ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

3 ದಿನಗಳಲ್ಲಿ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ಸೇಫ್ ಹಾರ್ಬರ್ ಕಳೆದುಕೊಳ್ಳಿ; ಮೆಟಾಗೆ ಕೇಂದ್ರದಿಂದ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿಯವರ ಜುಲೈ 23 ರ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದರ ಹಿಂದೆ ಇರುವವರನ್ನು ಮೂರು ದಿನಗಳಲ್ಲಿ ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯು ಮೆಟಾಗೆ ಕಠಿಣ ಎಚ್ಚರಿಕೆ ನೀಡಿದೆ.

ಸಂಗ್ರಹ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಜುಲೈ 23 ರ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದರ ಹಿಂದೆ ಇರುವವರನ್ನು ಮೂರು ದಿನಗಳಲ್ಲಿ ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯು ಮೆಟಾಗೆ (Meta) ಕಠಿಣ ಎಚ್ಚರಿಕೆ ನೀಡಿದೆ. ಗೂಗಲ್, ಯೂಟ್ಯೂಬ್, ಎಕ್ಸ್, ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಸೇರಿದಂತೆ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಾಮಗ್ರಿ (CSAM) ಮತ್ತು ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ವಿಷಯವನ್ನು ನಿಯಂತ್ರಿಸುವ ಭಾರತೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಸಮಿತಿ ಎಚ್ಚರಿಸಿದೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂಸದೀಯ ಸಮಿತಿಯು, ಪ್ರಧಾನ ಮಂತ್ರಿಯವರ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕುವುದನ್ನು "ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ಕರೆದಿದೆ, ಈ ಪೋಸ್ಟ್ ಕೇವಲ ಪ್ರಧಾನ ಮಂತ್ರಿಯವರನ್ನಲ್ಲ, ಬದಲಾಗಿ 1.4 ಬಿಲಿಯನ್ ಭಾರತೀಯರ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದೆ. "ಈ ವಿಷಯದಲ್ಲಿ ಫೇಸ್‌ಬುಕ್ ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಸೇಫ್ ಹಾರ್ಬರ್ ಷರತ್ತು ತೆಗೆದುಹಾಕಲಾಗುತ್ತದೆ. ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕಾಗುತ್ತದೆ. ಇಲ್ಲದಿದ್ದರೆ, ಪ್ರಕರಣ ದಾಖಲಿಸಬಹುದು" ಎಂದು ತಿಳಿಸಿದೆ.

ಏನಿದು ಘಟನೆ?

ಜುಲೈ 23 ರಂದು ಪ್ರಧಾನಿ ಮೋದಿ ಅವರು ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತು ನಂತರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ Gen Z ಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅವರು ವಿಡಿಯೋದಲ್ಲಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆ ವಿಡಿಯೋ ಮೆಟಾ ಒಡೆತನದ ಫೇಸ್‌ಬುಕ್‌ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದು ಹಾಕಿತ್ತು. ಪ್ರಧಾನ ಮಂತ್ರಿಯವರ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಮೆಟಾ ತನ್ನ AI-ಚಾಲಿತ ವಿಷಯ ಮಾಡರೇಶನ್ ವ್ಯವಸ್ಥೆಯಲ್ಲಿನ ಅನಿರೀಕ್ಷಿತ ದೋಷ ಕಾರಣ ಎಂದು ಹೇಳಿದೆ.

ಹೆತ್ತವರಿಗಾಗಿ 18 ವರ್ಷಗಳ ಅಮೆರಿಕ ಜೀವನ ತೊರೆದು ಬೆಂಗಳೂರಿಗೆ ಮರಳಿದ ಮೆಟಾ ಉದ್ಯೋಗಿ; ಭಾವನಾತ್ಮಕ ಪೋಸ್ಟ್ ವೈರಲ್

ತಾಂತ್ರಿಕ ದೋಷಕ್ಕೆ ಕಂಪನಿಯು ಕ್ಷಮೆಯಾಚಿಸಿದ್ದರೂ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿವರಣೆಯನ್ನು ಸಮಂಜಸವಲ್ಲ ಎಂದು ತಿರಸ್ಕರಿಸಿತ್ತು. ನಿಜವಾಗಿಯೂ ತಾಂತ್ರಿಕ ದೋಷದಿಂದ ಉಂಟಾಗಿದ್ದರೆ, ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ಮೆಟಾ ತನ್ನ ವ್ಯವಸ್ಥೆಗಳನ್ನು ಬಲಪಡಿಸಬೇಕು ಎಂದು ಹೇಳಿದೆ.

Vishakha Bhat Heggar

View all posts by this author