ಚೆನ್ನೈ, ಮೇ 5: 2026ರ ತಮಿಳುನಾಡು (Tamil Nadu Election Results 2026) ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ (Puducherry election results) ಭಾರತದ 'ಲಾಟರಿ ಕಿಂಗ್' ಎಂದೇ ಹೆಸರು ಪಡೆದಿರುವ ಸ್ಯಾಂಟಿಯಾಗೊ ಮಾರ್ಟಿನ್ ಅವರ ಕುಟುಂಬದ ಮೂವರು ಸದಸ್ಯರು ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ. ಇದು ಭಾರತೀಯ ರಾಜಕೀಯದಲ್ಲಿ ಒಂದು ಅಪರೂಪದ ವಿದ್ಯಮಾನವಾಗಿದೆ. ಒಂದೇ ಕುಟುಂಬದ ಸದಸ್ಯರು ಮೂರು ಬೇರೆ-ಬೇರೆ ರಾಜಕೀಯ ಸಿದ್ಧಾಂತವುಳ್ಳ ಪಕ್ಷಗಳಿಂದ ಸ್ಪರ್ಧಿಸಿರುವುದು ವಿಶೇಷ.
ತಮಿಳುನಾಡಿನ ಲಾಲ್ಗುಡಿಯಿಂದ ಎಐಎಡಿಎಂಕೆ ಅಭ್ಯರ್ಥಿ ಲೀಮಾರೋಸ್ ಮಾರ್ಟಿನ್. ಆಧವ್ ಅರ್ಜುನ, ತಮಿಳುನಾಡಿನ ವಿಕ್ಕಿವಕ್ಕಂನಿಂದ ಟಿವಿಕೆ ಅಭ್ಯರ್ಥಿಯಾದರೆ, ಜೋಸ್ ಚಾರ್ಲ್ಸ್ ಮಾರ್ಟಿನ್, ಪುದುಚೇರಿಯ ಕಾಮರಾಜ್ ನಹರ್‌ನಿಂದ ಎಲ್‌ಜೆಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಮಾರ್ಟಿನ್ ಅವರ ಪತ್ನಿ, ಮಗ ಮತ್ತು ಅಳಿಯ ಮೂರು ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಗಳಿಸಿದರು.
ಲಾಟರಿ ಬ್ಯಾರನ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾರೋಸ್ ಮಾರ್ಟಿನ್ ಅವರು ಲಾಲ್ಗುಡಿ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕು ಪಾ ಕೃಷ್ಣನ್ ಅವರನ್ನು 2,500 ಕ್ಕೂ ಹೆಚ್ಚು ಮತಗಳಿಂದ (2,739) ಸೋಲಿಸಿದರು.
ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?
ಲಾಲ್ಗುಡಿ, ಸಾಂಪ್ರದಾಯಿಕವಾಗಿ ದ್ರಾವಿಡ ಮುನ್ನೇತ್ರ ಕಳಗಂ (DMK) ಭದ್ರಕೋಟೆಯಾಗಿದ್ದು, 20 ವರ್ಷಗಳ ನಂತರ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಗೆ ಮರಳಿತು. ಡಿಎಂಕೆ ಅಭ್ಯರ್ಥಿ ಟಿ ಪಾರಿವಲ್ಲಲ್ 5,000 ಮತಗಳಿಂದ (5,230) ಸೋತರು. 2021, 2016, 2011 ಮತ್ತು 2006 ರ ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಡಿಎಂಕೆ ಈ ಸ್ಥಾನವನ್ನು ಗೆದ್ದಿತ್ತು.
14 ವರ್ಷಗಳ ಕಾಲ ಐಜೆಕೆ (ಇಂಡಿಯಾ ಜನನಾಯಕ ಕಚ್ಚಿ)ಯಿಂದ ಇತ್ತೀಚೆಗೆ ಪಕ್ಷಾಂತರಗೊಂಡ ಲೀಮಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಪಕ್ಷದ ಮಹಿಳಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.
ಇನ್ನು, ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನಾ ಹಾಗೂ ನಟ ವಿಜಯ್ ಅವರ ತಮಿಳಗ ವೆತ್ರಿ ಕಳಗಂ (TVK) ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು, ವಿಕ್ಕಿವಕ್ಕಂ ಕ್ಷೇತ್ರದಲ್ಲಿ 17,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅರ್ಜುನ ಡಿಎಂಕೆಯ ಕಾರ್ತಿಕ್ ಮೋಹನ್ ಅವರನ್ನು 17,302 ಮತಗಳಿಂದ ಮತ್ತು ಎಐಎಡಿಎಂಕೆಯ ವಿಜಯಕುಮಾರ್ ಎಸ್‌ಆರ್ ಅವರನ್ನು 47,107 ಮತಗಳಿಂದ ಸೋಲಿಸಿದರು. ಕಳೆದ ಎರಡು ಚುನಾವಣೆಗಳಲ್ಲಿ ಡಿಎಂಕೆ ಈ ಸ್ಥಾನವನ್ನು ಗೆದ್ದಿತ್ತು.
ಪುದುಚೇರಿಯಲ್ಲೂ ಮಿಂಚಿದ ಮಾರ್ಟಿನ್ಸ್
ಲಾಟರಿ ಉದ್ಯಮಿಯ ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಪುದುಚೇರಿ ಚುನಾವಣೆಯಲ್ಲಿ ತಮ್ಮದೇ ಪಕ್ಷವಾದ ಲಚ್ಚಿಯಾ ಜನನಾಯಕ ಕಚ್ಚಿ (ಎಲ್‌ಜೆಕೆ) ಯೊಂದಿಗೆ ಸ್ಪರ್ಧಿಸಿದರು. ಅವರು ಕಾಮರಾಜ್ ನಗರ ಸ್ಥಾನವನ್ನು 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಕಾಂಗ್ರೆಸ್‌ನ ಪಿಕೆ ದೇವದಾಸ್ ಮತ್ತು ಟಿವಿಕೆಯ ಸುಮನ್ ಅವರನ್ನು ಹಿಂದಿಕ್ಕಿದರು.
ಈ ಹಿಂದೆ ಬಿಜೆಪಿಯಲ್ಲಿದ್ದ ಜೂನಿಯರ್ ಮಾರ್ಟಿನ್, ಸೀಟು ಹಂಚಿಕೆಯಲ್ಲಿ ವಿಳಂಬವಾದ ನಂತರ ಪಕ್ಷವನ್ನು ತೊರೆದಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಮೆಚ್ಚುತ್ತಿದ್ದೇನೆ ಎಂದು ಹೇಳಿದರು.
ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ರಾಜಕೀಯದ ಮೇಲೆ ಪ್ರಭಾವ ಬೀರಲು ತಮ್ಮ ಕುಟುಂಬ ಪ್ರಯತ್ನಿಸುತ್ತಿದೆ ಎಂಬ ಮಾತುಗಳನ್ನು ಎಲ್‌ಜೆಕೆ ಮುಖ್ಯಸ್ಥರು ಅಲ್ಲಗಳೆದರು.