥೆಯಲ್ಲಿರುವ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿದರು.
ಈ ಕುರಿತು ಎಕ್ಸ್ ನಲ್ಲಿ ಬರೆದಿರುವ ದೆಹಲಿ ಪೊಲೀಸರು, ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ವಾಂಗ್‌ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ತಜ್ಞ ವೈದ್ಯಕೀಯ ಸಲಹೆಯ ಮೇರೆಗೆ ಅವರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ಯಲು ದೆಹಲಿ ಹೈಕೋರ್ಟ್ ಆದೇಶಿಸಿತ್ತು ಎಂದು ತಿಳಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಅವರನ್ನು ಅಗತ್ಯ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೈಕೋರ್ಟ್ ಆದೇಶಗಳನ್ನು ಪಾಲಿಸುವಾಗ ಪ್ರತಿಭಟನಾಕಾರರು ಸ್ವಲ್ಪ ಅಡಚಣೆಯನ್ನು ಉಂಟು ಮಾಡಿದರು. ಇದರಿಂದ ಸ್ವಲ್ಪ ಗದ್ದಲ ಉಂಟಾಯಿತು. ಆದರೆ ಪೊಲೀಸರು ಗರಿಷ್ಠ ಸಂಯಮ ವಹಿಸಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು.ಜಂತರ್ ಮಂತರ್ ಅನ್ನು ಆದಷ್ಟು ಬೇಗ ಶಾಂತಿಯುತವಾಗಿ ತೆರವುಗೊಳಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿ ಚೆನ್ನಮ್ಮ; ಕಣ್ಣೀರು ಹಾಕಿದ ದೇವೇಗೌಡರು, ಆ ದೇವರೇ ಕಾಪಾಡಬೇಕು ಎಂದ ಎಚ್‌ಡಿಕೆ
ನಿರಂತರ ಉಪವಾಸ ಸತ್ಯಾಗ್ರಹದಿಂದ ವಾಂಗ್‌ಚುಕ್ ಅವರ ಅಂಗಾಂಗಗಳು ವಿಫಲಗೊಳ್ಳುವ ಭಯವಾಗಿತ್ತು. ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ತುರ್ತು ಪರಿಸ್ಥಿತಿ ಎಂದು ಹೇಳಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳ ಹಿಂದೆ ವೈದ್ಯಕೀಯ ವರದಿಯ ಪ್ರಕಾರ ಅವರು 8 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಇದರೊಂದಿಗೆ ಅವರ ಆರೋಗ್ಯ ಸ್ಥಿತಿಯೂ ಹದಗೆಡುತ್ತಿತ್ತು. ಆದರೂ ವಾಂಗ್‌ಚುಕ್ ಅವರು ಜುಲೈ 20 ರವರೆಗೆ ಅಂದರೆ ಮಳೆಗಾಲದ ಅಧಿವೇಶನದ ಮೊದಲ ದಿನದವರೆಗೆ ಪ್ರತಿಭಟನಾಕಾರರು ಸಂಸತ್ತಿಗೆ ಮೆರವಣಿಗೆ ನಡೆಸುವವರೆಗೆ ತಾನು ಜೀವಂತವಾಗಿರುವುದಾಗಿ ಹೇಳಿದ್ದರು. ಒಂದು ವೇಳೆ ಏನಾದರೂ ಆದರೆ ದೆವ್ವವಾಗಿ ಬರುತ್ತೇನೆ ಎಂದು ತಿಳಿಸಿದ್ದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಉಪವಾಸ ನಡೆಸುತ್ತಿರುವ ವಾಂಗ್‌ಚುಕ್ ಅವರನ್ನು ಭೇಟಿ ಮಾಡಿರುವ ವಿರೋಧ ಪಕ್ಷಗಳ ಹಲವಾರು ನಾಯಕರು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದರು. ಕಾಂಗ್ರೆಸ್‌ನ ಪವನ್ ಖೇರಾ, ಎಸ್‌ಪಿ ಸಂಸದ ಡಿಂಪಲ್ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನಾಯಕರು ಕಳೆದ ಎರಡು ದಿನಗಳಲ್ಲಿ ವಾಂಗ್‌ಚುಕ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯದ ದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದರು.