ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಜೆಪಿ ಪ್ರತಿಭಟನೆಗೆ ಬೆಂಬಲ: ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್‌ ಗಾಂಧಿ ಮುಂಬೈಯಲ್ಲಿ ಪೊಲೀಸ್ ವಶಕ್ಕೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾದ ಕಾಕ್ರೋಚ್ ಜನತಾ ಪಕ್ಷದ ಚಳುವಳಿಗೆ ಬೆಂಬಲವಾಗಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಹಾತ್ಮ ಗಾಂಧಿಯವರ ಮರಿಮೊಮ್ಮಗ, 'ಹಮ್ ಭಾರತ್ ಕೆ ಲೋಗ್' ಸಂಘಟನೆಯ ಅಧ್ಯಕ್ಷ ತುಷಾರ್ ಗಾಂಧಿ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದರು.

ಸಂಗ್ರಹ ಚಿತ್ರ

ಮುಂಬೈ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಮಹಾತ್ಮ ಗಾಂಧಿಯವರ (Mahatma Gandhi) ಮರಿಮೊಮ್ಮಗ, 'ಹಮ್ ಭಾರತ್ ಕೆ ಲೋಗ್' ಸಂಘಟನೆಯ ಅಧ್ಯಕ್ಷ ತುಷಾರ್ ಗಾಂಧಿ (Tushar Gandhi) ಅವರನ್ನು ಶನಿವಾರ ಮುಂಬೈ ಪೊಲೀಸರು (Mumbai police) ವಶಕ್ಕೆ ಪಡೆದರು. ದೆಹಲಿಯ (delhi protest) ಜಂತರ್ ಮಂತರ್‌ನಲ್ಲಿ ಆಯೋಜಿಸಲಾದ ಸಿಜೆಪಿ ಚಳುವಳಿಗೆ (Cjp protest) ಬೆಂಬಲವಾಗಿ ಮುಂಬೈನ ಆಗಸ್ಟ್ ಕ್ರಾಂತಿ (August Kranti) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಶನಿವಾರ ಆಯೋಜಿಸಲಾದ ಸಿಜೆಪಿ ಪ್ರತಿಭಟನೆಗೆ ಬೆಂಬಲವಾಗಿ ಮುಂಬೈನ ಗ್ರಾಂಟ್ ರೋಡ್ ಪ್ರದೇಶದಲ್ಲಿರುವ ಆಗಸ್ಟ್ ಕ್ರಾಂತಿ ಮೈದಾನದಲ್ಲಿ "ಚಲೆ ಜಾವೋ!" ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲು ತುಷಾರ್ ಗಾಂಧಿ ಯೋಜನೆ ಹಾಕಿಕೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಬಾಂದ್ರಾದ ಲಿಂಕಿಂಗ್ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ತುಷಾರ್ ಗಾಂಧಿ ಅವರನ್ನು ಪೊಲೀಸರು ಬಂಧಿಸಿ ಡಿ.ಎನ್. ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.

ವಿಮಾನ ನಿಲ್ದಾಣದಲ್ಲೇ ಸಿಜೆಪಿ ನಾಯಕರ ಬಂಧನ: ಅಜಿಂಕ್ಯ ಶಿಂಧೆಗೆ ಪ್ರತಿಭಟನೆ ಜವಾಬ್ದಾರಿ ಕೊಟ್ಟ ಅಭಿಜಿತ್ ದೀಪ್ಕೆ

ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಬರೆದಿರುವ ತುಷಾರ್ ಗಾಂಧಿ, ಸಾಂತಾಕ್ರೂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಮುಂಬೈ ಪೊಲೀಸರು ನನ್ನನ್ನು ಬಂಧಿಸಿದರು. ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಮುಂಬೈ ಪೊಲೀಸ್ ಜಿಂದಾಬಾದ್. ಡಿ.ಎನ್. ನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ಲೋಕಶಾಹಿ ಜಿಂದಾಬಾದ್! ನನ್ನನ್ನು ಬಂಧಿಸಿದರೂ ಆಗಸ್ಟ್ ಕ್ರಾಂತಿ ಮೈದಾನದ ಪ್ರತಿಭಟನೆ ಮುಂದುವರಿಯುತ್ತದೆ. ಚಲೋ ಆಗಸ್ಟ್ ಕ್ರಾಂತಿ ಮೈದಾನ ಎಂದು ತಿಳಿಸಿದ್ದಾರೆ.



ಸಿಜೆಪಿ ಪರವಾಗಿ ತುಷಾರ್ ಗಾಂಧಿ ಕರೆ ನೀಡಿದ್ದ ಪ್ರತಿಭಟನೆಗೆ ಯಾವುದೇ ಅನುಮತಿ ಕೇಳಿರಲಿಲ್ಲ. ಬಾಂಬೆ ಹೈಕೋರ್ಟ್‌ನ ನಿರ್ದೇಶನಗಳ ಪ್ರಕಾರ ಪ್ರತಿಭಟನೆಗಳನ್ನು ಆಜಾದ್ ಮೈದಾನದಲ್ಲಿ ಮಾತ್ರ ನಡೆಸಲು ಅವಕಾಶವಿರುವುದರಿಂದ ತಾವು ಅನುಮತಿ ನೀಡಲು ಸಾಧ್ಯವಿರಲಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಬಾತ್‌ರೋಬ್ ಧರಿಸಿ ಐ-ಪ್ಯಾಚ್‌ ಹಚ್ಚಿಕೊಂಡ ಮಹಿಳೆ: ವರ್ತನೆ ಕಂಡು ಪ್ರಯಾಣಿಕರು ಶಾಕ್‌

ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ ಕಾರ್ಯಕರ್ತರು ಅನುಮತಿ ಕೋರಿ ಮುಂಬೈ ಪೊಲೀಸರಿಗೆ ಇಮೇಲ್ ಕಳುಹಿಸಲಾಗಿದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಂಧೇರಿಯಲ್ಲಿ ಸಂಘಟನೆಯ ಉಪಾಧ್ಯಕ್ಷೆ ಗುಡ್ಡಿ ಎಸ್.ಎಲ್. ಅವರನ್ನು ಕೂಡ ಬಂಧಿಸಲಾಯಿತು.

ವಿದ್ಯಾ ಇರ್ವತ್ತೂರು

View all posts by this author