ಲಖನೌ: ರಜೆಯಲ್ಲಿ ಮಕ್ಕಳನ್ನು ಸಂಬಾಳಿಸೋದೇ ಪೋಷಕರಿಗೆ ದೊಡ್ಡ ಸವಾಲಿನ ಕೆಲಸ. ಇದೀಗ ಗಾಜಿಯಾಬಾದ್‌ನಲ್ಲಿ ಬಾಲಕನೊಬ್ಬ ಲಿಫ್ಟ್‌ನೊಳಗೆ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ. ಸೋಮವಾರ(ಮೇ 26) ಗಾಜಿಯಾಬಾದ್‌ನ ಕೌಶಂಬಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಲಿಫ್ಟ್‌ನೊಳಗೆ ಹೋದ ಬಾಲಕ ಲಿಫ್ಟ್‌ನ ಬಟನ್‍ಗಳನ್ನು ಒಂದೇ ಸಮನೆ ಒತ್ತಿದ ಕಾರಣ ಈ ಅನಾಹುತ ಸಂಭವಿಸಿದೆ. ಲಿಫ್ಟ್ ಕೆಟ್ಟು ನಿಂತಾಗ ಬಾಲಕ ಹೊರಗೆ ಬರಲು ಆಗದೇ ಭಯದಿಂದ ಕಿರುಚಾಡಿದ್ದಾನೆ. ಕೊನೆಗೆ ಲಿಫ್ಟ್ ಸರಿಮಾಡಿ ಬಾಲಕನನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಹುಡುಗ ಲಿಫ್ಟ್‌ನ ಬಟನ್‍ಗಳನ್ನು ಒಂದೇ ಸಮನೆ ಒತ್ತುತ್ತಿರುವುದು ಸೆರೆಯಾಗಿದೆ. ಹುಡುಗ ಆಟವಾಡುತ್ತಾ ಲಿಫ್ಟ್‌ನೊಳಗೆ ಹೋಗಿ ಬಟನ್‍ಗಳನ್ನು ಒತ್ತಿದ್ದಾನೆ. ಲಿಫ್ಟ್ ಚಲಿಸಲು ಶುರುವಾಗುತ್ತಿದ್ದಂತೆ, ಬಾಲಕ ತನ್ನ ಕೈಗಳಿಂದ ಬಾಗಿಲನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದ್ದಾನೆ. ಇದರಿಂದಾಗಿ ಲಿಫ್ಟ್ ನಿಂತುಹೋಯಿತು. ಇದರಿಂದ ಹೆದರಿದ ಬಾಲಕ ಸಹಾಯಕ್ಕಾಗಿ ಕೂಗಿದ್ದಾನೆ. ಆತ ಲಿಫ್ಟ್ ಒಳಗೆ ಸಿಲುಕಿಕೊಂಡ ಸುಮಾರು ಏಳು ನಿಮಿಷಗಳ ನಂತರ, ಲಿಫ್ಟ್ ಸರಿ ಮಾಡಿ ಹುಡುಗನನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಇತ್ತೀಚೆಗೆ ನೋಯ್ಡಾ ಎಕ್ಸ್‌ಟೆನ್ಶನ್‌ನಲ್ಲಿರುವ ಆಸ್ಪತ್ರೆಯಲ್ಲಿ ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸಿದ ಕಾರಣ ಆಸ್ಪತ್ರೆಯ ಲಿಫ್ಟ್ ನೊಳಗೆ ವೃದ್ಧ ಮಹಿಳೆ ಸೇರಿದಂತೆ ಹದಿನಾರು ಜನರು ಸಿಲುಕಿಕೊಂಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಎಲ್ಲರೂ ಅಲ್ಲೆ ಸಿಲುಕಿಕೊಂಡಿದ್ದು, ನಂತರ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲಾಗಿದೆ.
ಈ ಹಿಂದೆ ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರ್ ಹೋಮ್ಸ್ ಸೊಸೈಟಿಯಲ್ಲಿ ರಾತ್ರಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಹಲವಾರು ಜನರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಸೊಸೈಟಿಯ ನಿವಾಸಿಗಳು ರಕ್ಷಿಸಿದ್ದಾರೆ. ಲಿಫ್ಟ್‌ನ ಸರಿಯಾದ ನಿರ್ವಹಣೆ ಮಾಡದಿರುವುದು ಈ ಘಟನೆಗೆ ಕಾರಣ ಎಂದು ಅದರಲ್ಲಿ ಸಿಲುಕಿದ್ದ ಜನರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಮೂವರು ಯುವಕರ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು; ಶಾಕಿಂಗ್ ವಿಡಿಯೊ ಇಲ್ಲಿದೆ
ಹಾಗೇ ಮುಂಬೈನಲ್ಲಿ ಲಿಫ್ಟ್ ಕುಸಿದು 8 ಜನರು ಗಾಯಗೊಂಡಿದ್ದರು. ಮುಂಬೈನ ಹೈರೈಸ್ ಸೊಸೈಟಿಯಲ್ಲಿ ನಾಲ್ಕನೇ ಮಹಡಿಯಿಂದ ಲಿಫ್ಟ್ ಕೆಳಗೆ ಬಿದ್ದಿದೆ. ಇದರ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದರು.