ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಈ ನಗರ ವಿಶ್ವದಲ್ಲೇ ಅತ್ಯಂತ ಕಲುಷಿತ ಪ್ರದೇಶ! IQAir ಬಿಡುಗಡೆ ಮಾಡಿದ ವರದಿಯಲ್ಲಿ ಯಾವ್ಯಾವ ದೇಶಗಳಿವೆ?

Most polluted city in World : ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಒಂದು ನಗರ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅಂದಹಾಗೆ ಇದು ದೆಹಲಿಯಲ್ಲ. ದೆಹಲಿಯನ್ನೇ ಮೀರಿಸುವ ಇನ್ನೊಂದು ನಗರ ಅಗ್ರ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹೊರವಲಯದಲ್ಲಿರುವ ಲೋನಿ ವಿಶ್ವದಲ್ಲೇ ಅತ್ಯಂತ ಕಲಷಿತ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಒಂದು ನಗರ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅಂದಹಾಗೆ ಇದು ದೆಹಲಿಯಲ್ಲ. ದೆಹಲಿಯನ್ನೇ ಮೀರಿಸುವ ಇನ್ನೊಂದು ನಗರ ಅಗ್ರ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹೊರವಲಯದಲ್ಲಿರುವ ಲೋನಿ ವಿಶ್ವದಲ್ಲೇ ಅತ್ಯಂತ ಕಲಷಿತ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಮಾರ್ಚ್ 24 ರಂದು ಬಿಡುಗಡೆಯಾದ IQAir ನ 2025 ರ ವಿಶ್ವ ವಾಯು ಗುಣಮಟ್ಟ ವರದಿಯಿಂದ ಈ ಪಟ್ಟಿ ಬಿಡುಗಡೆಯಾಗಿದೆ.

ಸ್ವಿಸ್ ಸಂಸ್ಥೆ 'IQAir' ಬಿಡುಗಡೆ ಮಾಡಿದ 2025ರ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಭಾರತ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ಮೇಘಾಲಯದ ಬೈರ್ನಿಹಾಟ್ (Byrnihat) ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದ್ದು ದಿಲ್ಲಿಯು ನಾಲ್ಕನೇ ಸ್ಥಾನದಲ್ಲಿದೆ. 2025ರಲ್ಲಿ ಜಗತ್ತಿನ ಕೇವಲ ಶೇ. 14ರಷ್ಟು ನಗರಗಳು ಮಾತ್ರ WHO ಸೂಚಿಸಿದ PM2.5 ಮಾನದಂಡಗಳನ್ನು ತಲುಪಲು ಸಾಧ್ಯವಾಗಿದೆ.

ಗಾಜಿಯಾಬಾದ್‌ನ ಹೊರವಲಯದಲ್ಲಿರುವ ಲೋನಿ ನಗರದ ವಾರ್ಷಿಕ ಸರಾಸರಿ PM2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 112.5 ಮೈಕ್ರೋಗ್ರಾಂಗಳಷ್ಟು ದಾಖಲಾಗಿದೆ. ಇದು 2024ಕ್ಕೆ ಹೋಲಿಸಿದರೆ ಶೇ. 23ರಷ್ಟು ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಸುರಕ್ಷಿತ ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪ್ರದೇಶ ಜನನಿಬಿಡ ಹಾಗೂ ಕೈಗಾರಿಕಾ ಘಟಕಗಳಿಂದ ಕೂಡಿದ್ದ ವಾಣಿಜ್ಯ ವಹಿವಾಟು ಹೆಚ್ಚಿನದಾಗಿ ಕಾಣಸಿಗುತ್ತದೆ. ಪಂಜಾಬ್, ಹರಿಯಾಣಗಳಲ್ಲಿ ಕೊಳೆಯನ್ನು ಸುಡುವುದು ಉತ್ತರ ಭಾರತದ ಮಾಲಿನ್ಯವನ್ನು ಶೇಕಡಾ 60ರಷ್ಟು ಹೆಚ್ಚಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Karnataka Weather: ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ವಿಶ್ವದ ನಾಲ್ಕು ಅತ್ಯಂತ ಕಲುಷಿತ ನಗರಗಳಲ್ಲಿ ಮೂರು ಭಾರತದಲ್ಲಿವೆ. ಮಧ್ಯ ಮತ್ತು ದಕ್ಷಿಣ ಏಷ್ಯಾವು ಜಾಗತಿಕವಾಗಿ ಅತ್ಯಧಿಕ ವಾರ್ಷಿಕ ಸರಾಸರಿ PM2.5 ಸಾಂದ್ರತೆಯನ್ನು ಹೊಂದಿದೆ. ವಿಶ್ವದ 20 ಅತ್ಯಂತ ಕಲುಷಿತ ನಗರಗಳಲ್ಲಿ 17 ಈ ಪ್ರದೇಶದಲ್ಲಿವೆ. "2025 ರ ವರದಿಯಲ್ಲಿ ಸೇರಿಸಲಾದ 10 ಪ್ರಾದೇಶಿಕ ದೇಶಗಳಲ್ಲಿನ 358 ನಗರಗಳಲ್ಲಿ, 71 ನಗರಗಳು ವಾರ್ಷಿಕ ಸರಾಸರಿ ಸಾಂದ್ರತೆಯು 50 µg/m³ ಮೀರಿದೆ. ಪಾಕಿಸ್ತಾನವು ವಿಶ್ವದ ಅತ್ಯಂತ ಕಲುಷಿತ ದೇಶವೆಂದು ಸ್ಥಾನ ಪಡೆದಿದೆ, PM2.5 ಮಟ್ಟವು WHO ಮಿತಿಗಿಂತ 13 ಪಟ್ಟು ಹೆಚ್ಚಾಗಿದೆ.

Vishakha Bhat Heggar

View all posts by this author