ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಗೆ ವೇದಿಕೆ ಸಜ್ಜು: ಫ್ರಾನ್ಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿದೆ ಉಭಯ ನಾಯಕರ ಸಭೆ

Modi-Trump meeting: ಜಾಗತಿಕ ನಾಯಕರ ನಡುವಿನ ಹಲವು ಭೇಟಿಗಳು ಚರ್ಚೆ ಮತ್ತು ಕುತೂಹಲವನ್ನು ಹುಟ್ಟುಹಾಕುತ್ತವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಭೇಟಿ ಜಗತ್ತಿನ ಗಮನ ಸೆಳೆಯುತ್ತವೆ. ಭಾರತವು G7ನ ಶಾಶ್ವತ ಸದಸ್ಯ ರಾಷ್ಟ್ರವಲ್ಲದಿದ್ದರೂ, ಪ್ರತಿವರ್ಷ ವಿಶೇಷ ಆಹ್ವಾನಿತ ರಾಷ್ಟ್ರವಾಗಿ ಶೃಂಗಸಭೆಗಳಲ್ಲಿ ಭಾಗವಹಿಸುತ್ತಿದೆ.

ನರೇಂದ್ರ ಮೋಡಿ ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ನವದೆಹಲಿ, ಮೇ 20: ಜಾಗತಿಕ ನಾಯಕರ ನಡುವಿನ ಹಲವು ಭೇಟಿಗಳು ಚರ್ಚೆ ಮತ್ತು ಕುತೂಹಲವನ್ನು ಹುಟ್ಟುಹಾಕುತ್ತವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ನಡುವಿನ ಭೇಟಿ ಜಗತ್ತಿನ ಗಮನ ಸೆಳೆಯುತ್ತವೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಅಮೆರಿಕದ ವೈಟ್ ಹೌಸ್‌ನಲ್ಲಿ ನಡೆದ ಭೇಟಿಯ ನಂತರ, ಈ ಇಬ್ಬರು ನಾಯಕರು ಪ್ರಮುಖ ಜಾಗತಿಕ ಶೃಂಗಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಅತ್ಯುತ್ತಮ ಸ್ನೇಹಿತರು ಎಂದೇ ಕರೆಯಲ್ಪಡುವ ಈ ನಾಯಕರು ಜೂನ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ (G7 Summit in France) ಮತ್ತೆ ಭೇಟಿಯಾಗುವ ಸಾಧ್ಯತೆ ಇದೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳಲ್ಲಿರುವ ಅಸಮಾಧಾನವನ್ನು ಈ ಭೇಟಿ ನಿವಾರಿಸಬಹುದೇ ಎಂಬುದನ್ನು ತಿಳಿಯಲು ಜೂನ್‌ವರೆಗೂ ಕಾಯಬೇಕಿದೆ. ಭಾರತವು G7ನ ಶಾಶ್ವತ ಸದಸ್ಯ ರಾಷ್ಟ್ರವಲ್ಲದಿದ್ದರೂ, ಪ್ರತಿವರ್ಷ ವಿಶೇಷ ಆಹ್ವಾನಿತ ರಾಷ್ಟ್ರವಾಗಿ ಶೃಂಗಸಭೆಗಳಲ್ಲಿ ಭಾಗವಹಿಸುತ್ತಿದೆ. ಈ ವರ್ಷ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜೂನ್ 15ರಿಂದ 17ರವರೆಗೆ ಎವಿಯನ್-ಲೆ-ಬೈನ್ಸ್‌ನಲ್ಲಿ ನಡೆಯಲಿರುವ G7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.

ನಾರ್ವೆಯ ಅತ್ಯುನ್ನತ ಗೌರವ ಗ್ರ್ಯಾಂಡ್ ಕ್ರಾಸ್ ಸ್ವೀಕರಿಸಿದ ನರೇಂದ್ರ ಮೋದಿ: ಪ್ರಧಾನಿಗಿದು 32ನೇ ಅಂತಾರಾಷ್ಟ್ರೀಯ ಗೌರವ

ಅಂದಹಾಗೆ, ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ಶ್ವೇತಭವನಕ್ಕೆ ಭೇಟಿ ನೀಡಿದ ವಿಶ್ವದ ಮೊದಲ ನಾಯಕರಲ್ಲಿ ಒಬ್ಬರಾಗಿದ್ದ ಪ್ರಧಾನಿ ಮೋದಿ, ಕೊನೆಯ ಬಾರಿಗೆ 2025ರ ಫೆಬ್ರವರಿ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಸುಂಕದ ವಿಚಾರವಾಗಿ ಉಂಟಾಗಿದ್ದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ, ಟ್ರಂಪ್ ಪ್ರಧಾನಿ ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದು ಕರೆದಿದ್ದರು. ಅಲ್ಲದೆ, ಇಬ್ಬರೂ 2030ರ ವೇಳೆಗೆ ಅಮೆರಿಕ-ಭಾರತದ ನಡುವಿನ ವ್ಯಾಪಾರವನ್ನು 500 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.

ಮೇಉಲ್ಲಿ ಭಾರತ-ಪಾಕಿಸ್ತಾನ ಯುದ್ಧದ ನಂತರ ಸಮಸ್ಯೆ ಉಲ್ಭಣಿಸಿತು. ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ತನ್ನ ಗುರಿಯಿಂದ ಕುರುಡಾಗಿದ್ದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಸಂಪೂರ್ಣ ಶ್ರೇಯಸ್ಸನ್ನು ಏಕಪಕ್ಷೀಯವಾಗಿ ತಾವೇ ತೆಗೆದುಕೊಂಡರು.

ಕಳೆದ ವರ್ಷ ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರೂ ನಾಯಕರು ಮತ್ತೊಮ್ಮೆ ಭೇಟಿಯಾಗುವ ನಿರೀಕ್ಷೆಯಿತ್ತು. ಆದರೆ ಟ್ರಂಪ್ ಹಠಾತ್ತನೆ ಶೃಂಗಸಭೆಯಿಂದ ನಿರ್ಗಮಿಸಿದರು. ಹೀಗಾಗಿ ಸಭೆಯನ್ನು ರದ್ದುಗೊಳಿಸಬೇಕಾಯಿತು.

ಕೆನಡಾದಿಂದ ಹಿಂತಿರುಗುವಾಗ ವಾಷಿಂಗ್ಟನ್‌ಗೆ ಬರುವಂತೆ ಟ್ರಂಪ್, ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ಆದರೆ ಪ್ರಧಾನಿ ಮೋದಿ ಕ್ರೊಯೇಷಿಯಾಕ್ಕೆ ಭೇಟಿ ನೀಡಬೇಕಾಗಿದ್ದರಿಂದ ಭಾರತ ಆ ವಿನಂತಿಯನ್ನು ತಿರಸ್ಕರಿಸಿತ್ತು.

ಉಭಯ ನಾಯಕರು ಕೊನೆಯ ಬಾರಿಗೆ ಏಪ್ರಿಲ್ 17ರಂದು ಸುಮಾರು 40 ನಿಮಿಷಗಳ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ್ದರು. ಇದು ಈ ವರ್ಷ ಉಭಯ ನಾಯಕರ ನಡುವೆ ನಡೆದ ಮೂರನೇ ದೂರವಾಣಿ ಸಂಭಾಷಣೆ. ಈ ಕರೆಯ ನಿಖರವಾದ ವಿವರಗಳನ್ನು ರಹಸ್ಯವಾಗಿಡಲಾಗಿದ್ದರೂ, ಪ್ರಧಾನಿ ಮೋದಿ ಮತ್ತು ಟ್ರಂಪ್ ದ್ವಿಪಕ್ಷೀಯ ಸಂಬಂಧಗಳು ಹಾಗೂ ಮಧ್ಯ ಪ್ರಾಚ್ಯದ ಪರಿಸ್ಥಿತಿಯ ಕುರಿತು ಪರಾಮರ್ಶೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.