ದೆಹಲಿ: ಭವಿಷ್ಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭೂಕಂಪನ (Earthquake) ಉಂಟಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು (Study report) ಹೇಳಿದೆ. ಮುಖ್ಯವಾಗಿ ಭಾರತದ ಏಳು ಪ್ರಮುಖ ನಗರಗಳಲ್ಲಿ ಭೂಕಂಪನವಾಗಲಿದ್ದು, ಇದರಿಂದ ಭಾರಿ ವಿಪತ್ತು ಎದುರಾಗಬಹುದು ಎನ್ನುವ ಎಚ್ಚರಿಕೆಯನ್ನು ಈ ಅಧ್ಯಯನ ವರದಿಯಲ್ಲಿ ನೀಡಲಾಗಿದೆ. ಈ ಏಳು ನಗರಗಳಲ್ಲಿ ಮುಂಬೈ (Mumbai), ದೆಹಲಿ (Delhi), ಕೋಲ್ಕತಾ (Kolkata), ಚೆನ್ನೈ (Chennai), ಹೈದರಾಬಾದ್ (Hyderabad), ಪುಣೆ (Pune) ಮತ್ತು ಲಖನೌ (Lucknow) ಸೇರಿವೆ. ಈ ಪ್ರದೇಶಗಳು ಭೂಕಂಪನಗಳಿಗೆ ಒಳಗಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮುಂಬೈ, ಅಹಮದಾಬಾದ್ ವಿವಿಧ ಭಾಗಗಳು ಸೇರಿದಂತೆ ಭಾರತದ ಏಳು ನಗರಗಳು ಮುಂದೆ ಪಾಕೃತಿಕ ವಿಕೋಪಕ್ಕೆ ಗುರಿಯಾಗಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ. ಈ ಮೂಲಕ ಭೂಕಂಪಗಳಿಗೆ ಪರಿಸ್ಥಿತಿಯನ್ನು ಎದುರಿಸಲು ಈ ನಗರಗಳು ಸಿದ್ಧಗೊಳ್ಳಬೇಕಿದೆ ಎಂದು ವರದಿ ತಿಳಿಸಿದೆ.
ಮುಖ್ಯವಾಗಿ ಹೆಚ್ಚಿನ ಜನವಸತಿ ಪ್ರದೇಶಗಳಾಗಿರುವ ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಲಖನೌದ ವಿವಿಧ ಭಾಗಗಳು ಭೂಕಂಪಗಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ವಿವರಿಸಿದೆ.
ಭೂಕಂಪನದಿಂದಾಗಿ ಉಂಟಾಗುವ ಅಪಾರ ಪ್ರಮಾಣದ ಆರ್ಥಿಕ ಮತ್ತು ಮಾನವೀಯ ನಷ್ಟಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತವನ್ನು ಐದು ಭೂಕಂಪ ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ವಲಯ 5ರಲ್ಲಿ ಕಾಶ್ಮೀರ, ಹಿಮಾಲಯ, ಬಿಹಾರ, ಉತ್ತರಪೂರ್ವ ಭಾರತ ಮತ್ತು ಗುಜರಾತ್‌ನ ಕಚ್ಚ್ ಇದೆ. ಇಲ್ಲಿ ಭೂಕಂಪ ನಿರೋಧಕ ಮಾನದಂಡಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಪ್ರದೇಶಗಳಲ್ಲಿ ವಿಪತ್ತುಗಳ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳು ಈ ತುರ್ತು ಪರಿಸ್ಥಿತಿಗೆ ಸನ್ನದ್ಧವಾಗಿರಬೇಕು ಎಂದು ತಜ್ಞರು ಕರೆ ನೀಡಿದ್ದಾರೆ.
ಈ ಅಧ್ಯಯನದ ಮುಖ್ಯ ಉದ್ದೇಶ ಜನರ ಸುರಕ್ಷತೆ ಮತ್ತು ಆಸ್ತಿಗಳನ್ನು ರಕ್ಷಿಸುವುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.