ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Phone Addicts: ಅಗ್ಗದ ಇಂಟರ್‌ನೆಟ್‌ನಿಂದಾಗಿ ಸ್ಮಾರ್ಟ್‌ಫೋನ್‌ ವ್ಯಸನದತ್ತ ಸಾಗುತ್ತಿದೆಯೇ ಭಾರತ? ಕಳವಳಕಾರಿ ವರದಿಯಲ್ಲಿ ಏನಿದೆ?

ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆ EY ನೀಡಿದ ಹೊಸ ವರದಿಯ ಪ್ರಕಾರ, ಭಾರತೀಯರು ತಮ್ಮ ಸ್ಮಾರ್ಟ್‌ಫೋನ್‌ಗಳೊಂದಿಗೆ ಈ ಹಿಂದೆಗಿಂತಲೂ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಭಾರತೀಯ ಬಳಕೆದಾರರು ಒಂದು ದಿನದಲ್ಲಿ ಸರಾಸರಿ ಐದು ಗಂಟೆಗಳನ್ನು ಸೋಶಿಯಲ್‌ ಮೀಡಿಯಾ, ಗೇಮಿಂಗ್ ಮತ್ತು ವೀಡಿಯೊ ಸ್ಟ್ರೀಮಿಂಗ್‌ನಲ್ಲಿ ಕಳೆಯುತ್ತಿದ್ದಾರಂತೆ.

ದೇಶದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗೋಕ್ಕೆ ಕಾರಣ ಇದು

ಸ್ಮಾರ್ಟ್‌ಫೋನ್

Profile Sushmitha Jain Mar 29, 2025 2:01 PM

ಹೊಸದಿಲ್ಲಿ: ಭಾರತದಲ್ಲಿ 120 ಕೋಟಿ (1.2 ಬಿಲಿಯನ್‌)ಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತು 92 ಕೋಟಿ (950 ಮಿಲಿಯನ್) ಇಂಟರ್‌ನೆಟ್‌ (Internet) ಬಳಕೆದಾರರಿದ್ದಾರೆ. ಈ ಇಂಟರ್‌ನೆಟ್‌ ಬಳಕೆದಾರರು ಒಂದು ಜಿಬಿ ಡೇಟಾವನ್ನು ಕೇವಲ 30 ಪೈಸೆಗಳಲ್ಲಿ ಪಡೆಯುತ್ತಿದ್ದಾರೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್‌ನೆಟ್‌ನಿಂದಾಗಿ ದೇಶ ಡಿಜಿಟಲೀಕರಣದಲ್ಲಿ ವೇಗವಾದ ಬೆಳವಣಿಗೆಯನ್ನು ಸಾಧಿಸುತ್ತಿರುವ ಬೆನ್ನಲ್ಲೇ ಇದರ ನಕರಾತ್ಮಕ ಪರಿಣಾಮಗಳು ಆತಂಕವನ್ನುಂಟು ಮಾಡಿವೆ (Phone addicts). ದಿನವೊಂದಕ್ಕೆ ಗಂಟೆಗಟ್ಟಲೆ ಸ್ಮಾರ್ಟ್‌ಫೋನ್‌ ಬಳಸುವ ಭಾರತೀಯರು ನಿಧಾನವಾಗಿ ವ್ಯಸನಿಗಳಾಗುವತ್ತ ಸಾಗುತ್ತಿದ್ದಾರೆ ಎಂಬ ಅಂಶವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆ EY ನೀಡಿದ ಹೊಸ ವರದಿಯ ಪ್ರಕಾರ, ಭಾರತೀಯರು ತಮ್ಮ ಸ್ಮಾರ್ಟ್‌ಫೋನ್‌ಗಳೊಂದಿಗೆ ಈ ಹಿಂದೆಗಿಂತಲೂ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಭಾರತೀಯ ಬಳಕೆದಾರರು ಒಂದು ದಿನದಲ್ಲಿ ಸರಾಸರಿ ಐದು ಗಂಟೆಗಳನ್ನು ಸೋಶಿಯಲ್‌ ಮೀಡಿಯಾ, ಗೇಮಿಂಗ್ ಮತ್ತು ವೀಡಿಯೊ ಸ್ಟ್ರೀಮಿಂಗ್‌ನಲ್ಲಿ ಕಳೆಯುತ್ತಿದ್ದಾರೆ ಎಂದು ವರದಿ ಹೇಳಿದ್ದು, ಆಘಾತವನ್ನುಂಟು ಮಾಡಿದೆ. ಕೈಗೆಟುಕುವ ದರದಲ್ಲಿ ಸಿಗುವ ಇಂಟರ್‌ನೆಟ್‌ನಿಂದಾಗಿ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಈ ವರದಿಯಿಂದ ಹುಟ್ಟಿಕೊಂಡಿದೆ.

ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳ ಪ್ರಭಾವ ಭಾರತೀಯರ ಮೇಲೆ ಎಷ್ಟು ಬೀರಿದೆ ಎಂದರೆ, ಇದು ಮೊತ್ತಮೊದಲ ಬಾರಿಗೆ ಟಿವಿಯನ್ನು ಮೀರಿಸಿದೆ. ಭಾರತದಲ್ಲಿ ಮಾಧ್ಯಮ ಮತ್ತು ಮನೋರಂಜನೆ ಉದ್ಯಮ 2024ರಲ್ಲಿ 2.5 ಟ್ರಿಲಿಯನ್ ರೂ. ($ 29.1 ಬಿಲಿಯನ್) ಮೌಲ್ಯವನ್ನು ಹೊಂದಿತ್ತು. ಈ ಮೌಲ್ಯ ನಾವೆಷ್ಟು ಮಾಧ್ಯಮಗಳನ್ನು ಅವಲಂಬಿಸಿವೆ ಎಂಬುದನ್ನು ತೋರಿಸುತ್ತದೆ. ಇದರೊಂದಿಗೆ, ಸಾಮಾಜಿಕ ಮಾಧ್ಯಮ, ವೀಡಿಯೊ ಸ್ಟ್ರೀಮಿಂಗ್ ಮತ್ತು ಗೇಮಿಂಗ್‌ನಲ್ಲಿಯೂ ಭಾರತೀಯರ ಸ್ಕ್ರೀನ್‌ ಟೈಮ್‌ ಹೆಚ್ಚಳ ಕಂಡಿದೆ.

ಡಿಜಿಟಲ್ ಮಾಧ್ಯಮ ಬಳಕೆಯಲ್ಲಿ ಏರಿಕೆಯಾಗುತ್ತಿದ್ದಂತೆಯೇ 2024ರಲ್ಲಿ ಸಾಂಪ್ರದಾಯಿಕ ಮಾಧ್ಯಮಗಳಾದ ಟಿವಿ, ಪತ್ರಿಕೆ ಮತ್ತು ರೇಡಿಯೋಗಳ ಆದಾಯ ಮತ್ತು ಮಾರುಕಟ್ಟೆ ಎರಡರಲ್ಲೂ ತೀವ್ರ ಕುಸಿತ ಕಂಡುಬಂದಿದೆ ಎಂದು ವರದಿ ಹೇಳಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮುಂತಾದ ಶಾರ್ಟ್-ಫಾರ್ಮ್ ವೀಡಿಯೊಗಳು, ಲೈವ್-ಸ್ಟ್ರೀಮಿಂಗ್‌ನಿಂದಾಗಿ ಭಾರತೀಯರು ಹೆಚ್ಚು ಸಮಯವನ್ನು ಅದಕ್ಕೆ ಮೀಸಲಿಡುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಇಬ್ಬರು ಯುವತಿಯನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ

5G ಬಳಕೆಯಲ್ಲಿಯೂ ಭಾರಿ ಏರಿಕೆ ಕಂಡುಬಂದಿದ್ದು, 2024ರಲ್ಲಿ 2.7 ಕೋಟಿ ಜನರು ಇದರ ಚಂದಾದಾರರಾಗಿದ್ದಾರೆ. ಇದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಹಳ್ಳಿಗಳಿಗೂ ಸಹ 5G ಇಂಟರ್ನೆಟ್‌ ಹಬ್ಬಿದ್ದು, ಒಟ್ಟು ಚಂದಾದಾರರ ಪೈಕಿ ಶೇ. 40ರಷ್ಟು ಜನರು ಗ್ರಾಮೀಣ ಭಾಗದವರಾಗಿದ್ದಾರೆ ಎಂದು EY ವರದಿ ಹೇಳಿದೆ.

ಲೈವ್‌ ಕ್ರಿಕೆಟ್‌, ಸಂಗೀತ ಕಾರ್ಯಕ್ರಮಗಳು ಕೂಡ ಡಿಜಿಟಲ್‌ ಮಾಧ್ಯಮದ ವ್ಯವಹಾರಗಳಿಗೆ ಗಮನಾರ್ಹ ಕೊಡುಗೆ ನೀಡಿವೆ. 2027ರ ಹೊತ್ತಿಗೆ ಡಿಜಿಟಲ್‌ ಮಾಧ್ಯಮದ ಮಾರುಕಟ್ಟೆ ಮೌಲ್ಯವು 3.1 ಲಕ್ಷ ಕೋಟಿ ರೂ.ಗಳಿಗೆ ಬೆಳೆಯುವ ಸಾಧ್ಯತೆಯನ್ನು EY ವರದಿ ಉಲ್ಲೇಖಿಸಿದೆ.

ಇಂಟರ್‌ನೆಟ್‌ ಬಳಕೆಯಲ್ಲಿ ಭಾರತವು ವಿಶ್ವದಲ್ಲಿಯೇ ಮೂರನೇ ಸ್ಥಾನ ಪಡೆದಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ಭಾರತ ಮೊದಲನೇ ಸ್ಥಾನಕ್ಕೆ ತಲುಪಿದರೂ ಅಚ್ಚರಿಪಡಬೇಕಿಲ್ಲ. ಆದರೆ ಈ ಡಿಜಿಟಲೀಕರಣದ ವ್ಯಾಮೋಹದಲ್ಲಿ ಭಾರತೀಯರು ತಮ್ಮ ಜೀವನವನ್ನು ವ್ಯಸನಯುಕ್ತಗೊಳಿಸುವ ಹಂತಕ್ಕೆ ತಲುಪದಿದ್ದರೆ ಸಾಕು.