ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ; ಮತ್ತೆ ಹಾರ್ಮೊಜ್‌ ಜಲಸಂಧಿಯನ್ನು ಮುಚ್ಚಿದ ಇರಾನ್‌

ಇರಾನ್‌ ಹಾಗೂ ಅಮೆರಿಕದ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ. ಆದರೆ ಇಂದು ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್ ಪಡೆಗಳು ರಾತ್ರೋರಾತ್ರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಜನ ಮೃತಪಟ್ಟಿದ್ದಾರೆ. ಬಳಿಕ ಇದೀಗ ಇರಾನ್‌ ಹಾರ್ಮೊಜ್‌ ಜಲಸಂಧಿಯನ್ನು ಮತ್ತೆ ಮುಚ್ಚಿದೆ.

ಸಂಗ್ರಹ ಚಿತ್ರ

ನವದೆಹಲಿ: ಇರಾನ್‌ ಹಾಗೂ ಅಮೆರಿಕದ (America- Iran) ನಡುವೆ ಶಾಂತಿ ಒಪ್ಪಂದ (Strait Of Hormuz) ಏರ್ಪಟ್ಟಿದೆ. ಆದರೆ ಇಂದು ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್ ಪಡೆಗಳು ರಾತ್ರೋರಾತ್ರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಜನ ಮೃತಪಟ್ಟಿದ್ದಾರೆ. ಬಳಿಕ ಇದೀಗ ಇರಾನ್‌ ಹಾರ್ಮೊಜ್‌ ಜಲಸಂಧಿಯನ್ನು ಮತ್ತೆ ಮುಚ್ಚಿದೆ. ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ ಎಂದು ಇರಾನ್ ನೌಕಾಪಡೆ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಯುದ್ಧವನ್ನು ಕೊನೆಗೊಳಿಸಲು ಉಭಯ ದೇಶಗಳ ನಡುವಿನ ತಿಳುವಳಿಕೆ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿದೆ. "ಇಸ್ರೇಲ್ ಲೆಬನಾನ್‌ನಿಂದ ಹಿಂದೆ ಸರಿದ ನಂತರ, ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದು, ಮತ್ತು ಪರ್ಷಿಯನ್ ಕೊಲ್ಲಿ ಮತ್ತು ಆ ಪ್ರದೇಶದಿಂದ ಅಮೆರಿಕದ ಭಯೋತ್ಪಾದಕ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ಪ್ರಮುಖ ಷರತ್ತುಗಳಲ್ಲಿ ಸೇರಿವೆ, ಈ ಷರತ್ತುಗಳು ಈಡೇರುವವರೆಗೆ ಹಾರ್ಮೊಜ್‌ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಇರಾನ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಲೆಬನಾನ್ ಮೇಲೆ ಇಸ್ರೇಲ್ ವಾಯುಪಡೆ ದಾಳಿ ಮುಂದುವರೆಸಿದ್ದು, ಬೆಕಾ ಕಣಿವೆಯಲ್ಲಿರುವ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಮೂಲಸೌಕರ್ಯದ ಮೇಲೆ ದಾಳಿ ಮಾಡಲಾಗಿದೆ. ಇದು ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಪ್ರತಿಕ್ರಿಯೆ" ಎಂದು ಹೇಳಿದೆ.

ಇರಾನ್ ಬೆಂಬಲಿತ ಹೆಜ್ಬೊಲ್ಲಾ ಭಯೋತ್ಪಾದಕರು ಪದೇಪದೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದು, ದಾಳಿಯಲ್ಲಿ ಇಸ್ರೇಲ್ ನ 52ನೇ ಬೆಟಾಲಿಯನ್‌ನ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಡೋರ್ ಗೆಡಾಲಿಯಾ ಬೆನ್ ಸಿಮ್ಹಾನ್ (32) ಮೃತಪಟ್ಟಿದ್ದಾರೆ ಮತ್ತು ಐವರು ಸೈನಿಕರು ಗಾಯಗೊಂಡಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಅಮೆರಿಕದಲ್ಲಿ ಇರಾನ್‌ ತಂಡಕ್ಕೆ ಪ್ರಯಾಣ ನಿರ್ಬಂಧ; ಫಿಫಾಗೆ ದೂರು

ಅಮೆರಿಕ - ಇರಾನ್‌ ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ಸಂಘರ್ಷ ಪೀಡಿತ ಎಲ್ಲಾ ಪ್ರದೇಶಗಳಲ್ಲಿ ತಕ್ಷಣದ ಕದನ ವಿರಾಮ ಜಾರಿಯಾಗಬೇಕು ಹಾಗೂ ಲೆಬನಾನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಬೇಕು ಎಂದು ಉಲ್ಲೇಖಿಸಲಾಗಿದೆ.

Vishakha Bhat Heggar

View all posts by this author