ವಾರಣಾಸಿ: ಭಾರತದ ಪ್ರಖ್ಯಾತ ತೀರ್ಥಕ್ರೇತ್ರಗಳಲ್ಲಿ ಒಂದಾದ ಕಾಶಿಯ ಸಾಂಪ್ರದಾಯಿಕ ಆಹಾರದ ರುಚಿಯನ್ನು ಜನರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ 'ಸ್ವಿಗ್ಗಿ' ಮಹತ್ವದ ಹೆಜ್ಜೆ ಇಟ್ಟಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Uttar Pradesh Chief Minister Yogi Adityanath) ಅವರು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ನೋಂದಣಿ ಮತ್ತು ಮುದ್ರಾಂಕ ಖಾತೆ ರಾಜ್ಯ ಸಚಿವ ಹಾಗೂ ವಾರಣಾಸಿ ಉತ್ತರ ಕ್ಷೇತ್ರದ ಶಾಸಕ ರವೀಂದ್ರ ಜೈಸ್ವಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ವಾರಣಾಸಿ ನಗರ ನಿಗಮದ ಸಹಭಾಗಿತ್ವದಲ್ಲಿ ʼಸ್ವಿಗ್ಗಿ ಜೊತೆಗೆ ವಾರಣಾಸಿಯ ರುಚಿʼ (ವಾರಣಾಸಿ ಕಾ ಸ್ವಾದ್, ಸ್ವಿಗ್ಗಿ ಕೆ ಸಾಥ್) ಎಂಬ ಹೊಸ ಯೋಜನೆಯನ್ನು ಸ್ವಿಗ್ಗಿ ಪರಿಚಯಿಸಿದೆ.
ಇದನ್ನೂ ಓದಿ: Yogi Adityanath: ಚಿತ್ರರಂಗಕ್ಕೆ ಎಚ್ಚರಿಕೆ ಕೊಟ್ಟ ಯುಪಿ ಸಿಎಂ ಯೋಗಿ ಆದಿತ್ಯನಾಥ್! ಏನದು?
ಘಾಟ್‌ಗಳಲ್ಲೇ ಸಿಗಲಿದೆ ಪ್ರಸಿದ್ಧ ತಿನಿಸುಗಳು
ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಸುಂದರವಾಗಿ ವಿನ್ಯಾಸಗೊಳಿಸಲಾದ ಸಾಂಪ್ರದಾ ಯಿಕ ತಳ್ಳುಗಾಡಿಗಳನ್ನು ವಾರಣಾಸಿಯ ಪ್ರಮುಖ ಮತ್ತು ಜನನಿಬಿಡ ಘಾಟ್‌ಗಳಾದ ನಮೋ ಘಾಟ್, ಅಸ್ಸಿ ಘಾಟ್ ಮತ್ತು ದಶಾಶ್ವಮೇಧ ಘಾಟ್‌ಗಳಲ್ಲಿ ನಿಲ್ಲಿಸಲಾಗುತ್ತದೆ. ಪ್ರವಾಸಿಗರು ಘಾಟ್‌ನ ಸೌಂದರ್ಯ ಸವಿಯುತ್ತಲೇ ಇವುಗಳಿಂದ ನಗರದ ಪ್ರಸಿದ್ಧ ಮಳಿಗೆಗಳ ಆಹಾರವನ್ನು ಪಡೆದು ಆನಂದಿಸಬಹುದಾಗಿದೆ.
ವಾರಣಾಸಿಯ 12 ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಆಹಾರ ಮಳಿಗೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಈ ಮಳಿಗೆಗಳ ಪ್ರತಿನಿಧಿಗಳನ್ನು ಸನ್ಮಾನಿಸಿದರು.
ಪಾಪ್ಯುಲರ್ ಬಾಟಿ ಚೋಖಾ, ಚಾಚಿ ಕೀ ಪ್ರಸಿದ್ಧ್ ಕಚೋರಿ, ಲಕ್ಷ್ಮಿ ಚಾಯ್, ಪೈಲ್ವಾನ್ ಲಸ್ಸಿ, ಗಾಮ ಪಾನ್ ಭಂಡಾರ್, ಕಾಶಿ ಚಾಟ್ ಭಂಡಾರ್, ನೀಲು ಕಚೋರಿ, ಟೇಸ್ಟ್ ಕಿಂಗ್, ಪಾಠಕ್ ಜಿ ಥಂಡಾಯ್ ವಾಲಾ, ನೇತಾಜಿ ಪಾನ್ ಭಂಡಾರ್, ಗೌರಿ ಶಂಕರ್ ಕಚೋರಿ ವಾಲಾ, ಮತ್ತು ಬನಾರಸಿ ಪಾನ್ ಮಂದಿರ ಈ ಮಳಿಗೆಗಳ ಪಟ್ಟಿಯಲ್ಲಿ ಸೇರಿವೆ.
ಈ ಎಲ್ಲ ಮಳಿಗೆಗಳಿಗೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಗುಣಮಟ್ಟ ಮತ್ತು ಪಾರಂಪರಿ ಕತೆಯ ಅಧಿಕೃತ ಪ್ರಮಾಣಪತ್ರವನ್ನೂ ಇದೇ ಸಂದರ್ಭದಲ್ಲಿ ನೀಡಲಾಯಿತು.
“ವಾರಣಾಸಿಯ ಆಹಾರ ಪದ್ಧತಿ ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ತಲ ತಲಾಂತರದಿಂದ ಬಂದಿರುವ ಈ ಆಹಾರ ಪರಂಪರೆಯನ್ನು ಪ್ರವಾಸಿಗರಿಗೆ ತಲುಪಿಸುವ ಸ್ವಿಗ್ಗಿಯ ಈ ನಡೆಯು ಸ್ಥಳೀಯ ಆಹಾರೋದ್ಯಮಿಗಳಿಗೆ ಒಂದು ದೊಡ್ಡ ವೇದಿಕೆ ಒದಗಿಸಲಿದೆ,” ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ಭುವನೇಶ್ ಕುಮಾರ್ ಅಭಿಪ್ರಾಯ ಟ್ಟರು.
"ಕಾಶಿಯನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡುವುದು ಪ್ರಧಾನಿಯವರ ಕನಸು. 'ಒಂದು ಜಿಲ್ಲೆ, ಒಂದು ಖಾದ್ಯ' ಯೋಜನೆಯಡಿ ಕಾಶಿಯ ಪಾನ್, ಮಲೈಯೋ, ಲಸ್ಸಿ, ಕಚೋರಿ ಯಂತಹ ಆಹಾರಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸ್ವಿಗ್ಗಿಯ ಈ ಪ್ರಯತ್ನ ನೆರವಾಗ ಲಿದೆ,” ಎಂದು ವಾರಣಾಸಿ ಜಿಲ್ಲಾಧಿಕಾರಿ ಸತ್ಯೇಂದ್ರ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
“ಆಹಾರವು ಒಂದು ನಗರದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಪವಿತ್ರ ನಗರ ವಾರಣಾಸಿಗೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರಿಗೆ ಇಲ್ಲಿನ ಪ್ರಸಿದ್ಧ ತಿನಿಸುಗಳನ್ನು ಸುಲಭವಾಗಿ ತಲುಪಿಸಲು, ಪ್ರವಾಸೋದ್ಯಮ ಸಚಿವಾಲಯ ಹಾಗೂ ವಾರಣಾಸಿ ನಗರ ನಿಗಮದೊಂದಿಗೆ ಕೈಜೋಡಿಸಿದ್ದೇವೆ,” ಎಂದು ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್ ಸಿಇಒ ರೋಹಿತ್ ಕಪೂರ್ ತಿಳಿಸಿದರು.
ಸ್ವಿಗ್ಗಿಯ ಈ ಹೊಸ ಯೋಜನೆಯಿಂದಾಗಿ ವಾರಣಾಸಿಯ ಬೀದಿಬದಿ ಆಹಾರವನ್ನು ಈಗ ಪ್ರವಾಸಿಗು ಮತ್ತು ಸ್ಥಳೀಯರು ಸುಲಭವಾಗಿ ಸವಿಯಬಹುದಾಗಿದೆ.