ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೆಚ್ಚಿನ ಸುಂಕ, ಬೆದರಿಕೆ, ಒಪ್ಪಂದ; ಅಮೆರಿಕ-ಭಾರತ ವ್ಯಾಪಾರ ಡೀಲ್‌ ಸಾಗಿ ಬಂದ ಉದ್ವಿಗ್ನತೆಯ ಹಾದಿ

ಭಾರತ–ಅಮೆರಿಕ ನಡುವಿನ ದೀರ್ಘಕಾಲದ ಸುಂಕ ವಿವಾದಕ್ಕೆ ತೆರೆ ಬಿದ್ದಿದ್ದು, ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಎರಡೂ ದೇಶಗಳು ಒಪ್ಪಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಭಾರತೀಯ ರಫ್ತುದಾರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಧಾನಿ ಮೋದಿ ಜತೆಗಿನ ಮಾತುಕತೆಯ ಬಳಿಕ ಸ್ನೇಹ ಮತ್ತು ಪರಸ್ಪರ ಗೌರವದ ಸಂಕೇತವಾಗಿ ಈ ಒಪ್ಪಂದ ಜಾರಿಗೆ ಬಂದಿದೆ.

ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್ (ಸಂಗ್ರಹ ಚಿತ್ರ)

ನವದೆಹಲಿ, ಫೆ. 3: ಭಾರತ (India) ಮತ್ತು ಅಮೆರಿಕ (America) ನಡುವಿನ ಒಂದು ವರ್ಷಕ್ಕೂ ಹೆಚ್ಚು ಕಾಲದ ವ್ಯಾಪಾರ ಸುಂಕ (Tariff) ವಿವಾದಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಎರಡೂ ದೇಶಗಳು ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ರಫ್ತುಗಳ ಮೇಲೆ ವಿಧಿಸಲಾಗಿದ್ದ ಸುಂಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ. 50ರಿಂದ ಶೇ.18ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರದಿಂದ ಭಾರತೀಯ ರಫ್ತುದಾರರಿಗೆ ನಿಟ್ಟುಸಿರು ಬಿಡುವಂತಾಗಿದೆ.

ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆಯ ನಂತರ ಪರಸ್ಪರ ಸುಂಕಗಳನ್ನು ಕಡಿಮೆ ಮಾಡಿರುವುದಾಗಿ ಘೋಷಿಸಿದ ಟ್ರಂಪ್, "ಪ್ರಧಾನಿ ಮೋದಿ ಅವರೊಂದಿಗಿನ ಸ್ನೇಹ ಮತ್ತು ಗೌರವದಿಂದ, ತಕ್ಷಣವೇ ಜಾರಿಗೆ ಬರುವಂತೆ, ನಾವು ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೇವೆ" ಎಂದಿದ್ದಾರೆ

2025ರ ಆರಂಭದಲ್ಲಿ ಎಚ್ಚರಿಕೆಯೊಂದಿಗೆ ಆರಂಭಗೊಂಡ ವ್ಯಾಪಾರ ಮಾತುಕತೆಗಳು ಬಳಿಕ ಹಳಿ ತಪ್ಪಿದವು. ಏಪ್ರಿಲ್‌ನಲ್ಲಿ ಅಮೆರಿಕ ಹಲವು ಭಾರತೀಯ ಆಮದುಗಳ ಮೇಲೆ ಶೇ. 25 ಸುಂಕ ವಿಧಿಸಿತು. ನಂತರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಕ್ತಾರ ರಾಜೇಶ್ ಅಗರ್ವಾಲ್ ಹಾಗೂ ಅಮೆರಿಕ ಅಧಿಕಾರಿಗಳ ನಡುವೆ ವಾಷಿಂಗ್ಟನ್ ಮತ್ತು ನವದೆಹಲಿಯಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದವು. ಜೂನ್ ಮತ್ತು ಜುಲೈಯಲ್ಲಿ ಕೃಷಿ ಉತ್ಪನ್ನಗಳ ಆಮದು ಸುಂಕಗಳು, ಹಾಗೂ ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸುವ ವಿಚಾರವು ಅಮೆರಿಕ ಕಂಗೆಣ್ಣಿಗೆ ಗುರಿಯಾಯಿತು.

ನರೇಂದ್ರ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌; ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಕೆ

2025ರ ಜುಲೈಯಲ್ಲಿ ಎಲ್ಲ ಮಾತುಕತೆಗಳು ಸ್ಥಗಿತಗೊಂಡು, ಅಮೆರಿಕ ಮತ್ತೆ ಶೇಕಡಾ 25ರಷ್ಟು ಸುಂಕವನ್ನು ವಿಧಿಸಿತು. ಇದು ಆಗಸ್ಟ್‌ನಲ್ಲಿ ಶೇ. 50ಕ್ಕೆ ಏರಿಕೆಯಾಗಿದ್ದು, ಇದು ಯಾವುದೇ ವ್ಯಾಪಾರ ಪಾಲುದಾರರ ಮೇಲೆ ವಿಧಿಸಿದ ಗರಿಷ್ಠ ಸುಂಕವಾಗಿತ್ತು. ಈ ಅವಧಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳಿಗೂ ಅಮೆರಿಕ ಎಚ್ಚರಿಕೆ ನೀಡಿತ್ತು.

ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ನಿರಂತರ ಸಂಪರ್ಕ ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆದರೂ, ಸ್ಪಷ್ಟ ಫಲಿತಾಂಶಗಳು ಕಾಣಿಸಲಿಲ್ಲ. ಈ ವರ್ಷಾರಂಭದಲ್ಲಿಎರಡೂ ದೇಶಗಳು ಒಪ್ಪಂದದತ್ತ ಹತ್ತಿರವಾಗುತ್ತಿರುವ ಸೂಚನೆ ನೀಡಿದವು. ಅಂತಿಮವಾಗಿ ಫೆಬ್ರವರಿ 2026ರಲ್ಲಿ ವ್ಯಾಪಾರ ಒಪ್ಪಂದ ಘೋಷಣೆಯಾಗಿ, ಸುಂಕ ಕಡಿತಗೊಳಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ, “ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಶೇಕಡಾ 18ರಷ್ಟು ಸುಂಕ ವಿಧಿಸಲಾಗುವುದು. ಇದರಿಂದ ಭಾರತೀಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆದುಕೊಳ್ಳಲಿದೆ” ಎಂದು ಸಂತಸ ವ್ಯಕ್ತಪಡಿಸಿದರು. ಈ ಒಪ್ಪಂದವು ಭಾರತ–ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಅಧ್ಯಾಯದ ಆರಂಭವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮೋದಿ ಪೋಸ್ಟ್‌:

2025ರ ಆರಂಭದಲ್ಲಿ ಎಚ್ಚರಿಕೆಯೊಂದಿಗೆ ಆರಂಭಗೊಂಡ ವ್ಯಾಪಾರ ಮಾತುಕತೆಗಳು ಬಳಿಕ ಹಳಿ ತಪ್ಪಿದವು. ಏಪ್ರಿಲ್‌ನಲ್ಲಿ ಅಮೆರಿಕ ಹಲವು ಭಾರತೀಯ ಆಮದುಗಳ ಮೇಲೆ ಶೇ. 25 ಸುಂಕ ವಿಧಿಸಿತು. ನಂತರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಕ್ತಾರ ರಾಜೇಶ್ ಅಗರ್ವಾಲ್ ಹಾಗೂ ಅಮೆರಿಕ ಅಧಿಕಾರಿಗಳ ನಡುವೆ ವಾಷಿಂಗ್ಟನ್ ಮತ್ತು ನವದೆಹಲಿಯಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದವು. ಜೂನ್ ಮತ್ತು ಜುಲೈಯಲ್ಲಿ ಕೃಷಿ ಉತ್ಪನ್ನಗಳ ಆಮದು ಸುಂಕಗಳು, ಹಾಗೂ ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸುವ ವಿಚಾರವು ಅಮೆರಿಕ ಕಂಗೆಣ್ಣಿಗೆ ಗುರಿಯಾಯಿತು.

ನರೇಂದ್ರ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌; ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಕೆ

2025ರ ಜುಲೈಯಲ್ಲಿ ಎಲ್ಲ ಮಾತುಕತೆಗಳು ಸ್ಥಗಿತಗೊಂಡು, ಅಮೆರಿಕ ಮತ್ತೆ ಶೇಕಡಾ 25ರಷ್ಟು ಸುಂಕವನ್ನು ವಿಧಿಸಿತು. ಇದು ಆಗಸ್ಟ್‌ನಲ್ಲಿ ಶೇ. 50ಕ್ಕೆ ಏರಿಕೆಯಾಗಿದ್ದು, ಇದು ಯಾವುದೇ ವ್ಯಾಪಾರ ಪಾಲುದಾರರ ಮೇಲೆ ವಿಧಿಸಿದ ಗರಿಷ್ಠ ಸುಂಕವಾಗಿತ್ತು. ಈ ಅವಧಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳಿಗೂ ಅಮೆರಿಕ ಎಚ್ಚರಿಕೆ ನೀಡಿತ್ತು.

ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ನಿರಂತರ ಸಂಪರ್ಕ ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆದರೂ, ಸ್ಪಷ್ಟ ಫಲಿತಾಂಶಗಳು ಕಾಣಿಸಲಿಲ್ಲ. ಈ ವರ್ಷಾರಂಭದಲ್ಲಿ ಎರಡೂ ದೇಶಗಳು ಒಪ್ಪಂದದತ್ತ ಹತ್ತಿರವಾಗುತ್ತಿರುವ ಸೂಚನೆ ನೀಡಿದವು. ಅಂತಿಮವಾಗಿ ವ್ಯಾಪಾರ ಒಪ್ಪಂದ ಘೋಷಣೆಯಾಗಿ, ಸುಂಕ ಕಡಿತಗೊಳಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ, “ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಶೇಕಡಾ 18ರಷ್ಟು ಸುಂಕ ವಿಧಿಸಲಾಗುವುದು. ಇದರಿಂದ ಭಾರತೀಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆದುಕೊಳ್ಳಲಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವು ಭಾರತ–ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಅಧ್ಯಾಯದ ಆರಂಭವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.