ಶ್ರೀನಗರ, ನ. 27: ಭಯೋತ್ಪಾದಕ ಚಟುವಟಿಕೆಗಳಲ್ಲಿ (Terrorist links) ಭಾಗಿಯಾಗಿರುವ ಆರೋಪದ ಮೇಲೆ 19 ವರ್ಷದ ಯುವಕನನ್ನು ಜಮ್ಮು (Jammu) ಪೊಲೀಸರು ಬಂಧಿಸಿದ್ದಾರೆ. ಜಮ್ಮುವಿನ ರಿಯಾಸಿ ನಿವಾಸಿಯಾಗಿರುವ ಶಂಕಿತ ಆರೋಪಿ, ಬಥಿಂಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ. ಅಲ್ಲಿಂದ ಪೊಲೀಸರು ಆತನನ್ನು ಬಂಧಿಸಿದರು. ಆತನ ಗುರುತನ್ನು ಪೊಲೀಸರು ಹೊರ ಬಿಟ್ಟಿಲ್ಲ.
ಪ್ರಾಥಮಿಕ ತನಿಖೆಯಲ್ಲಿ, ಆತ ಸಾಮಾಜಿಕ ಮಾಧ್ಯಮದಲ್ಲಿ ಮೂಲಭೂತವಾದಿಯಾಗಿ ಬೆಳೆದಿದ್ದು, ಭಯೋತ್ಪಾದಕ ಕೃತ್ಯ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮತ್ತು ಇತರ ವಿದೇಶಗಳಲ್ಲಿರುವ ಹ್ಯಾಂಡ್ಲರ್‌ಗಳೊಂದಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಬಹು ಫೋರ್ಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 113(3) (ಭಯೋತ್ಪಾದಕ ಚಟುವಟಿಕೆ) ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವನನ್ನು ಬಂಧಿಸಲಾಗಿದೆ. ಆತನ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಇನ್ನು ಈ ಸಂಬಂಧ ಆರೋಪಿಯ ಬಗ್ಗೆ ವಿವರವಾದ ವಿಚಾರಣೆ ಮತ್ತು ಸಂಪೂರ್ಣ ತನಿಖೆ ನಡೆಯುತ್ತಿದೆ.
RSS ಕಾರ್ಯಕರ್ತನ ಕೊಲೆ ಪ್ರಕರಣ... ಹಂತಕನಿಗೆ ಪೊಲೀಸರಿಂದ ಗುಂಡೇಟು
ಗೆಳತಿಯನ್ನು ಕ್ರೂರವಾಗಿ ಕೊಂದ ಪ್ರೇಮಿ
ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಮೇಯಲ್ಲಿ ವಿವಾಹವಾಗಿದ್ದ ಮಹಿಳೆಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆ ನವೆಂಬರ್ 23ರಂದು ಜಂಗಲ್ ರಸೂಲ್‌ಪುರ ಗ್ರಾಮದಲ್ಲಿ ನಡೆದಿದೆ. ಮೃತ ಶಿವಾನಿ ತನ್ನ ಸೋದರಸಂಬಂಧಿಯ ಮದುವೆಗೆ ಹಾಜರಾಗಲು ಹೆತ್ತವರ ಮನೆಗೆ ಬಂದಿದ್ದಳು. ಈ ವೇಳೆ ಆಕೆಯ ಶವ ಸ್ನಾನಗೃಹದಲ್ಲಿ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಶಿವಾನಿಯ ಕುತ್ತಿಗೆಯಲ್ಲಿ ಆಳವಾದ ಗಾಯಗಳಾಗಿದ್ದು, ಸಾಯುವ ಮುನ್ನ ತನ್ನನ್ನು ತಾನು ಉಳಿಸಿಕೊಳ್ಳಲು ಹತಾಶಳಾಗಿ ಪ್ರಯತ್ನಿಸಿದ್ದಂತೆ ಕಂಡುಬಂದಿದೆ. ತನಿಖೆಯ ಸಮಯದಲ್ಲಿ, ಪೊಲೀಸರು ಮದುವೆಯ ವಿಡಿಯೊ ದೃಶ್ಯಗಳನ್ನು ಗಮನಿಸಿದ್ದಾರೆ. ಅದರಲ್ಲಿ ಆರೋಪಿ ವಿನಯ್ ನಿಶಾದ್ ಅಲಿಯಾಸ್ ದೀಪಕ್ ಶಿವಾನಿ ಬಳಿ ನಿಂತಿರುವುದು ಕಂಡುಬಂದಿದೆ. ಈ ದೃಶ್ಯಗಳ ನಂತರ, ಇಬ್ಬರೂ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ. ಶಿವಾನಿ ತನ್ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ವಿನಯ್ ನಿಶಾದ್‌ನನ್ನು ಪ್ರೀತಿಸುತ್ತಿದ್ದಳು. ಆ ರಾತ್ರಿ ಇಬ್ಬರೂ ಬಹಳ ಸಮಯ ಮಾತನಾಡುತ್ತಿದ್ದರು ಎಂದು ಮೊಬೈಲ್ ಕರೆ ದಾಖಲೆಗಳು ಬಹಿರಂಗಪಡಿಸಿವೆ.
ಪೊಲೀಸರು ಶ್ವಾನಗಳನ್ನು ಬಳಸಿ ಆರೋಪಿಯ ಮನೆಗೆ ಹೋಗುವ ಮಾರ್ಗವನ್ನು ಪತ್ತೆಹಚ್ಚಿ ಕೊಲೆಗೆ ಬಳಸಿದ ಕುಡುಗೋಲನ್ನು ವಶಪಡಿಸಿಕೊಂಡರು. ವಿಚಾರಣೆಯ ಸಮಯದಲ್ಲಿ, ಆರೋಪಿ ಶಿವಾನಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡನು. ಇಬ್ಬರೂ ತಡರಾತ್ರಿಯವರೆಗೆ ಮಾತನಾಡುತ್ತಿದ್ದರು. ಆಕೆ ತನ್ನೊಂದಿಗೆ ಇರಲು ಒತ್ತಾಯಪಡಿಸಿದ್ದಳು. ಹೀಗಾಗಿ ಬೆಳಗಿನ ಜಾವ 2 ಗಂಟೆಗೆ, ಆಕೆಯ ಕತ್ತು ಸೀಳಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆಯ ನಂತರ, ತನಿಖಾ ತಂಡವು ಶಿವಾನಿಯ ಸೋದರಸಂಬಂಧಿಯ ವಿವಾಹದ ವಿಡಿಯೊವನ್ನು ಮರು ಪರಿಶೀಲಿಸಿತು. ದೃಶ್ಯಾವಳಿಗಳಲ್ಲಿ, ರಾತ್ರಿ 10 ಗಂಟೆ ಸುಮಾರಿಗೆ ಹಾರ ಹಾಕುವ ಸಮಯದಲ್ಲಿ ಶಿವಾನಿಯಿಂದ ಸ್ವಲ್ಪ ದೂರದಲ್ಲಿರುವ ಮಂಟಪದ ಬಳಿ ವಿನಯ್ ನಿಂತಿರುವುದು ಕಂಡುಬಂದಿದೆ. ಇದು ಪೊಲೀಸರಿಗೆ ಅನುಮಾನ ಬಂದಿದೆ. ಹೀಗಾಗಿ ವಿನಯ್‍ನನ್ನು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.