ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಸೂದೆ ಅಂಗೀಕರಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಇಲ್ಲ; ಸುಪ್ರೀಂ ಕೋರ್ಟ್‌ ಖಡಕ್‌ ಆದೇಶ

SC on Tamil Nadu Governor Case: ಮಸೂದೆ ಅಂಗೀಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿ ತಿಕ್ಕಾಟಕ್ಕೆ ಕೊನೆಗೂ ಬ್ರೇಕ್‌ ಬೀಳುವಂತಾಗಿದೆ. ಮಸೂದೆ ಅಂಗೀಕರಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.

ಮಸೂದೆ ಅಂಗೀಕರಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಇಲ್ಲ

ಮಸೂದೆ ಅಂಗೀಕರಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು(ಸಾಂದರ್ಭಿಕ ಚಿತ್ರ) -

Rakshita Karkera
Rakshita Karkera Nov 20, 2025 1:16 PM

ನವದೆಹಲಿ: ಸರ್ಕಾರಗಳು ಮಂಡಿದುವ ಮಸೂದೆಗಳನ್ನು ಅಂಗೀಕರಿಸಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಯಾವುದೇ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌(Supreme Court) ಖಡಕ್‌ ಆದೇಶವನ್ನು ನೀಡಿದೆ. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ನಡುವಿನ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಶ್ನೆಗಳಿಗೆ ಪಂಚ ಸದಸ್ಯಪೀಠ ಈ ಸ್ಪಷ್ಟ ಉತ್ತರ ನೀಡಿದೆ. ರಾಷ್ಟ್ರಪತಿ ಅಥವಾ ರಾಜ್ಯಪಾಲರ ನಡೆ ನ್ಯಾಯಸಮ್ಮತವಲ್ಲ ಅಥವಾ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದಾದರೆ ಮಾತ್ರ ನ್ಯಾಯಾಂಗ ಪರಿಶೀಲನೆಗೆ ಒಳಪಡಬಹುದು ಎಂದು ಒತ್ತಿ ಹೇಳಿದೆ.

ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಶಾಸಕಾಂಗವು ಅಂಗೀಕರಿಸಿದ ಮಸೂದೆಗಳನ್ನು ಅಂಗೀಕರಿಸಲು ಗಡುವನ್ನು ನಿಗದಿಪಡಿಸಿದ ದ್ವಿಸದಸ್ಯ ಪೀಠ ನೀಡಿದ ತೀರ್ಪಿನ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಇಂದು ಪ್ರತಿಕ್ರಿಯೆ ಬಂದಿದೆ. ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯದ ಅಭಿಪ್ರಾಯವನ್ನು ಕೋರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, "ಭಾರತ ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ಮಸೂದೆಯನ್ನು ತಮ್ಮ ಮುಂದೆ ಮಂಡಿಸಿದಾಗ ಸಚಿವ ಸಂಪುಟವು ನೀಡುವ ಸಹಾಯ ಮತ್ತು ಸಲಹೆಗೆ ರಾಜ್ಯಪಾಲರು ಬದ್ಧರಾಗಿದ್ದಾರೆಯೇ?" ಎಂದು ಕೇಳಿದ್ದರು. ಸಂವಿಧಾನದ 361 ನೇ ವಿಧಿಯನ್ನು ಅವರು ಉಲ್ಲೇಖಿಸಿದ್ದರು. ಆ ವಿಧಿಯ ಪ್ರಕಾರ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಅಧಿಕಾರ ಮತ್ತು ಕರ್ತವ್ಯಗಳ ಚಲಾವಣೆಯಲ್ಲಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ.

ಈ ಸುದ್ದಿಯನ್ನೂ ಓದಿ: DK Shivakumar: ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೇರಿಗೂ ಸಂದ ಜಯ: ಡಿ.ಕೆ. ಶಿವಕುಮಾರ್

ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು, ಕಾಲಮಿತಿಯನ್ನು ವಿಧಿಸುವುದು ಸಂವಿಧಾನಕ್ಕೆ ಖಂಡಿತವಾಗಿ ವಿರುದ್ಧವಾಗಿದೆ ಎಂದು ಹೇಳಿದೆ. ಅಲ್ಲದೇ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಕೂಡ ಸಹ ನ್ಯಾಯಾಲಯ ತಳ್ಳಿಹಾಕಿತು. ಇನ್ನು ಪಂಚ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಇದ್ದರು.

ತಮಿಳುನಾಡು ಪ್ರಕರಣ

ಈ ವರ್ಷ ಏಪ್ರಿಲ್ 8 ರಂದು, ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠವು ತಮಿಳುನಾಡು ರಾಜ್ಯ ಮತ್ತು ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ತೀರ್ಪು ನೀಡಿತು, ಇದರಲ್ಲಿ ಡಿಎಂಕೆ ಸರ್ಕಾರವು ರಾಜ್ಯಪಾಲ ಆರ್.ಎನ್. ರವಿ ಅವರು ಅನಿರ್ದಿಷ್ಟವಾಗಿ ಮಸೂದೆಗಳನ್ನು ತಡೆಹಿಡಿದಿದ್ದಾರೆ ಎಂದು ಆರೋಪಿಸಿತ್ತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವು ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡು ತಡೆಹಿಡಿಯಲಾದ 10 ಮಸೂದೆಗಳನ್ನು ರಾಜ್ಯಪಾಲರಿಗೆ ಮಂಡಿಸಿದ ದಿನಾಂಕದಂದು ಅನುಮೋದನೆ ನೀಡಲಾಗಿದೆ ಎಂದು ಘೋಷಿಸಿತು.

Mekedatu Project: ಮೇಕೆದಾಟು ಯೋಜನೆ: ಕರ್ನಾಟಕದ ಪರ ಸುಪ್ರೀಂ ಕೋರ್ಟ್‌ ತೀರ್ಪು, ತಮಿಳುನಾಡು ಅರ್ಜಿ ವಜಾ

ನಾವು ಯಾವುದೇ ರೀತಿಯಲ್ಲಿ ರಾಜ್ಯಪಾಲರ ಅಧಿಕಾರವನ್ನು ದುರ್ಬಲಗೊಳಿಸುತ್ತಿಲ್ಲ. ರಾಜ್ಯಪಾಲರು ಸಂಸದೀಯ ಪ್ರಜಾಪ್ರಭುತ್ವದ ಸ್ಥಾಪಿತ ಸಂಪ್ರದಾಯಗಳಿಗೆ ಗೌರವದಿಂದ ವರ್ತಿಸಬೇಕು ಎಂಬುದಷ್ಟೇ ಕೋರ್ಟ್‌ ಹೇಳುತ್ತಿರುವುದು. ಶಾಸಕಾಂಗದ ಮೂಲಕ ವ್ಯಕ್ತಪಡಿಸಲಾಗುವ ಜನರ ಇಚ್ಛೆಯನ್ನು ಗೌರವಿಸಬೇಕು. ಹಾಗೆಯೇ ಜನರಿಗೆ ಜವಾಬ್ದಾರರಾಗಿರುವ ಚುನಾಯಿತ ಸರ್ಕಾರವನ್ನು ಗೌರವಿಸಬೇಕು ಎಂದು ತೀರ್ಪಿನಲ್ಲಿ ದ್ವಿಸದಸ್ಯ ಪೀಠ ಹೇಳಿತ್ತು.

ಏಪ್ರಿಲ್‌ನಲ್ಲಿ ಇಬ್ಬರು ನ್ಯಾಯಾಧೀಶರ ಪೀಠದ ತೀರ್ಪು ಕೇಂದ್ರದ ಕೆಲವು ನಾಯಕರಿಂದ ಟೀಕೆಗೆ ಗುರಿಯಾಯಿತು, ಅವರು ನ್ಯಾಯಾಲಯದ ತೀರ್ಪು ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ನ್ಯಾಯಾಂಗದ ಅತಿಕ್ರಮಣಕ್ಕೆ ಸಮಾನವಾಗಿವೆ ಎಂದು ಹೇಳಿದರು. ಇದಾದ ನಂತರ ಈ ಬಗ್ಗೆ ಸ್ಪಷ್ಟನೆ ಕೋರಿ ದ್ರೌಪದಿ ಮುರ್ಮು ಅವರು ಕೋರ್ಟ್‌ಗೆ ಪ್ರಶ್ನೆಗಳನ್ನು ಕೇಳಿದ್ದರು.