ನವದೆಹಲಿ: ಮಹಿಳೆಯ ಸೆಲ್ವಾರ್ ತೆಗೆಯುವುದು, ಎದೆಯನ್ನು ಒತ್ತುವುದು ಅತ್ಯಾಚಾರ (physical abuse) ಪ್ರಯತ್ನವಲ್ಲ ಎಂದು ತೀರ್ಪು ನೀಡಿದ್ದ ಪಾಟ್ನಾ ಹೈಕೋರ್ಟ್ (Patna high court) ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದೆ. 2008ರಲ್ಲಿ ಛಾಯಾಗ್ರಾಹಕನೊಬ್ಬನಿಂದ ಆಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಎಲ್ಲಾ ಆರೋಪಗಳಿಂದ ಖುಲಾಸೆಗೊಂಡಿದ್ದ ಆರೋಪಿಗೆ ನೋಟಿಸ್ ಜಾರಿ ಮಾಡಿದೆ.
2008ರಲ್ಲಿ ಯುವತಿಯೊಬ್ಬಳು ತಂದೆಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋದಾಗ ಅಲ್ಲಿನ ಛಾಯಾಗ್ರಾಹಕನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು. ಇದಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಳೆಯೊಬ್ಬರ ಸಲ್ವಾರ್ ತೆಗೆಯುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಅತ್ಯಾಚಾರದ ಪ್ರಯತ್ನವಾಗುವುದಿಲ್ಲ ಎಂದು ಹೇಳಿದ್ದ ಪಾಟ್ನಾ ಹೈಕೋರ್ಟ್‌ನ ಇತ್ತೀಚಿನ ತೀರ್ಪನ್ನು ಪ್ರಶ್ನಿಸಿದೆ.
ಗ್ರೇಟರ್ ನೋಯ್ಡಾ ಬಸ್ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ; ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೂ ಒಳಗೊಂಡಿದ್ದ ಪೀಠವು, ಪಾಟ್ನಾ ಹೈಕೋರ್ಟ್ ತೀರ್ಪಿನಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿವೆ. ಆರೋಪಿಯ ವಾದವನ್ನು ಆಲಿಸಿದ ಅನಂತರ ನಾವು ಅದನ್ನು ರದ್ದುಗೊಳಿಸಬಹುದು ಎಂದು ತಿಳಿಸಿದೆ.
ಜುಲೈ 9 ರಂದು ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಆಗಿದ್ದ ಹೈಕೋರ್ಟ್ ತೀರ್ಪನ್ನು ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ನ್ಯಾಯಾಲಯದ ಗಮನಕ್ಕೆ ತಂದ ಬಳಿಕ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಸ್ಥಳೀಯ ಪೊಲೀಸರ ಮೂಲಕ ಆರೋಪಿ ಹಿಮಾಂಶು ಪಾಠಕ್ ಅವರಿಗೆ ನೋಟಿಸ್ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ಆದೇಶದಲ್ಲಿ ಏನಿದೆ?
ಪಾಟ್ನಾ ಹೈಕೋರ್ಟ್ ನೀಡಿರುವ ತೀರ್ಪು ಆದೇಶದಲ್ಲಿ ಛಾಯಾಗ್ರಾಹಕ ಸಂತ್ರಸ್ತೆಯನ್ನು ಸ್ಟುಡಿಯೊದೊಳಗೆ ಕೂಡಿಹಾಕಿ ಬಾಗಿಲು ಮುಚ್ಚಿ ಆಕೆಯ ಸಲ್ವಾರ್ ತೆಗೆಯಲು ಪ್ರಯತ್ನಿಸಿ ಮತ್ತು ಎದೆಯನ್ನು ಒತ್ತುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; ದೇಶಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಿಜೆಪಿ
ಇಂತಹ ಕೃತ್ಯಗಳು ಮಹಿಳೆಯ ಗೌರವಕ್ಕೆ ಧಕ್ಕೆ ತರಲು ಕಾರಣವಾಗಬಹುದು ಎಂಬ ಉದ್ದೇಶದಿಂದ ಬಲಪ್ರಯೋಗ ಮಾಡಲಾಗಿದೆ ಎಂಬುದನ್ನು ಈ ಕೃತ್ಯ ಸಾಬೀತುಪಡಿಸಿದೆ. ಆದರೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು 511 ರ ಅಡಿಯಲ್ಲಿ ಅತ್ಯಾಚಾರ ಪ್ರಯತ್ನದ ಆರೋಪ ಮಾಡಲಾಗಿದೆ. ಆದರೆ ಇದು ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಅಪರಾಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಬರುತ್ತದೆ. ಸೆಕ್ಷನ್ 375, 376 ಮತ್ತು 511ರ ಅಡಿಯಲ್ಲಿ ಆರೋಪಗಳು ಸಾಬೀತಾಗಿಲ್ಲ. ಹೀಗಾಗಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಿದೆ.