ದೆಹಲಿ, ಡಿ. 9: ʼವಂದೇ ಮಾತರಂʼ (Vande Mataram)-ಮಂಗಳವಾರ (ಡಿಸೆಂಬರ್ 9) 79ನೇ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ದೇಶಕ್ಕೆ ನೀಡಿದ ಸಂದೇಶವಿದು. ಆ ಮೂಲಕ ಕೆಲವು ದಿನಗಳಿಂದ ನಡೆಯುತ್ತಿರುವ ʼವಂದೇ ಮಾತರಂʼ ಗೀತೆಯ ಕುರಿತಾದ ಚರ್ಚೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಬರೆದ ʼವಂದೇ ಮಾತರಂʼ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಮಧ್ಯೆ ವಾದ-ವಿವಾದ ನಡೆಯುತ್ತಿರುವ ಮಧ್ಯೆ ಸೋನಿಯಾ ಗಾಂಧಿ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ.
ರಾಷ್ಟ್ರಗಾನ ʼವಂದೇ ಮಾತರಂʼ ರಚನೆಯಾಗಿ ನವೆಂಬರ್ 7ಕ್ಕೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಈ ಬಗ್ಗೆ ಬಿರುಸಿನ ಚರ್ಚೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗೀತೆಯನ್ನು ಪ್ರಸ್ತಾವಿಸಿ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಟೀಕಿಸಿದ್ದರು. ʼʼಮೊಹಮ್ಮದ್ ಆಲಿ ಜಿನ್ನಾ ಅವರ ಮುಸ್ಲಿಮ್ ಲೀಗ್ ಒತ್ತಡಕ್ಕೆ ಮಣಿದು ನೆಹರೂ ʼವಂದೇ ಮಾತರಂʼ ಗೀತೆಯನ್ನು ವಿಭಜಿಸಿದರು. ಅದರಲ್ಲಿನ 2 ಚರಣಗಳನ್ನು ಮಾತ್ರ ಉಳಿಸಿಕೊಳ್ಳಲು ಮುಸ್ಲಿಮ್ ಲೀಗ್, ಮಾವೋಯಿಸ್ಟ್ ಕಾಂಗ್ರೆಸ್‌ನ ತುಷ್ಟೀಕರಣ ನೀತಿ ಕಾರಣʼʼ ಮೋದಿ ಹೇಳಿದ್ದರು.
ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬ ಆಚರಣೆ:
ʼʼ1937ರಲ್ಲಿ ಮುಸ್ಲಿಮ್ ಲೀಗ್ ನಾಯಕ ಮೊಹಮ್ಮದ್ ಆಲಿ ಜಿನ್ನಾ ʼವಂದೇ ಮಾತರಂʼ ಅನ್ನು ವಿರೋಧಿಸಿದರು. ಮುಸ್ಲಿಮ್ ಲೀಗ್ ಘೋಷಣೆಯನ್ನು ವಿರೋಧಿಸುವ ಬದಲು ಅದನ್ನೇ ಒಪ್ಪಿಕೊಂಡರು. ʼವಂದೇ ಮಾತರಂʼಗಿರುವ ʼಆನಂದ ಮಠʼದ ಹಿನ್ನೆಲೆ ಮುಸ್ಲಿಮರನ್ನು ರೊಚ್ಚಿಗೇಳಿಸಬಹುದು ಎಂದಿದ್ದರುʼʼ ಎಂಬುದಾಗಿ ಮೋದಿ ತಿಳಿಸಿದ್ದರು.
ಮಾಧ್ಯಮಗಳಿಗೆ ಸೋನಿಯಾ ಗಾಂಧಿ ಅವರ ಪ್ರತಿಕ್ರಿಯೆ:
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ʼʼವಂದೇ ಮಾತರಂʼ ಅನ್ನು ವಿಭಜಿಸಿದ್ದು ಕಾಂಗ್ರೆಸ್ ಅಲ್ಲ ಕೋಮುವಾದಿಗಳು. ಡಾ. ಬಾಬು ರಾಜೇಂದ್ರ ಪ್ರಸಾದ್ 1950ರಲ್ಲಿ ʼವಂದೇ ಮಾತರಂʼ ಅನ್ನು ರಾಷ್ಟ್ರಗಾನ ಎಂದು ಕರೆದರು. ಆಗಿನ ಸಭೆಯಲ್ಲಿ ಕೇವಲ 2 ಚರಣಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಆ ಸಭೆಯಲ್ಲಿ ಡಾ. ಅಂಬೇಡ್ಕರ್, ಶ್ಯಾಮ್ ಪ್ರಸಾದ್ (ಬಿಜೆಪಿ-ಜನಸಂಘ ಸ್ಥಾಪಕ) ಇದ್ದರು. ಅವರೇಕೆ ಅದನ್ನು ವಿರೋಧಿಸಲಿಲ್ಲ?ʼʼ ಎಂದು ಪ್ರಶ್ನಿಸಿದ್ದರು.
ʼವಂದೇ ಮಾತರಂʼ ಬಂಗಾಳಕ್ಕೆ ಸೀಮಿತವಾಗಿಲ್ಲ; ಪ್ರಿಯಾಂಕಾ ಗಾಂಧಿಗೆ ಅಮಿತ್ ಶಾ ತಿರುಗೇಟು
2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ʼವಂದೇ ಮಾತರಂʼ ವಿಷಯ ಪ್ರಸ್ತಾವಿಸಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ತಿಳಿಸಿದ್ದರು. ಹೀಗಾಗಿ ಇದೀಗ ಸೋನಿಯಾ ಗಾಂಧಿ ಅವರ ಹೇಳಿಕೆ ಮಹತ್ವ ಪಡೆದಿದೆ.
1946ರ ಡಿಸೆಂಬರ್ 9ರಂದು ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ 1968ರಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರನ್ನು ವರಿಸಿದರು. 1983 ಭಾರತೀಯ ಪೌರತ್ವ ಪಡೆದ ಅವರು ಕಾಂಗ್ರೆಸ್‌ನ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರ ಜನ್ಮದಿನವನ್ನು ಕಾಂಗ್ರೆಸ್ ನಾಯಕರು ಆಚರಿಸಿದರು.