ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Handloom Day: ನೇಕಾರರನ್ನು ಬೆಂಬಲಿಸಿ, ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ: ಪ್ರಧಾನಿ ನರೇಂದ್ರ ಮೋದಿ ಕರೆ

ಕೈ ಮಗ್ಗ ದಿನದ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ದಿನದ ಆಚರಣೆಯಿಂದ ದೇಶದ ನೇಕಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯವಾಗುವುದು. ನೇಕಾರರನ್ನು ಬೆಂಬಲಿಸಿ, ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಎಂದು ಅವರು ಕರೆ ನೀಡಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ನೇಕಾರರನ್ನು ಬೆಂಬಲಿಸಿ, ಕೈ ಮಗ್ಗ ಉತ್ಪನ್ನಗಳನ್ನು ಖರೀದಿಸಿ ಎಂದು ಕೈ ಮಗ್ಗ ದಿನದ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗುರುವಾರ ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದು, 'ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ನನ್ನೊಂದಿಗೆ ಸಿದ್ಧರಾಗಿ' ವಿಡಿಯೊಗಳನ್ನು ಹಂಚಿಕೊಳ್ಳಿ ಎಂದು ತಿಳಿಸಿದ್ದಾರೆ. ಈ ಮೂಲಕ ಅವರು ಜನರು ನೇಕಾರರನ್ನು ಬೆಂಬಲಿಸಲು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು.

ಕೈ ಮಗ್ಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಜನರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಮತ್ತು ಜಾಗತಿಕ ಗಮನ ಸೆಳೆಯಲು ವಿಡಿಯೊಗಳನ್ನು ಮಾಡುವಂತೆ ಮನವಿ ಮಾಡಿದರು. ಅಲ್ಲದೇ ಈ ದಿನದ ಆಚರಣೆಯಿಂದ ದೇಶದ ನೇಕಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ ಬೆಂಜಮಿನ್ ನೆತನ್ಯಾಹು; ಭಾರತ–ಇಸ್ರೇಲ್ ಬಾಂಧವ್ಯ ಮತ್ತಷ್ಟು ಬಲಪಡಿಸಲು ಮಾತುಕತೆ

ಆಗಸ್ಟ್ 7 ರಂದು ದೇಶಾದ್ಯಂತ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುವುದು. ಭಾರತದ ಕೈಮಗ್ಗದ ವೈವಿಧ್ಯತೆಯನ್ನು ಜನಪ್ರಿಯಗೊಳಿಸೋಣ. ಗ್ರೇಟ್ ರೆಡಿ ವಿತ್ ಮಿ ವಿಡಿಯೊಗಳು ಸೇರಿದಂತೆ ನಿಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳ ವಿಡಿಯೊಗಳನ್ನು ಮಾಡಿ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ ಎಂದು ಅವರು ತಿಳಿಸಿದ್ದಾರೆ.



ಈ ಸಂದರ್ಭದಲ್ಲಿ ಅವರು 1905ರ ಆಗಸ್ಟ್ 7 ರಂದು ಬ್ರಿಟಿಷರ ವಿರುದ್ಧ ಸ್ವದೇಶಿ ಚಳುವಳಿ ಪ್ರಾರಂಭವಾದಾಗ ದೇಶದ ಎಲ್ಲರೂ ಒಂದಾಗಿದ್ದರು. ಕಳೆದ ವಾರ ಎಲ್ಲರೂ ಸ್ನೇಹಿತರ ದಿನವನ್ನು ಆಚರಿಸಿದ್ದೀರಿ. ಅಂತೆಯೇ ಆಗಸ್ಟ್ 7 ರಂದು ಕೈಮಗ್ಗ ದಿನವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ನಾನು ನಿಮ್ಮನ್ನು ವಿನಂತಿಸುವುದಾಗಿ ಅವರು ತಿಳಿಸಿದ್ದಾರೆ.

“ಹೆಣ್ಣು ಮಗು ಹುಟ್ಟಿದರೂ ಕೇಂದ್ರ ಸರ್ಕಾರವನ್ನೇ ದೂಷಿಸುತ್ತೀರಿ”: ವಿವಾದ ಹುಟ್ಟು ಹಾಕಿದ ಬಿಜೆಪಿ ಶಾಸಕ

ವಿಶ್ವದ ಜನರು ಕೈಮಗ್ಗ ಉತ್ಪನ್ನಗಳತ್ತ ಆಕರ್ಷಿಸಲು ಎಲ್ಲರೂ ಸಣ್ಣ ವಿಡಿಯೊಗಳನ್ನು ಮಾಡಿ ಅವುಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ನಮ್ಮ ದೇಶವನ್ನು ಇದರಿಂದ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿದೆ. ಇದರಿಂದ ನೇಕಾರರು ಮತ್ತು ಸಣ್ಣ ಉದ್ಯಮಗಳಿಗೆ ಆರ್ಥಿಕ ಸಹಾಯ ದೊರೆಯುವುದು ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author