ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2025: ಲಾಂಗ್‌ ಲೇಯರ್‌ ಕೋಟ್‌ನಲ್ಲಿ ವಿಂಟರ್‌ ಫ್ಯಾಷನ್‌ಗೆ ಸೈ ಎಂದ ನಟಿ ಸುಶ್ಮಿತಾ ಸೇನ್‌

Sushmita Sen: ಐವರಿ ಶೇಡ್‌ನ ಲಾಂಗ್‌ ಕಾಲರ್‌ ಇರುವ ಎಥ್ನಿಕ್‌ ಕೋಟ್‌ನಲ್ಲಿ ನಟಿ ಸುಶ್ಮಿತಾ ಸೇನ್‌ ಕಾಣಿಸಿಕೊಂಡಿದ್ದು, ಈ ವಿಂಟರ್‌ ಸೀಸನ್‌ನಲ್ಲಿ ಎಥ್ನಿಕ್‌ ಲುಕ್‌ ಬಯಸುವ ಫ್ಯಾಷನ್‌ ಪ್ರಿಯರಿಗೆ ಪ್ರಿಯವಾಗಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆಯೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸುಶ್ಮಿತಾ ಸೇನ್‌, ನಟಿ., ಫೋಟೋಗ್ರಾಫಿ: ಅನಿಶ್‌ ಗ್ರಿಡ್‌
1/5

ಲಾಂಗ್‌ ಲೇಯರ್‌ ಎಥ್ನಿಕ್‌ ಕೋಟ್‌ನಲ್ಲಿ ನಟಿ ಸುಶ್ಮಿತಾ ಸೇನ್‌ ವಿಂಟರ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ.‌ ಹೌದು, ನೋಡಲು ಮನಮೋಹಕವಾಗಿರುವ ಈ ಲಾಂಗ್‌ ಐವರಿ ಶೇಡ್‌ನ ಔಟ್‌ಫಿಟ್‌ ಲೇಯರ್‌ ಲುಕ್‌ ಬಯಸುವ ಎಥ್ನಿಕ್‌ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದ್ದು, ಈ ಸೀಸನ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ.

2/5

ಇದ್ಯಾವ ಬಗೆಯ ಡಿಸೈನರ್‌ವೇರ್‌?

ಅಂದಹಾಗೆ, ಸುಶ್ಮಿತಾ ಸೇನ್‌ ಧರಿಸಿರುವ ಈ ಔಟ್‌ಫಿಟ್‌ ಸೆಲೆಬ್ರೆಟಿ ಡಿಸೈನರ್‌ ರೋಹಿತ್‌ ಬಾಲ್‌ ಅವರ ಕಲೆಕ್ಷನ್‌ದ್ದಾಗಿದೆ. ನೋಡಲು ಸಿಂಪಲ್ಲಾಗಿ ಕಂಡರೂ ದುಬಾರಿಯದ್ದಾಗಿದೆ. ರಾಯಲ್‌ ಲುಕ್‌ ನೀಡುವ ಐವರಿ ಶೇಡ್‌ನಲ್ಲಿ ಕಾಲರ್‌ ಹೊಂದಿರುವ ಮೇಲ್ಭಾಗದ ಈ ಕೋಟ್‌ ಪಾದಗಳವರೆಗೂ ಅಂದರೇ ಫ್ಲೋರ್‌ ಲೆಂಥ್‌ ಹೊಂದಿದೆ. ಲೇಯರ್‌ ಲುಕ್‌ಗೆ ಸಾಥ್‌ ನೀಡಿದೆ. ಇನ್ನು, ಒಳಗಡೆ ಬ್ಲ್ಯಾಕ್‌ ಶೇಡ್‌ನ ಲಾಂಗ್‌ ಫ್ರಾಕ್‌ನಂತಹ ಎ ಲೈನ್‌ ಡ್ರೆಸ್‌ ಇದಕ್ಕೆ ಮಿಕ್ಸ್ ಮ್ಯಾಚ್‌ ಮಾಡಲಾಗಿದೆ. ಹೆಚ್ಚೇನೂ ಡಿಸೈನ್‌ ಹೊಂದಿಲ್ಲದ ಈ ಡಿಸೈನರ್‌ವೇರ್‌ ಈ ವಿಂಟರ್‌ ಸೀಸನ್‌ನ ಎಥ್ನಿಕ್‌ವೇರ್‌ ಕೆಟಗರಿಯಲ್ಲಿ ಟ್ರೆಂಡಿಯಾಗಿದೆ.

3/5

ಲೇಯರ್‌ ಎಥ್ನಿಕ್‌ ಲುಕ್‌ಗೆ ಲಾಂಗ್‌ ಕೋಟ್‌

ಅಂದಹಾಗೆ, ಈ ವಿಂಟರ್‌ ಸೀಸನ್‌ನಲ್ಲಿ ಗ್ಲಾಮರಸ್‌ ಡ್ರೆಸ್‌ ಧರಿಸಲು ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣವೂ ಇದೆ. ಅತಿಯಾದ ಥಂಡಿ ಹಾಗೂ ಗಾಳಿ. ಇದಕ್ಕೆ ಪೂರಕ ಎಂಬಂತೆ ಈ ಎಥ್ನಿಕ್‌ವೇರ್‌ ಲೇಯರ್‌ ಲುಕ್‌ನಲ್ಲಿರುವ ಲಾಂಗ್‌ ಕೋಟ್‌, ಜಾಕೆಟ್‌ಗಳು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಡಿಸೈನರ್ಸ್.

4/5

ಲಾಂಗ್‌ ಎಥ್ನಿಕ್‌ ಕೋಟ್‌ಗಳ ಬಳಕೆ

ಲಾಂಗ್‌ ಎಥ್ನಿಕ್‌ ಲುಕ್‌ ಇರುವ ಕೋಟ್‌ಗಳನ್ನು ದೇಸಿ ಔಟ್‌ಫಿಟ್‌ಗಳ ಜತೆ ಮಾತ್ರವಲ್ಲ, ವೆಸ್ಟರ್ನ್‌ ಔಟ್‌ಫಿಟ್‌ಗಳೊಂದಿಗೂ ಬಳಸಬಹುದು. ಗೌನ್‌ ಜತೆ, ಸೀರೆ ಜತೆ, ಲೆಹೆಂಗಾ ಜತೆಯೂ ಮಿಕ್ಸ್ ಮ್ಯಾಚ್‌ ಬಳಸಬಹುದು ಎನ್ನುತ್ತಾರೆ ಡಿಸೈನರ್ಸ್.

5/5

ಐವರಿ ಶೇಡ್‌ನ ಲಾಂಗ್‌ ಕಾಲರ್‌ ಇರುವ ಎಥ್ನಿಕ್‌ ಕೋಟ್‌ನಲ್ಲಿ ನಟಿ ಸುಶ್ಮಿತಾ ಸೇನ್‌ ಕಾಣಿಸಿಕೊಂಡಿದ್ದು, ಈ ವಿಂಟರ್‌ ಸೀಸನ್‌ನಲ್ಲಿ ಎಥ್ನಿಕ್‌ ಲುಕ್‌ ಬಯಸುವ ಫ್ಯಾಷನ್‌ ಪ್ರಿಯರಿಗೆ ಪ್ರಿಯವಾಗಿದೆ.

ಶೀಲಾ ಸಿ ಶೆಟ್ಟಿ

View all posts by this author