ಪಾಟ್ನಾ, ಮಾ. 28: ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಮದ್ಯ ಸೇವಿಸಿದ ಆರೋಪದ ಮೇಲೆ ಬಿಹಾರದ (Bihar) ಐವರು ಸರ್ಕಾರಿ ಶಾಲಾ ಶಿಕ್ಷಕರನ್ನು ಸುಪೌಲ್ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಮುಖ್ಯಮಂತ್ರಿ ಅವರ ‘ಬಿಹಾರ ದರ್ಶನ’ (Bihar Darshan) ಯೋಜನೆಯಡಿ ಶಾಲಾ ವಿದ್ಯಾರ್ಥಿಗಳನ್ನು ಶಿಕ್ಷಕರು ನೇಪಾಳಕ್ಕೆ ಪ್ರವಾಸಕ್ಕೆ (Student trip) ಕರೆದೊಯ್ದಿದ್ದರು. ಈ ವೇಳೆ ಭೀಮನಗರ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಶಿಕ್ಷಕರನ್ನು ಬಂಧಿಸಲಾಯಿತು.
ಈ ಶಿಕ್ಷಕರು ನೇಪಾಳದಿಂದ ಆಗಮಿಸುತ್ತಿದ್ದರು. ಇಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ವಾಹನವನ್ನೂ ನಿಯಮಿತ ತಪಾಸಣೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಯ ಭಾಗವಾಗಿ ಐವರು ಶಿಕ್ಷಕರನ್ನು ಪರೀಕ್ಷಿಸಲಾಯಿತು. ಎಲ್ಲ ಐವರು ಮದ್ಯಸೇವನೆ ಮಾಡಿದ್ದಾರೆ ಎಂದು ಪರೀಕ್ಷೆ ವೇಳೆ ತಿಳಿದುಬಂತು ಎಂದು ಹಿರಿಯ ಪೊಲೀಸ್ ಸಂಜಯ್ ಕುಮಾರ್ ಪ್ರಿಯದರ್ಶಿ ತಿಳಿಸಿದರು.
ಬಿಹಾರದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಂದರೆ ಮದ್ಯ ಸೇವನೆ, ಖರೀದಿ, ಮಾರಾಟ ಮತ್ತು ಸಾಗಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಶಿಕ್ಷಕರನ್ನು ಶಿವಾಂಶ್ ಕುಮಾರ್, ದೀಪ್ನಾರಾಯಣ್ ರಾಮ್, ಇಂಗ್ಲಿಷ್ ಕುಮಾರ್, ಧೀರೇಂದ್ರ ಕುಮಾರ್ ಮತ್ತು ಮಿಥುಕುಮಾರ್ ಎಂದು ಗುರುತಿಸಲಾಗಿದೆ.
ಸ್ಕೂಲ್ ಬ್ಯಾಗ್‌ಗಳಲ್ಲಿ ಪತ್ತೆಯಾಯ್ತು ಆಲ್ಕೋಹಾಲ್, ಕಾಂಡೋಮ್, ಸೆಕ್ಸ್ ಬುಕ್ಸ್!
ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆಗೂ ಈ ವಿಷಯದ ಬಗ್ಗೆ ತಿಳಿಸಲಾಗಿದ್ದು, ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರ ಇಂತಹ ನಡವಳಿಕೆಯು ಅತ್ಯಂತ ನಾಚಿಕೆಗೇಡಿನ ಮತ್ತು ಆತಂಕಕಾರಿ ವಿಷಯ ಎಂದು ಸಾರ್ವಜನಿಕರು ಹೇಳಿದ್ದಾರೆ. ಬಂಧಿತ ಶಿಕ್ಷಕರ ವಿರುದ್ಧ ಅಮಾನತು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸುಪಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾವನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಕುಡಿದು ವಾಹನ ಚಲಾಯಿಸಿದ 1,204 ಚಾಲಕರಿಗೆ ದಂಡ
ಹೋಳಿ ಹಬ್ಬದ ಸಂದರ್ಭದಲ್ಲಿ ದೆಹಲಿ ಸಂಚಾರ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಸಂಪೂರ್ಣ ಜಾಗರೂಕರಾಗಿದ್ದರು. ಮಾರ್ಚ್ 4ರ ಬುಧವಾರ ಹೋಳಿ ಆಚರಣೆಯ ಸಂದರ್ಭದಲ್ಲಿ ವಿಶೇಷ ಡ್ರೈವ್‌ನಲ್ಲಿ ಪೊಲೀಸರು, ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 1,204 ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು. ಅಧಿಕಾರಿಗಳು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪಶ್ಚಿಮ ಪ್ರದೇಶದಿಂದ ಅತಿ ಹೆಚ್ಚು ಉಲ್ಲಂಘನೆಗಳು ವರದಿಯಾಗಿತ್ತು. ಸಂಚಾರ ಪೊಲೀಸರು ದೆಹಲಿಯನ್ನು ವಿವಿಧ ವಲಯಗಳಾಗಿ ವಿಂಗಡಿಸಿ ತೀವ್ರ ತಪಾಸಣೆ ನಡೆಸಿದ್ದರು.