ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana : ತಹವ್ವುರ್ ರಾಣಾ ಗಡಿಪಾರಿನ ಹಿಂದಿರೋ ಮಾಸ್ಟರ್‌ ಮೈಂಡ್‌ ಯಾರು ಗೊತ್ತಾ? ಅವ್ರ ಹೆಸ್ರು ಕೇಳಿದ್ರೆ ಪಾಕ್‌ ಫುಲ್‌ ಗಡ ಗಡ!

ಮುಂಬೈನ ತಾಜ್‌ ಹೊಟೇಲ್‌ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ತಹವ್ವುರ್ ರಾಣಾನನ್ನು ಬುಧವಾರ (ಏಪ್ರಿಲ್ 9) ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ. ತಹವ್ವೂರ್ ರಾಣಾನ ಸಂಪೂರ್ಣ ಹಸ್ತಾಂತರವನ್ನು ಅಜಿತ್ ದೋವಲ್ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಹವ್ವುರ್ ರಾಣಾ ಗಡಿಪಾರಿನ ಹಿಂದಿರೋ ಮಾಸ್ಟರ್‌ ಮೈಂಡ್‌ ಯಾರು ಗೊತ್ತಾ?

Profile Vishakha Bhat Apr 9, 2025 11:19 AM

ನವದೆಹಲಿ: ಮುಂಬೈನ ತಾಜ್‌ ಹೊಟೇಲ್‌ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ತಹವ್ವುರ್ ರಾಣಾನನ್ನು (Tahawwur Rana) ಬುಧವಾರ (ಏಪ್ರಿಲ್ 9) ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಏಪ್ರಿಲ್ 7 ರಂದು ಅಮೆರಿಕದ ಸುಪ್ರೀಂ ಕೋರ್ಟ್ ರಾಣಾ ಮನವಿ ಮಾಡಿದ್ದ ಗಡಿಪಾರು ತಡೆ ಕೋರಿದ ಅರ್ಜಿಯನ್ನು ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಜನವರಿ 21 ರಂದು, ಅಮೆರಿಕದ ಸುಪ್ರೀಂ ಕೋರ್ಟ್ ರಾಣಾ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು. ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಗಡಿಪಾರು ಮಾಡಲು ತಮ್ಮ ಆಡಳಿತ ಅನುಮೋದನೆ ನೀಡಿದೆ ಎಂದು ಘೋಷಿಸಿದ್ದರು. ಇದೀಗ ರಾಣಾನ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.

ತಹವ್ವೂರ್ ರಾಣಾನ ಸಂಪೂರ್ಣ ಹಸ್ತಾಂತರವನ್ನು ಅಜಿತ್ ದೋವಲ್ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹೇಗೆ ಕರೆತರಲಾಗುತ್ತದೆ, ಔಪಚಾರಿಕ ವಿಧಿವಿಧಾನಗಳು ಯಾವುವು ಮತ್ತು ಭಾರತದ ಯಾವ ಜೈಲಿನಲ್ಲಿ ಇರಿಸಲಾಗುತ್ತದೆ, ಭಾರತಕ್ಕೆ ಕರೆತಂದ ನಂತರ ಅವನಿಗೆ ಏನಾಗುತ್ತದೆ, ಈ ಎಲ್ಲ ವಿಷಯಗಳ ಮೇಲೆ ಅಜಿತ್ ದೋವಲ್ ನಿಗಾ ಇಡುತ್ತಿದ್ದಾರೆ. ಅವರೇ ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಕುಳಿತು ತಹವ್ವೂರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುವುದರ ಬಗ್ಗೆ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾ ರ, ತಹವ್ವೂರ್ ರಾಣಾ ಭಾರತಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾದ ನಂತರ, NIA ಆತನ ವಿಚಾರಣೆಯನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಬಹುದು.

ವಿಶೇಷ ಜೈಲು ರೆಡಿ

ರಾಣಾನನ್ನು ಭಾರತಕ್ಕೆ ಕರೆತರುವ ಮೊದಲು ದೆಹಲಿ ಹಾಗೂ ಮುಂಬೈನ ಜೈಲಿನಲ್ಲಿ ವಿಷೇಶ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಹಲಿ ಕಾರಾಗೃಹ ಇಲಾಖೆಯು ತಿಹಾರ್ ಜೈಲಿನಲ್ಲಿ ಆತನನ್ನು ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆತ ಇರುವ ಸೆಲ್‌ಗೆ ಹೆಚ್ಚಿನ ಭದ್ರತೆ ಒದಗಿ, ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ. ಸದಾ ಆತನ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಸೆಲ್‌ನಲ್ಲಿಯೇ ಆತನಿಗೆ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.