ಶ್ರೀನಗರ: ಜಮ್ಮು(Jammu) ಮತ್ತು ಕಾಶ್ಮೀರದ(Kashmir) ಪೂಂಚ್(Poonch) ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ಒಳ ನುಸುಳಲು ಯತ್ನಿಸಿದ(Terrorist Encounter) ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ. ಪೂಂಚ್ ಜಿಲ್ಲೆಯ ಖಾರಿ ಕರ್ಮಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಂದು(ಜ.31) ಬೆಳಗ್ಗೆಯಿಂದ ಭಾರಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗ್ರೋಟಾ ಪ್ರಧಾನ ಕಚೇರಿಯ ವೈಟ್ ನೈಟ್ ಕಾರ್ಪ್ಸ್ ಗುರುವಾರ ರಾತ್ರಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕ ಚಲನವಲನವನ್ನು ಪತ್ತೆಹಚ್ಚಿದೆ. ಒಳನುಸುಳಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರನ್ನು ಎಚ್ಚರಿಕೆಯ ಸೇನೆ ಸದೆಬಡಿದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಸೇನೆಯು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಶಸ್ತ್ರಾಸ್ತ್ರ ವಶಕ್ಕೆ ಪಡೆದಿದೆ.
ಗುರುವಾರ ಜಮ್ಮು ಭಾಗದ ದೋಡಾ ಜಿಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದರು. ನಂತರ ಭದ್ರತಾ ಪಡೆಗಳು ಭಾರೀ ಶೋಧವನ್ನು ನಡೆಸಿವೆ. ದೋಡಾ ಕಾರ್ಯಾಚರಣೆಗಿಂತ ಒಂದು ದಿನ ಮುಂಚಿತವಾಗಿ, ಭಯೋತ್ಪಾದಕರ ಭೂಪ್ರದೇಶದ ಕೆಲಸಗಾರರನ್ನು (OGWs) ಪತ್ತೆಹಚ್ಚಲು ಮತ್ತು ಬಂಧಿಸಲು ಭದ್ರತಾ ಪಡೆಗಳು ರಾಜೌರಿ ಜಿಲ್ಲೆಯ 25 ಸ್ಥಳಗಳಲ್ಲಿ ಶೋಧ ನಡೆಸಿದ್ದವು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Naxalites Encounter: ಛತ್ತೀಸ್‌ಗಢದಲ್ಲಿ ಎನ್ಕೌಂಟರ್; 12 ನಕ್ಸಲರ ಹೆಡೆಮುರಿ ಕಟ್ಟಿದ ಭದ್ರತಾ ಪಡೆ!
ಅಕ್ಟೋಬರ್ 20, 2024 ರಂದು, ಇಬ್ಬರು ಭಯೋತ್ಪಾದಕರು ಗಂದರ್ಬಾಲ್ ಜಿಲ್ಲೆಯ ಗಗಾಂಗೀರ್‌ನಲ್ಲಿರುವ ಕಾರ್ಮಿಕರ ಶಿಬಿರಕ್ಕೆ ಏಕಾಏಕಿ ನುಗ್ಗಿ ಗುಂಡು ಹಾರಿಸಿದ್ದರು. ದಾಳಿಯಲ್ಲಿ ಆರು ಸ್ಥಳೀಯೇತರ ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರು ಸೇರಿದಂತೆ ಏಳು ನಾಗರಿಕರು ದಾರುಣವಾಗಿ ಮೃತಪಟ್ಟಿದ್ದರು.