ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ರಿಬ್ಡ್ ಟೀ ಶರ್ಟ್‌ನಲ್ಲಿ ಟೈಗರ್‌ ಶ್ರಾಫ್‌ ಅವರಂತೆ ಕಾಣಲು ಇಲ್ಲಿವೆ 5 ಸ್ಟೈಲಿಂಗ್‌ ಟಿಪ್ಸ್

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಧರಿಸಿದ್ಧ, ರಿಬ್ಡ್ ಟೀ ಶರ್ಟ್ ಫ್ಯಾಷನ್‌ ಇತ್ತೀಚೆಗೆ ಸಾಕಷ್ಟು ಟ್ರೆಂಡಿಯಾಗಿದೆ. ಕೂಲ್‌ ಹಾಗೂ ಬಿಂದಾಸ್‌ ಲುಕ್ಕನ್ನು ನೀಡುವ ಈ ಟೀ ಶರ್ಟ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವುದು ಹೇಗೆ? ಎಂಬುದರ ಸ್ಟೈಲಿಸ್ಟ್‌ಗಳು 5 ಟಿಪ್ಸ್ ನೀಡಿದ್ದಾರೆ.

ಚಿತ್ರಗಳು: ಟೈಗರ್‌ ಶ್ರಾಫ್‌, ಬಾಲಿವುಡ್‌ ನಟ
1/5

ಟೈಗರ್‌ ಶ್ರಾಫ್‌ ಧರಿಸಿದ್ಧ ರಿಬ್ಡ್ ಟೀ ಶರ್ಟ್ ಸಖತ್‌ ಟ್ರೆಂಡಿಯಾಗಿದೆ. ಹೌದು, ಇತ್ತೀಚೆಗೆ ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಧರಿಸಿದ್ದ, ಬಿಂದಾಸ್‌ ಹಾಗೂ ಕೂಲ್‌ ಲುಕ್‌ ಈ ಎರಡೂ ಲುಕ್‌ಗೆ ಸಾಥ್‌ ನೀಡಿರುವ ಲೈಟ್‌ ಶೇಡ್‌ನ ಲೈಟ್‌ ಬ್ಲ್ಯೂ ಕ್ರ್ಯೂ ನೆಕ್‌ಲೈನ್‌ ಸ್ಟೆಟರ್‌ನಂತೆ ಕಾಣಿಸುವ ರಿಬ್ಡ್ ಟೀ ಶರ್ಟ್ ಸದ್ಯ ಮೆನ್ಸ್ ಫ್ಯಾಷನ್‌ನಲ್ಲಿ ಪ್ರಚಲಿತದಲ್ಲಿದೆ. ‌

ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಟ್ರೆಂಡಿಯಾಗಿರುವ ಈ ಈ ಟೀ ಶರ್ಟ್, ಟೈಗರ್‌ ಶ್ರಾಫ್‌ ಧರಿಸಿ, ಕಾಣಿಸಿಕೊಂಡ ನಂತರ ಮೊದಲಿಗಿಂತ ಬೇಡಿಕೆ ಹೆಚ್ಚಿಸಿಕೊಂಡಿವೆ. ಕಾಲೇಜು ಹುಡುಗರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ರಿಬ್ಡ್ ಟೀ ಶರ್ಟ್/ಸ್ವೆಟರ್‌/ಪುಲ್‌ ಓವರ್‌

ರಿಬ್ಡ್ ವಿನ್ಯಾಸದಲ್ಲಿ ಈಗಾಗಲೇ ಟೀ ಶರ್ಟ್, ಸ್ವೆಟರ್‌ ಹಾಗೂ ಪುಲ್‌ಓವರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮಾನ್ಸೂನ್‌ ಸೀಸನ್‌ಗೆ ಬೆಸ್ಟ್ ಎನ್ನಬಹುದು. ಹಾಗಾಗಿ ಇವುಗಳಲ್ಲಿ ಯಾವುದನ್ನೂ ಬೇಕಾದರೂ ಆಯ್ಕೆ ಮಾಡಿ ಧರಿಸಬಹುದು. ಸೀಸನ್‌ಗೆ ಹೊಂದುತ್ತವೆ.

3/5

ರಿಬ್ಡ್ ಟೀ ಶರ್ಟ್‌ಗೆ ಮಿಕ್ಸ್ ಮ್ಯಾಚ್‌ ಹೀಗೆ ಮಾಡಿ

ಕೂಲ್‌ ಲುಕ್‌ ಬೇಕೆನಿಸಿದಲ್ಲಿ ಸಿಂಪಲ್‌ ಜೀನ್ಸ್ ಪ್ಯಾಂಟ್‌ ಮ್ಯಾಚ್‌ ಮಾಡಿ. ಫಾರ್ಮಲ್‌ ಪ್ಯಾಂಟ್‌ ಮ್ಯಾಚ್‌ ಆಗದು ಎಂಬುದು ನೆನಪಿರಲಿ. ಬಿಂದಾಸ್‌ ಲುಕ್‌ಗಾಗಿ ಇದಕ್ಕೆ ಟೊರ್ನ್‌ ಪ್ಯಾಂಟ್‌ ಧರಿಸಿ.

ಸ್ಟೈಲಿಶ್‌ ಲುಕ್‌ಗೆ ಸಾಥ್‌ ನೀಡುವ ಆಕ್ಸೆಸರೀಸ್‌

ನೋಡಲು ಸ್ಟೈಲಿಶ್‌ ಆಗಿ ಕಾಣಿಸಲು ಸನ್‌ಗ್ಲಾಸ್‌, ಸಿಲ್ವರ್‌ ಲಿಂಕ್‌ ಚೈನ್‌ ಅಥವಾ ಬ್ರೇಸ್‌ಲೇಟ್‌ ವಾಚ್‌ ಧರಿಸಿ.

4/5

ಫಂಕಿ ಹೇರ್‌ಸ್ಟೈಲ್‌

ರಿಬ್ಡ್ ಟೀ ಶರ್ಟ್ ಹಾಗೂ ಪುಲ್‌ ಓವರ್‌ಗಳಿಗೆ ಫಂಕಿ ಹೇರ್‌ಸ್ಟೈಲ್‌ ಹೊಂದುತ್ತದೆ. ಇಲ್ಲವೇ, ಯಾವುದೇ ಬಗೆಯ ಹೇರ್‌ಸ್ಟೈಲ್‌ ಆದರೂ ಕೂಡ ಓಕೆ.

5/5

ಉತ್ತಮ ಶೂಗಳನ್ನು ಧರಿಸಿ

ಚಪ್ಪಲಿಗಳನ್ನು ಸೈಡಿಗಿಡಿ. ಈ ಟೀ ಶರ್ಟ್‌ಗೆ ಆದಷ್ಟೂ ಆಕರ್ಷಕ ಶೂಗಳನ್ನು ಧರಿಸಿ. ನೋಡಲು ಹೈ ಫ್ಯಾಷನ್‌ ಲುಕ್‌ ನೀಡುತ್ತದೆ.

ಶೀಲಾ ಸಿ ಶೆಟ್ಟಿ

View all posts by this author