ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟ್ಯಾಂಡ್‌ಅಪ್ ಕಾಮಿಡಿ ಶೋಗಳ ವಿವಾದ: ಲೈಂಗಿಕ ಕಿರುಕುಳ, ಮೃತದೇಹಗಳ ಬಗ್ಗೆ ಹಾಸ್ಯ; ಸಮಾಜದ ಸ್ವಾಸ್ಥ್ಯ ಕೆಡಿಸಿದ ಮಾತು

Stand-up Comedy: ಸ್ಟ್ಯಾಂಡ್‌ಅಪ್ ಕಾಮಿಡಿ ಕಾರ್ಯಕ್ರಮಗಳಲ್ಲಿ ಅತ್ಯಾಚಾರ, ಹಿಂಸೆ ಹಾಗೂ ವೈದ್ಯಕೀಯ ಅಧ್ಯಯನಕ್ಕಾಗಿ ದೇಹದಾನ ಮಾಡಿದ ಮೃತದೇಹಗಳ ಬಗ್ಗೆ ಹೇಳಿರುವ ಹಾಸ್ಯಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಕಾಮಿಡಿಯನ್ ಮಧುರ್ ವಿರ್ಲಿ ಮತ್ತು ಪ್ರಣಿತ್ ಮೋರೆ ಅವರ ಶೋಗಳ ಕೆಲವು ಕ್ಲಿಪ್‌ಗಳು ವೈರಲ್ ಆಗಿದ್ದು, ಅಸಂವೇದನಾಶೀಲ ಹಾಗೂ ಅವಮಾನದ ಹೇಳಿಕೆಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗಳು ಹಾಸ್ಯದ ಮಿತಿಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ.

ಮಧುರ್ ವಿರ್ಲಿ ಮತ್ತು ಪ್ರಣಿತ್ ಮೋರೆ (ಸಂಗ್ರಹ ಚಿತ್ರ)

ನವದೆಹಲಿ, ಜೂ. 13: ಸ್ಟ್ಯಾಂಡ್‌ಅಪ್ ಕಾಮಿಡಿ (Stand-up Comedy) ಕಾರ್ಯಕ್ರಮಗಳಲ್ಲಿ ಹೇಳಲಾದ ಕೆಲವು ವಿವಾದಾತ್ಮಕ ಹಾಸ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಅತ್ಯಾಚಾರ ಮತ್ತು ವೈದ್ಯಕೀಯ ಅಧ್ಯಯನಕ್ಕಾಗಿ ದೇಹದಾನ ಮಾಡಿದ ಮೃತದೇಹಗಳ ಕುರಿತು ಹಾಸ್ಯದ ಹೆಸರಿನಲ್ಲಿ ಮಾಡಲಾದ ಟೀಕೆಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿವೆ. 2024ರಲ್ಲಿ ಕಾಮಿಡಿಯನ್ ಮಧುರ್ ವಿರ್ಲಿ ನಡೆಸಿದ್ದ Love & Latex ಶೋನ ಹಳೆಯ ವಿಡಿಯೊ ಇದೀಗ ವೈರಲ್ ಆಗಿದೆ. ಆ ವಿಡಿಯೊದಲ್ಲಿ ಅವರು ಅತ್ಯಾಚಾರ ಪ್ರಕರಣಗಳ ಬಗ್ಗೆ ಹಾಸ್ಯ ಮಾಡುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದರು.

ವಿರ್ಲಿ ತಮ್ಮ ಹಾಸ್ಯದಲ್ಲಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿ, ಘಟನೆಗೆ ಸಂಬಂಧಿಸಿದ ಅಸಂವೇದನಶೀಲ ಕಮೆಂಟ್‌ಗಳನ್ನು ಮಾಡಿದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಇಂತಹ ಗಂಭೀರ ಮತ್ತು ನೋವಿನ ವಿಷಯಗಳನ್ನು ಹಾಸ್ಯದ ವಸ್ತುವಾಗಿಸುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೊದಲ್ಲಿದ್ದ ಪ್ರೇಕ್ಷಕರ ನಗುವಿನ ಪ್ರತಿಕ್ರಿಯೆಯೂ ಟೀಕೆಗೆ ಗುರಿಯಾಗಿದ್ದು, "ಇದು ಚಾಣಾಕ್ಷ ಹಾಸ್ಯವಲ್ಲ, ಸಮಾಜಕ್ಕೆ ಹಾನಿಕಾರಕವಾಗುವ ರೀತಿಯ ವಿಷಯ" ಎಂದು ಹಲವರು ಟೀಕಿಸಿದ್ದಾರೆ. ವಿವಾದದ ಬಳಿಕ ಮಾಧುರ್ ವಿರ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದು, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಣಿತ್ ಮೋರೆ ಶೋ ಕೂಡ ವಿವಾದದಲ್ಲಿ

ಇದಕ್ಕೂ ಮುನ್ನ ಕಾಮಿಡಿಯನ್ ಪ್ರಣಿತ್ ಮೋರೆ ಅವರ ಶೋನ ಕೆಲವು ಕ್ಲಿಪ್‌ಗಳು ವೈರಲ್ ಆಗಿ ಟೀಕೆಗೆ ಗುರಿಯಾಗಿದ್ದವು. ಒಂದು ವಿಡಿಯೊದಲ್ಲಿ ಮುಂಬೈಯ KEM ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ MBBS ವಿದ್ಯಾರ್ಥಿನಿ ಸೇಜಲ್ ಪವಾರ್, ವೈದ್ಯಕೀಯ ಅಧ್ಯಯನಕ್ಕಾಗಿ ಬಳಸುವ ಮೃತದೇಹಗಳ ಕುರಿತು ಮಾತನಾಡುತ್ತಾ, ಪುರುಷ ಮೃತದೇಹಗಳ ಜನನಾಂಗಗಳ ಬಗ್ಗೆ ಹಾಸ್ಯ ಮಾಡಿದ್ದಾರೆ. ಈ ಹೇಳಿಕೆಗಳು ದೇಹದಾನ ಮಾಡಿದವರ ಬಗ್ಗೆ ಅಗೌರವ ತೋರಿಸುವಂತಿವೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆಯೂ ಆರಂಭವಾಗಿದೆ.

ಜೂನ್ 13ರಿಂದ 18ರವರೆಗೆ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ - ಸ್ಲೋವಾಕಿಯಾ ಪ್ರವಾಸ; ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ

'₹370 ಬಿರಿಯಾನಿ' ಹೇಳಿಕೆಗೂ ವಿರೋಧ

ಪ್ರಣಿತ್ ಮೋರೆ ಅವರ ಮತ್ತೊಂದು ಶೋದಲ್ಲಿ ಭಾಗವಹಿಸಿದ್ದ ವೆಬ್ ಡೆವಲಪರ್ ಹಿಮಾಂಶು ಜಂಗ್ರಾ, ಡೇಟ್ ವೇಳೆ ₹370 ಮೌಲ್ಯದ ಚಿಕನ್ ಬಿರಿಯಾನಿಯನ್ನು ಗರ್ಲ್‌ ಫ್ರೆಂಡ್‌ಗೆ ಖರೀದಿಸಿದ್ದಾಗಿ ಹೇಳಿ, ನಂತರ ಆ ಹಣವನ್ನು ʼವಸೂಲ್ʼ ಮಾಡಿಕೊಳ್ಳಬೇಕೆಂದು ಯೋಚಿಸಿದ್ದೆ ಎಂದಿದ್ದರು. ಈ ಹೇಳಿಕೆಯನ್ನು ಹಲವರು ಮಹಿಳೆಯರನ್ನು ಅವಮಾನಿಸಿದೆ ಹಾಗೂ ಲೈಂಗಿಕ ಹಕ್ಕುಬೋಧಕ ಮನೋಭಾವವನ್ನು ಪ್ರತಿಬಿಂಬಿಸುವಂತದ್ದು ಎಂದು ಟೀಕಿಸಿದ್ದಾರೆ.

"ಯಾರಿಗಾದರೂ ಊಟಕ್ಕೆ ಹಣ ಖರ್ಚು ಮಾಡಿದರೆ ಅದರಿಂದ ಒಪ್ಪಿಗೆ ಸಿಗುವುದಿಲ್ಲ" ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಹಾಸ್ಯದ ಮಿತಿಗಳ ಬಗ್ಗೆ ಚರ್ಚೆ

ಈ ಘಟನೆಗಳ ಬಳಿಕ, ಹಾಸ್ಯಕ್ಕೆ ಮಿತಿ ಇರಬೇಕೇ? ಕೆಲವು ವಿಷಯಗಳನ್ನು ಹಾಸ್ಯದಿಂದ ದೂರವಿಡಬೇಕೇ? ಎಂಬ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅತ್ಯಾಚಾರ, ಹಿಂಸೆ, ಮೃತದೇಹಗಳು ಹಾಗೂ ಮಾನವೀಯ ನೋವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಾಸ್ಯದ ವಿಷಯವನ್ನಾಗಿಸುವುದು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.